ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಿದ ಉಸ್ತುವಾರಿ

Last Updated 7 ನವೆಂಬರ್ 2017, 8:57 IST
ಅಕ್ಷರ ಗಾತ್ರ

ಮಂಗಳೂರು: ಮೈಸೂರು ವಿಭಾಗದ ಉಸ್ತುವಾರಿಯಾಗಿರುವ ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ನಿಯೋಜಿಸಿರುವ ಜಿಲ್ಲಾ ಉಸ್ತುವಾರಿಗಳು, ಸಚಿವರು ಶಾಸಕರೊಂದಿಗೆ ನಗರದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನದಲ್ಲಿ ಪಾಲ್ಗೊಂಡ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್‌ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದರು.

ಆರಂಭದಲ್ಲಿ ಕಾವೂರು ವೃತ್ತ ದಿಂದ ಆಕಾಶಭವನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದ ವೇಣುಗೋಪಾಲ್‌, ಅಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿ ದರು. ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್, ಸಚಿವರಾದ ಬಿ.ರಮಾ ನಾಥ ರೈ, ಯು.ಟಿ.ಖಾದರ್, ಶಾಸಕ ಬಿ.ಎ.ಮೊಯಿದ್ದೀನ್‌ ಬಾವ, ಮೇಯರ್‌ ಕವಿತಾ ಸನಿಲ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಯು.ಬಿ.ವೆಂಕ ಟೇಶ್, ಜಿ.ಸಿ.ಚಂದ್ರಶೇಖರ್‌, ಕೆಪಿಸಿಸಿ ಕಾರ್ಯದರ್ಶಿಗಳು, ಸ್ಥಳೀಯ ಪಾಲಿಕೆ ಸದಸ್ಯ ದೀಪಕ್‌ ಪೂಜಾರಿ ಸೇರಿದಂತೆ ಹಲವರು ಜೊತೆಗಿದ್ದರು.

ಭೇಟಿ ನೀಡಿದ ಎಲ್ಲ ಮನೆಗಳಲ್ಲೂ ಪಕ್ಷದ ಮುಖಂಡರು ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನದಡಿ ತಮ್ಮನ್ನು ಭೇಟಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಮತಗಟ್ಟೆ ಹಂತದ ಸಮಿತಿಯ ಅಧ್ಯಕ್ಷರನ್ನು ಖುದ್ದಾಗಿ ಕರೆಸಿಕೊಂಡು ಆ ಬಗ್ಗೆ ವಿವರ ಪಡೆ ದರು. ಯಾವ ಮುಖಂಡರು ಪಕ್ಷ ಸಂಘಟನೆಯಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಯನ್ನು ಮತದಾರರಿಂದಲೇ ಕಲೆಹಾಕಲು ವೇಣುಗೋಪಾಲ್ ಯತ್ನಿಸಿದರು.

ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಚುನಾವಣಾ ಪ್ರಣಾಳಿಕೆ ಯಲ್ಲಿನ ಭರವಸೆಗಳ ಈಡೇರಿಕೆ ಕುರಿತ ಮಾಹಿತಿಯನ್ನು ಒಳಗೊಂಡ ಕೈಪಿಡಿ ಯನ್ನು ಮತದಾರರಿಗೆ ವಿತರಿಸಿದ ಮುಖಂಡರು, ಮುಂಬರುವ ಚುನಾ ವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾರ್ಯಕರ್ತರೊಂದಿಗೆ ಉಪಾಹಾರ: ಆಕಾಶಭವನದ ಬ್ರಹ್ಮಲಿಂಗೇಶ್ವರ ದೇವ ಸ್ಥಾನದ ಆವರಣದಲ್ಲಿ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ವೇಣುಗೋಪಾಲ್‌ ಮತ್ತು ಆಯ್ದ ಕೆಲವು ಪ್ರಮುಖರಿಗೆ ಪಕ್ಕದ ಮನೆ ಯೊಂದರಲ್ಲಿ ಉಪಾಹಾರಕ್ಕೆ ವ್ಯವಸ್ಥೆ ಯಾಗಿತ್ತು. ಮನೆ ಯಲ್ಲಿ ಕುಳಿತು ಉಪಾಹಾರ ಸೇವಿಸಲು ನಿರಾಕರಿಸಿದ ಅವರು, ಕಾರ್ಯಕರ್ತರ ನಡುವಿನಲ್ಲೇ ಕುಳಿತು ಕೊಂಡರು. ಬಳಿಕ ಅಲ್ಲಿಗೇ ಉಪಾಹಾರ ಪೂರೈಸಲಾಯಿತು. ಉಪಾಹಾರಕ್ಕೂ ಮೊದಲು ಪ್ರಮುಖ ಮುಖಂಡರು ದೇವರ ದರ್ಶನ ಪಡೆದರು.

ಉಪಾಹಾರ ಸೇವಿಸುತ್ತಲೇ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ವೇಣುಗೋಪಾಲ್, ಪಕ್ಷ ಸಂಘಟನೆಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸದ ಮುಖಂ ಡರ ಕುರಿತು ಜಿಲ್ಲಾ ಕಾಂಗ್ರೆಸ್‌ ಸಮಿತಿ ಯಿಂದ ವರದಿ ಪಡೆಯುವುದಾಗಿ ತಿಳಿಸಿದರು.

ಅಸೈಗೋಳಿಗೆ ಭೇಟಿ: ಕಾವೂರಿನ ಬಳಿಕ ಉಳ್ಳಾಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಸೈಗೋಳಿ ಗ್ರಾಮಕ್ಕೆ ತೆರಳಿದ ವೇಣುಗೋಪಾಲ್‌ ಮತ್ತು ತಂಡ, ಅಲ್ಲಿಯೂ ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಪಕ್ಷದ ಪರವಾಗಿ ಮತದಾ ರರನ್ನು ಭೇಟಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT