ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಕಾಮಗಾರಿ; ಅಸಮಾಧಾನ

Last Updated 9 ನವೆಂಬರ್ 2017, 8:40 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಇಲ್ಲಿನ ಅಯ್ಯಪ್ಪ ದೇವಸ್ಥಾನದ ಮುಂಭಾಗದ ಎಮ್ಮೆಗುಂಡಿ- ನಾಕೂರು ಶಿರಂಗಾಲಕ್ಕೆ ತೆರಳುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಜನಸಾಮಾನ್ಯರು ಮತ್ತು ವಾಹನ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಕಾಮಗಾರಿಗಾಗಿ ಎಮ್ಮೆಗುಂಡಿ ಗ್ರಾಮದ ನಾಟಿ ವೈದ್ಯ ರಾಮೇಗೌಡ ಸೇರಿದಂತೆ ಈ ಭಾಗದ ಜನರು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ರಸ್ತೆ ಕಾಮಗಾರಿ ವಿಳಂಬ: ಗ್ರಾಮಸ್ಥರ ಒತ್ತಡದದಿಂದಾಗಿ 2005ರಲ್ಲಿ ಈ ರಸ್ತೆ ವಿಸ್ತರಣೆಗಾಗಿ ಶಾಸಕರ ನಿಧಿಯಿಂದ ₹ 5 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿತ್ತು.
ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರು ರಸ್ತೆಯ 2 ಬದಿಗಳನ್ನು ವಿಸ್ತರಣೆ ಮಾಡಿ ಡಾಂಬರೀಕರಣ ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಅಲ್ಲಲ್ಲಿ ಗುಂಡಿ ಬಿದ್ದು ವಾಹನ ಚಾಲಕರು, ಸಾರ್ವಜನಿಕರು ಸಂಚರಿಸಲು ಹರಸಾಹಸ ಪಡುವಂತಾಗಿದೆ.

ರಸ್ತೆ ಕಾಮಗಾರಿ ಮಾಡದೆ ರಸ್ತೆಯನ್ನು ಅಗೆದು ಅರ್ಧಕ್ಕೆ ಬಿಟ್ಟಿದರಿಂದ ಮಳೆಗಾಲದಲ್ಲಿ ಈ ರಸ್ತೆ ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಕಾನ್‌ಬೈಲ್, ನೆಟ್ಲಿ ‘ಬಿ’, ಎಮ್ಮೆಗುಂಡಿ ಭಾಗದ ಶಾಲಾ– ಕಾಲೇಜು ಮಕ್ಕಳು, ವಯೋವೃದ್ಧರು ಈ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದೆ ಪರಿತಪಿಸುವುದು ಸರ್ವೇಸಾಮಾನ್ಯವಾಗಿದೆ.

ಅಲ್ಲದೇ ಈ ಭಾಗದ ಕೂಲಿ ಕಾರ್ಮಿಕರು ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಬಾಡಿಗೆ ವಾಹನವನ್ನು ಅವಲಂಬಿಸಬೇಕಾಗಿದೆ. ಆದರೆ, ರಸ್ತೆ ಸರಿ ಇಲ್ಲದ ಕಾರಣ ಬಾಡಿಗೆ ವಾಹನ ಚಾಲಕರು ಈ ರಸ್ತೆಯಲ್ಲಿ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಡಿಕೊಡಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT