ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ತಲ್ಲಣಗಳ 'ಪದ್ಮಾವತಿ' ಹಾಡು

Last Updated 15 ನವೆಂಬರ್ 2017, 7:18 IST
ಅಕ್ಷರ ಗಾತ್ರ

ಬೆಂಗಳೂರು: ರಾಣಿ ಪದ್ಮಾವತಿ ಮತ್ತು ರಾಜ ರತನ್‌ ಸಿಂಗ್‌ ನಡುವಿನ ಪ್ರೀತಿಯನ್ನುತೆರೆದಿಡುವ ಹಾಡು ಏಕ್‌ ದಿಲ್ ಏಕ್‌ ಜಾನ್‌. ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 15 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಎರಡನೇ ಹಾಡು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದೆ.

ಸೌಂದರ್ಯ ಹಾಗೂ ದಿಟ್ಟತನದ ಪ್ರತೀಕದಂತೆ ಕಾಣುವ ರಾಣಿ ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಂಡಿರುವ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರರಾಗಿದ್ದಾರೆ.

ಸಾಮ್ರಾಜ್ಯದ ಹೊಣೆ ಹೊತ್ತಿರುವ ಮಹರವಾಲ್‌ ರತನ್‌ ಸಿಂಗ್‌ ಪಾತ್ರದಲ್ಲಿರುವ ಶಾಹಿದ್‌ ಕಪೂರ್‌ ದಿಟ್ಟ ನೋಟದಲ್ಲಿಯೇ ಎಲ್ಲವನ್ನೂ ಹೇಳಿಸುವ ಪ್ರಯತ್ನ ಹಾಡಿನಲ್ಲಿ ವ್ಯಕ್ತವಾಗಿದೆ. ಯುದ್ಧ, ಸಂಭ್ರಮ, ಶಾಂತಿ, ಏಕಾಂತ,..ಹೀಗೆ ಭಿನ್ನ ಸನ್ನಿವೇಶಗಳಲ್ಲಿ ಪದ್ಮಾವತಿ–ರತನ್‌ ಸಿಂಗ್‌ ಪ್ರೀತಿಯ ರೀತಿಯನ್ನು 2.25 ನಿಮಿಷಗಳ ವಿಡಿಯೊದಲ್ಲಿ ಕಾಣಿಸಲಾಗಿದೆ.

ಅದ್ದೂರಿ ಸೆಟ್‌, ವಸ್ತ್ರ ವಿನ್ಯಾಸ, ಬನ್ಸಾಲಿ ಸಂಗೀತ, ಎಎಂ ತುರಾಜ್‌ ಗೀತ ರಚನೆ, ಶಿವಂ ಗಾಯನ ಎಲ್ಲದರ ಮಿಶ್ರಣ ಹದವಾಗಿ ಬೆರೆತಿದೆ.

ವರ್ಷದ ಬಹುನಿರೀಕ್ಷಿತ ಚಿತ್ರವೆಂದೇ ಪರಿಗಣಿಸಲಾಗಿರುವ ಪದ್ಮಾವತಿ ಡಿಸೆಂಬರ್‌ 1ರಂದು ತೆರೆಕಾಣಲಿದೆ. ಭಾರತದಲ್ಲಿ 8,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ವಯಕಾಂ18 ಸಿದ್ಧತೆ ನಡೆಸಿದೆ.

ಈ ನಡುವೆ ಸಿನಿಮಾವನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಅಲಹಾಬಾದ್‌ ಹೈಕೋರ್ಟ್ ನಿರಾಕರಿಸಿದ್ದು, ‘ಪದ್ಮಾವತಿ’ ಸಿನಿಮಾ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇತಿಹಾಸವನ್ನು ತಿರುಚಿದ್ದಾರೆ ಎಂದು ಆರೋಪಿಸಿ ಧಾರ್ಮಿಕ ಸಂಘಟನೆಗಳು ಈ ಹಿಂದೆ ಚಿತ್ರೀಕರಣದ ಸೆಟ್‌ ಮೇಲೆ ದಾಳಿ ನಡೆಸಿದ್ದಲ್ಲದೆ, ಬನ್ಸಾಲಿ ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದರು. ಪರಿಣಾಮವಾಗಿ, ಜೈಪುರದಿಂದ ಚಿತ್ರೀಕರಣ ಸೆಟ್‌ನ್ನು ಎತ್ತಂಗಡಿ ಮಾಡಲಾಗಿತ್ತು.

ರಣವೀರ್‌ ಸಿಂಗ್‌, ಅದಿತಿ ರಾವ್‌ ಹೈದರಿ ಸೇರಿ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT