ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸುವುದು ಅತ್ಯವಶ್ಯ

Last Updated 14 ನವೆಂಬರ್ 2017, 9:30 IST
ಅಕ್ಷರ ಗಾತ್ರ

ಇಂಡಿ: ‘ಕನ್ನಡ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ’ ಎಂದು ನಿವೃತ್ತ ಶಿಕ್ಷಕ ಎಸ್.ಎಂ.ಕಡಕೋಳ ಹೇಳಿದರು. ಪಟ್ಟಣದ ಶಾಂತೇಶ್ವರ ನಗರದಲ್ಲಿನ ಬಸವಣ್ಣ ದೇವರ ದೇವಸ್ಥಾನದಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಟಿವಿಯ ಅಬ್ಬರದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೀಣಿಸುತ್ತಿದೆ. ಹೀಗಾಗಿ ನಾಡಿನ ಇತಿಹಾಸ ಬಿಂಬಿಸುವ ಕಲೆ ಸಂಸ್ಕೃತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಉಳಿಸುವ ಕೆಲಸವಾಗಬೇಕು. ಗ್ರಾಮೀಣ ಭಾಗದಲ್ಲಿ ಮಾತ್ರ ಕನ್ನಡ ಜಾನಪದ ಕಲೆ ಕಾಣಸಿಗುತ್ತಿದ್ದು, ಇಲ್ಲಿಯ ಕಲಾಕಾರರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿ ಆಸಕ್ತಿ ಮೂಡಿಸುವುದು ಅತ್ಯಗತ್ಯ’ ಎಂದು ಹೇಳಿದರು.

ತಾಲ್ಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆರ್.ವಿ.ಪಾಟೀಲ ಮಾತನಾಡಿ, ‘ಸರ್ಕಾರ ಕಲಾವಿದರಿಗೆ ಮಾಶಾಸನ ನೀಡುತ್ತಿದ್ದು, ಅದನ್ನು ಪಡೆಯಲು ಪ್ರಮಾಣ ಪತ್ರಗಳನ್ನು ಆಯಾ ಗ್ರಾಮಗಳ ಸಂಘ, ಸಂಸ್ಥೆಯ ಸಂಘಟಕರಿಂದ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಈರನಗೌಡ ಪಾಟೀಲ, ಮಹಾದೇವಿ ಹಿರೇಮಠ, ಬಿ.ಎಸ್.ಪಾಟೀಲ, ಕೆ.ಬಿ.ತಮಶೆಟ್ಟಿ, ಎನ್.ಎ.ದಿಂಡೂರ, ವೈ.ಟಿ.ಪಾಟೀಲ, ಎಸ್.ಎಸ್.ಸ್ವಾಮಿ, ಕೆ.ಎ.ತೆಲಸಂಗ, ಎಂ.ಪಿ.ಬೈರಜಿ, ಎಚ್.ಎಸ್.ಏಳೆಗಾಂವ, ಆರ್.ಡಿ.ಖಂಡಾಳ, ಆರ್.ಎಸ್.ಬಿರಾದಾರ, ಎಸ್.ಕೆ.ಸೋನಕನಹಳ್ಳಿ, ಎನ್.ವೈ.ಕಾಡೆಗೊಳ, ಎಂ.ಬಿ.ಬಿರಾದಾರ, ಬಿ.ಆರ್.ಸ್ಥಾವರಮಠ, ಗುರನಗೌಡ ಪಾಟೀಲ ಉಪಸ್ಥಿತರಿದ್ದರು. ಸಿ.ಆರ್.ಮ್ಯಾಕೇರಿ ಸ್ವಾಗತಿಸಿದರು. ವೈ.ಜಿ.ಬಿರಾದಾರ ನಿರೂಪಿಸಿದರು. ಎಸ್.ಎಸ್.ಈರನಕೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT