ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲರಿಗೂ ಬ್ಯಾಂಕ್‌ ವ್ಯವಹಾರ ಮಾಹಿತಿ ಅಗತ್ಯ’

Last Updated 8 ನವೆಂಬರ್ 2017, 9:02 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಹಿರೇಮನ್ನಾಪುರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವತಿಯಿಂದ ಗುಮಗೇರಾ ಗ್ರಾಮದಲ್ಲಿ ಈಚೆಗೆ ಸ್ವಸಹಾಯ ಸಂಘಗಳ ಸದಸ್ಯರಿಗೆ ಬ್ಯಾಂಕ್‌ ಸೇವೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಶಾಖೆ ವ್ಯವಸ್ಥಾಪಕ ಚಂದ್ರಶೇಖರ ಹುನಗುಂದ ಮಾತನಾಡಿ, ‘ಎಲ್ಲ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಜೋಡಿಸಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ವ್ಯವಹಾರದ ಮಾಹಿತಿಯನ್ನು ಎಸ್‍ಎಂಎಸ್ ಮೂಲಕ ದೊರೆಯುತ್ತದೆ. ನಗದು ವರ್ಗಾವಣೆ, ಸರ್ಕಾರದಿಂದ ಬರುವ ವಿವಿಧ ಹಣಕಾಸು ಸೌಲಭ್ಯಗಳನ್ನು ವರ್ಗಾಯಿಸುವುದಕ್ಕೆ ಆಧಾರ್ ಸಂಖ್ಯೆ ಅಗತ್ಯವಾಗಿರುತ್ತದೆ’ ಎಂದರು.

‘ಆಧಾರ್ ಸಂಖ್ಯೆ ಜೋಡಣೆಯಾಗಿದ್ದರೆ ಬ್ಯಾಂಕಿನ ವ್ಯವಹಾರ ಪ್ರತಿನಿಧಿ ಮೂಲಕ ₹10,000 ವರೆಗಿನ ಹಣ ಪಾವತಿಸುವ ಅಥವಾ ಹಿಂಪಡೆಯುವುದಕ್ಕೆ ಅವಕಾಶವಿದೆ’ ಎಂದು ತಿಳಿಸಿದರು. ಬ್ಯಾಂಕಿನಿಂದ ರೈತರು, ಸ್ವಸಹಾಯ ಗುಂಪುಗಳಿಗೆ ದೊರೆಯುವ ಸೌಲಭ್ಯಗಳನ್ನು ಕುರಿತು ವಿವರಿಸಿ, ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.

ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ದೊಡ್ಡಪ್ಪ ಜ್ಯೋತಿ ಮಾತನಾಡಿ, ‘ಆದಾಯದ ಮಿತಿಯಲ್ಲಿ ಬದುಕಬೇಕು. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಉಳಿತಾಯ ಮಾಡಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮನವ್ವ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಶರಣಗೌಡ ಪಾಟೀಲ, ಮುತ್ತಣ್ಣ ಹೂಗಾರ, ಹನುಮಂತಪ್ಪ ಭಾವಿಕಟ್ಟಿ, ಬ್ಯಾಂಕ್ ಸಿಬ್ಬಂದಿ ರವಿತೇಜ, ಶರಣಪ್ಪ ಮರಳಿ, ಶಿವು ದೋಟಿಹಾಳ, ಬ್ಯಾಂಕ್ ವ್ಯವಹಾರ ಪ್ರತಿನಿಧಿಗಳಾದ ಬಸವರಾಜ, ದೊಡ್ಡಬಸಪ್ಪ ಅಂಗಡಿ ಇದ್ದರು. ಶರಣಪ್ಪ ಗುರಿಕಾರ ಸ್ವಾಗತಿಸಿದರು. ಹನಮಕ್ಕ ಜರಗಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT