ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷದ ಕೊನೆಯ ಹಬ್ಬ: ಕಿರು ದೀಪಾವಳಿ ಹಬ್ಬ ಆಚರಣೆ

Last Updated 14 ನವೆಂಬರ್ 2017, 6:17 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಸೋಮವಾರ ಈ ವರ್ಷದ ಕೊನೆಯ ಹಬ್ಬ ಕಿರು ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಒಂದು ತಿಂಗಳ ಕಾಲ ದೀಪಾವಳಿ ಆಚರಣೆ ಮಾಡುತ್ತಾರೆ. ಎರಡು ದಿನಗಳ ಕಾಲ ಕಿರು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಸೋಮವಾರ ಸಿಹಿ ಊಟ ಹಾಗೂ ಮಂಗಳವಾರ ಮಾಂಸದೂಟ ಮಾಡುವುದು ಸಂಪ್ರದಾಯವಾಗಿದೆ.ಇದು ಈ ವರ್ಷದ ಕೊನೆಯ ಹಬ್ಬವಾಗಿದೆ.

ತಾಲ್ಲೂಕಿನ ವಡ್ನಾಳ್, ವಡ್ನಾಳ್ ಬನ್ನಿಹಟ್ಟಿ, ಬೆಟ್ಟಕಡೂರು, ಕಂಚಿಗನಾಳ್, ಮಲಹಾಳ್, ಜಮಾಪುರ, ಕೊಮಾರನಹಳ್ಳಿ, ಮರವಂಜಿ, ಮೇದುಗೊಂಡನಹಳ್ಳಿ, ಬೀಡುಗೊಂಡನಹಳ್ಳಿ, ವಡ್ನೇರಿ, ಮಸಣಿಕೆರೆ, ತಾವರೆಕೆರೆ, ದುರ್ವಿಗೆರೆ, ಕೊಡಕಿಕೆರೆ, ಅರಳಘಟ್ಟ, ಮಲ್ಲೇಶ್ವರ ಕ್ಯಾಂಪ್, ಬಸಾಪುರ, ಹನುಮಲಾಪುರ, ಗುರುರಾಜಪುರ, ಮಾದೇನಹಳ್ಳಿ, ಹರೋನಹಳ್ಳಿ, ಜೋಳದಹಾಳ್, ಬೆಂಕಿಕೆರೆ, ಹೆಬ್ಬಳಗೆರೆ, ಗಾಂಧಿನಗರ, ಶ್ರೀನಿವಾಸಪುರ, ಗರಗ, ಗಂಡಗನಹಂಕಲು, ರಾಜಗೊಂಡನಹಳ್ಳಿ ತಾಂಡಾ ಮುಂತಾದ ಗ್ರಾಮಗಳಲ್ಲಿ ಕಿರು ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.

ಕಿರು ದೀಪಾವಳಿ ಹಬ್ಬದ ಅಂಗವಾಗಿ ಸೋಮವಾರ ಮನೆಗಳ ಮುಂದೆ ಬಣ್ಣ ಬಣ್ಣದ ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸಿ, ಸೆಗಣಿಯಿಂದ ಮಾಡಿದ ಬೆನಕಪ್ಪನನ್ನು ಇಟ್ಟು, ಅದಕ್ಕೆ ವಿವಿಧ ರೀತಿಯ ಹೂವುಗಳನ್ನು ಚುಚ್ಚಿ, ಮನೆಯ ಅಂಗಳದಲ್ಲಿ ತಂಗಡಿಕೆ ಹಾಗೂ ಚೆಂಡು ಹೂವಿನ ಪಕಳೆಗಳನ್ನು ಚೆಲ್ಲುವ ಮೂಲಕ ಹಟ್ಟಿ ಹಾಕಲಾಗಿತ್ತು.

ನಂತರ ಹೋಳಿಗೆ ಮುಂತಾದ ಸಿಹಿ ಪದಾರ್ಥಗಳನ್ನು ತಯಾರಿಸಿಕೊಂಡು ಮನೆಮಂದಿಯೆಲ್ಲಾ ಒಂದೆಡೆ ಕುಳಿತು ಸಾಮೂಹಿಕ ಭೋಜನ ಮಾಡಿದರು. ರಾತ್ರಿ ಮಕ್ಕಳು ಪಟಾಕಿಗಳನ್ನು ಸಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT