ಪಕ್ಷಾಂತರ ಪರ್ವಕ್ಕೆ ವೇದಿಕೆ ಸಿದ್ಧ

ಬಿಜೆಪಿಯತ್ತ ಮುಖ ಮಾಡಿದ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು?

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಪಕ್ಷಾಂತರ ಪರ್ವಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಂಟಕ್ಕೂ ಹೆಚ್ಚು ಶಾಸಕರು  ಬಿಜೆಪಿ ಸೇರಲು ಅಣಿಯಾಗಿದ್ದಾರೆ.

ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಪಕ್ಷಾಂತರ ಪರ್ವಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಂಟಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲು ಅಣಿಯಾಗಿದ್ದಾರೆ.

ವಿಧಾನ ಮಂಡಲ ಅಧಿವೇಶನದ ವೇಳೆ ಮೊಗಸಾಲೆಯಲ್ಲಿ ಶಾಸಕರ ಮಧ್ಯ ನಡೆಯುತ್ತಿದ್ದ ಚರ್ಚೆ ಈ ವಿಷಯದ ಸುತ್ತ ಕೇಂದ್ರೀಕೃತವಾಗಿತ್ತು.

‘ಮುಂದೆ ನಾವೇ ಅಧಿಕಾರಕ್ಕೆ ಬರುವುದು. ನಮ್ಮ ಕಡೆ ಬನ್ನಿ’ ಎಂದು ಕಾಂಗ್ರೆಸ್‌, ಬಿಜೆಪಿ ಶಾಸಕರು ಪರಸ್ಪರರಿಗೆ ಆಹ್ವಾನ ನೀಡುತ್ತಿದ್ದುದು ಸಾಮಾನ್ಯವಾಗಿತ್ತು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಎಂಟಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲು ಅಣಿಯಾಗಿದ್ದಾರೆ. ಗುಜರಾತ್‌ ಚುನಾವಣೆಯ ಫಲಿತಾಂಶದ ಬಳಿಕ ಅವರು ಪಕ್ಷ ಸೇರಲಿದ್ದಾರೆ. ಆಸಕ್ತ ಶಾಸಕರ ಜತೆಗೆ ಮಾತುಕತೆ ನಡೆಸಲು ಹಿರಿಯ ನಾಯಕರ ತಂಡ ರಚಿಸಲಾಗಿದ್ದು, ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಯಾರು ಸೇರುತ್ತಾರೆ ಎಂಬುದನ್ನು ಬಹಿರಂಗಪಡಿಸದಂತೆ ಪಕ್ಷದ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಪ್ರಮುಖರೊಬ್ಬರು ತಿಳಿಸಿದರು.

ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇದನ್ನು ಗಮನಿಸಿರುವ ಬೇರೆ ಪಕ್ಷದ ಶಾಸಕರು ಸೇರಲು ಒಲವು ತೋರಿದ್ದಾರೆ ಎಂದೂ ಅವರು ಹೇಳಿದರು.

ಬಿಜೆಪಿ ತೊರೆಯಲು ಸಿದ್ಧತೆ: ಬಿಜೆಪಿಯಲ್ಲಿ ಟಿಕೆಟ್‌ ನೀಡುವ ಜವಾಬ್ದಾರಿಯನ್ನು ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರೇ ವಹಿಸಿಕೊಂಡಿದ್ದಾರೆ.  ಕೆಲವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಸ್ಥಿತಿ ಇದೆ. ಇದರ ಜತೆಗೆ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಮಾತನ್ನಷ್ಟೇ ಕೇಳುತ್ತಿದ್ದಾರೆ. ಹೀಗಾಗಿ ಅಲ್ಲಿ ಇದ್ದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇರುವುದರಿಂದ ಕೆಲವರು ಕಾಂಗ್ರೆಸ್‌ ಸೇರಲು ಉತ್ಸುಕರಾಗಿದ್ದಾರೆ. ಅವರ ಜತೆಯೂ ಮಾತುಕತೆ ನಡೆಯುತ್ತಿದೆ ಎಂದು ಆ ಪಕ್ಷದ ಪ್ರಮುಖರೊಬ್ಬರು ತಿಳಿಸಿದರು.

ಬಿಜೆಪಿಯತ್ತ ಪುಟ್ಟಣ್ಣ: ವಿಧಾನಪರಿಷತ್ತಿನ ಜೆಡಿಎಸ್ ಸದಸ್ಯ ಪುಟ್ಟಣ್ಣ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿರುವ ಅವರು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕರೆ ಪರಿಷತ್ತಿನ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

‘ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ. ಡಿಸೆಂಬರ್ 25 ರಂದು ಕ್ರಿಸ್‌ಮಸ್‌ ಇದೆ. ಅಂದು ನಿರ್ಧರಿಸುತ್ತೇನೆ’ ಎಂದು ಪುಟ್ಟಣ್ಣ  ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ನಾನು ಎಲ್ಲಿಗೇ ಹೋದರೂ ಈ ಸ್ವಚ್ಛತೆ, ಶುದ್ಧಿಕರಣವನ್ನು ನೀವು ಮುಂದುವರಿಸುತ್ತೀರಾ?: ನಟ ಪ್ರಕಾಶ್‌ ರೈ

ಪ್ರಕಾಶ್ ರೈ ಮಾತನಾಡಿದ್ದ ಸ್ಥಳ ಸ್ವಚ್ಛಗೊಳಿಸಿದ್ಧ ಬಿಜೆಪಿ
ನಾನು ಎಲ್ಲಿಗೇ ಹೋದರೂ ಈ ಸ್ವಚ್ಛತೆ, ಶುದ್ಧಿಕರಣವನ್ನು ನೀವು ಮುಂದುವರಿಸುತ್ತೀರಾ?: ನಟ ಪ್ರಕಾಶ್‌ ರೈ

16 Jan, 2018
ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿದ್ದರಾಮಯ್ಯ ಹೇಳಿಕೆ

‘ಚುನಾವಣೆ ಯುದ್ಧದಂತಿದೆ’
ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿದ್ದರಾಮಯ್ಯ ಹೇಳಿಕೆ

16 Jan, 2018
'ಮಹದಾಯಿ: ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ- ಜಗದೀಶ‌ ಶೆಟ್ಟರ್

ಹುಬ್ಬಳ್ಳಿ
'ಮಹದಾಯಿ: ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ- ಜಗದೀಶ‌ ಶೆಟ್ಟರ್

16 Jan, 2018
ತಾಯಿ ಸಾವಿನ ಸುದ್ದಿ ಕೇಳಿ ಪುತ್ರ ಆತ್ಮಹತ್ಯೆ: ಪೊಲೀಸರಿಗೆ ಸಿಕ್ಕಿರುವ ವಿಡಿಯೊದಲ್ಲಿ ಏನಿದೆ?

ಮೈಸೂರು
ತಾಯಿ ಸಾವಿನ ಸುದ್ದಿ ಕೇಳಿ ಪುತ್ರ ಆತ್ಮಹತ್ಯೆ: ಪೊಲೀಸರಿಗೆ ಸಿಕ್ಕಿರುವ ವಿಡಿಯೊದಲ್ಲಿ ಏನಿದೆ?

16 Jan, 2018
ಮಹದಾಯಿ ವಿಚಾರದಲ್ಲಿ ಕರ್ನಾಟಕ  ಸುಳ್ಳು ಹೇಳುತ್ತ ಬಂದಿದೆ: ಗೋವಾ ಸಚಿವ ವಿನೋದ ಪಾಲ್ಯೇಕರ್‌

ಪಣಜಿ
ಮಹದಾಯಿ ವಿಚಾರದಲ್ಲಿ ಕರ್ನಾಟಕ ಸುಳ್ಳು ಹೇಳುತ್ತ ಬಂದಿದೆ: ಗೋವಾ ಸಚಿವ ವಿನೋದ ಪಾಲ್ಯೇಕರ್‌

16 Jan, 2018