ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಬೆಹಣ್ಣಿನಂಥ ಹುಡುಗಿಗೆ 50

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಪ್ರೇಮಲೋಕ’ ಸಿನಿಮಾ ನೋಡಿದ್ದೀರಾ? ಜೂಹಿ ಚಾವ್ಲಾ ನೆನಪಾಯ್ತಾ? ಅದೇ ಆ ’ನಿಂಬೆಹಣ್ಣಿನಂಥ ಹುಡುಗಿ’ ಹಾಡಿನಲ್ಲಿ ಮಿಂಚಿದ್ದ ಮೋಹಕ ತಾರೆ. ಕನ್ನಡಿಗರಿಗೆ ಇಂದಿಗೂ ಜೂಹಿ ಚಾವ್ಲಾ ಅಂದ್ರೆ ಇದೇ ಹಾಡು ನೆನಪಾಗುತ್ತೆ. ಹಾಡಿನಲ್ಲಿ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದ ಇಂದು (ನ.13) 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

‘ಸುಲ್ತಾನಾತ್’ (1986) ಮೂಲಕ ಬೆಳ್ಳಿತೆರೆಗೆ ಬಂದ ಅವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ‘ಪ್ರೇಮಲೋಕ’ ಜೂಹಿ ಅವರ ಚಿತ್ರ ಬದುಕಿನ ಎರಡನೇ ಚಿತ್ರ. ಇದರ ಜೊತೆ ‘ಶಾಂತಿಕ್ರಾಂತಿ’ ಚಿತ್ರದಲ್ಲಿ ಮತ್ತೊಮ್ಮೆ ರವಿಚಂದ್ರನ್‌ ಜೊತೆಗೆ ಅವರು ನಟಿಸಿದರು.

ಪಂಜಾಬಿ, ತೆಲುಗು, ತಮಿಳು, ಬಂಗಾಲಿ, ಮಳೆಯಾಳಂ ಭಾಷಾ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. 1984ರ ‘ಮಿಸ್‌ ಇಂಡಿಯಾ’ ವಿಜೇತೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT