ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತಿಗೆ ವಿದ್ಯುತ್‌, ಕುಡಿಯುವ ನೀರಿನ ಸಂಪರ್ಕ

Last Updated 14 ನವೆಂಬರ್ 2017, 9:31 IST
ಅಕ್ಷರ ಗಾತ್ರ

ಚಡಚಣ: ‘ಸ್ವಾತಂತ್ರ್ಯ ದೊರೆತು ಎಪ್ಪತ್ತು ವರ್ಷ ಕಳೆದರೂ ಪಟ್ಟಣದ ಹೊರವಲಯದಲ್ಲಿರುವ ಹಳ್ಳಿ ವಸ್ತಿಗೆ ವಿದ್ಯುತ್‌ ಸಂಪರ್ಕ ಇರಲಿಲ್ಲ. ನಾನು ಪಟ್ಟಣ ಪಂಚಾಯ್ತಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ವಸ್ತಿಗೆ ವಿದ್ಯುತ್‌, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇನೆ’ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬಾಬುಗೌಡ ಪಾಟೀಲ ಹೇಳಿದರು.

2017-18ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ₹4 ಲಕ್ಷ ವೆಚ್ಚದಲ್ಲಿ ಪಟ್ಟಣದ 9ನೇ ವಾರ್ಡ್‌ನ ಹೊರವಲಯದಲ್ಲಿರುವ ಹಳ್ಳಿ ವಸ್ತಿಗೆ ವಿದ್ಯುತ್‌, ಕುಡಿಯುವ ನೀರಿನ ಕೊಳವೆಬಾವಿ ಉದ್ಘಾಟಿಸಿ ಅವರು ಮಾತನಾಡಿದರು.

‘ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆ ಅಡಿ ಸುಮಾರು ₹72 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ, ಚರಂಡಿ ನಿರ್ಮಾಣ, ಸಾಮೂಹಿಕ ಶೌಚಾಲಯ ನಿರ್ಮಾಣದ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿದೆ. ಪಟ್ಟಣದ ತರಕಾರಿ ಮಾರುಕಟ್ಟೆ ಸುಧಾರಣೆಗಾಗಿ ₹ 5 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಧರ್ಮಣ್ಣ ಬನಸೋಡೆ, ಸದಸ್ಯ ಶಿವಾನಂದ ಖಟ್ಟಿ, ಮುಖಂಡರಾದ ಅಶೋಕ ಪಾಟೀಲ, ಪ್ರಕಾಶ ಪಾಟೀಲ, ರಾಮಚಂದ್ರ ಬಿರಾದಾರ, ಭಲಭೀಮ ಬಿರಾದಾರ, ಧರೆಪ್ಪ ಬಿರಾದಾರ, ಶಿವಣ್ಣ ಹಳ್ಳಿ, ಭೈರಪ್ಪ ಹಳ್ಳಿ, ಸಾಯಬಣ್ಣ ಹಳ್ಳಿ, ಲಕ್ಷ್ಮಣ ಹಳ್ಳಿ, ಮಹಾದೇವ ಹಳ್ಳಿ, ಬಾಬು ಹಳ್ಳಿ, ಮಾಹಾದೇವ ದೈವಾಡಿ, ಸಂಗು ಹಳ್ಳಿ, ಬಾಳು ಹಳ್ಳಿ, ರಾಜು ಹಳ್ಳಿ, ಪ್ರಕಾಶ ಹಳ್ಳಿ, ಅಪ್ಪು ಹಳ್ಳಿ, ಹಾಗೂ ಶಾಲಾ ಶಿಕ್ಷಕ ಬಸವರಾಜ ಶಿಂಪಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT