ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರಿಗೂ ಸೌಲಭ್ಯ ಕೊಡಿ

Last Updated 12 ನವೆಂಬರ್ 2017, 19:04 IST
ಅಕ್ಷರ ಗಾತ್ರ

ಸಂವಿಧಾನದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿಗೆ ಅನ್ವಯವಾಗಿ ಸರ್ಕಾರ 6 ರಿಂದ 14ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಇಂಥ ಮಕ್ಕಳು ಓದುವ ಶಾಲೆಗಳ ನಿರ್ವಹಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಇದೆ. ಅದಕ್ಕೆ ಅನುದಾನ, ಶಿಕ್ಷಕರಿಗೆ ಸಂಬಳ, ಮಕ್ಕಳಿಗೆ ಊಟ–ಹಾಲು... ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಆದರೆ ಅದೇ ವಯೋಮಾನದ ‘ವಿಶೇಷ’ ಮಕ್ಕಳಿಗೆ ಹಾಗೂ ಅವರಿಗೆ ಶಿಕ್ಷಣ ಕೊಡುವ ಶಿಕ್ಷಕರಿಗೆ ಈ ಯಾವ ಸೌಲಭ್ಯವೂ ಇಲ್ಲ. ಇವರಿಗಾಗಿ ಒಂದು ಪ್ರತ್ಯೇಕ ಇಲಾಖೆ ಇಲ್ಲ. ಬೇರೆ ಬೇರೆ ಇಲಾಖೆಗಳ ಮೂಲಕ ಜಿಲ್ಲಾ ಮಟ್ಟದಲ್ಲಿ ಇವರಿಗೆ ಕೆಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಆದರೆ ತಾಲ್ಲೂಕು ಮಟ್ಟದಲ್ಲಿ ಯಾವ ವ್ಯವಸ್ಥೆಯೂ ಇಲ್ಲ.

ಹಾಗಾದರೆ, ಸಂವಿಧಾನ ನೀಡಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ವಿಶೇಷ ಮಕ್ಕಳಿಗೆ ಅನ್ವಯವಾಗುವುದಿಲ್ಲವೇ? ವಿಶೇಷ ಮಕ್ಕಳ ಶಾಲೆಗಳನ್ನೂ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ತಂದು, ಇತರ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ನೀಡುವ ಸವಲತ್ತುಗಳನ್ನು ಇವರಿಗೂ ಕೊಡುವ ವ್ಯವಸ್ಥೆ ಆಗಬೇಕು.

–ಡಾ.ಜೆರಾಲ್ಡ್‌ ಪಿಂಟೊ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT