ದಿನದ ವಿಶೇಷ

ಬುಧವಾರ, ನವೆಂಬರ್ 15, 1967

ಮಹಾಜನ್ ಗಡಿ ಆಯೋಗದ ತೀರ್ಪನ್ನು ಪರಿಶೀಲಿಸಲು ರಾಜ್ಯದ ವಿಧಾನಮಂಡಲದ ತುರ್ತು ಅಧಿವೇಶನ ಜರುಗುವ ಸಂಭವವಿದೆ.

ವಿಧಾನಮಂಡಲದ ತುರ್ತು ಅಧಿವೇಶನ ಸಂಭವ

ಬೆಂಗಳೂರು, ನ. 14– ಮಹಾಜನ್ ಗಡಿ ಆಯೋಗದ ತೀರ್ಪನ್ನು ಪರಿಶೀಲಿಸಲು ರಾಜ್ಯದ ವಿಧಾನಮಂಡಲದ ತುರ್ತು ಅಧಿವೇಶನ ಜರುಗುವ ಸಂಭವವಿದೆ.

ವಿಧಾನಮಂಡಲದ ತುರ್ತು ಅಧಿವೇಶನವನ್ನು ಕರೆಯಬೇಕೆಂಬ ವಿರೋಧ ಪಕ್ಷಗಳ ಸಲಹೆಯನ್ನು ನವೆಂಬರ್ 17 ಅಥವಾ 18 ರಂದು ನಡೆಯುವ ಮಂತ್ರಿ ಮಂಡಲದ ಸಭೆ ಪರಿಶೀಲಿಸಲಿದೆ.

**

3 ದಿನಗಳ ಅಧಿವೇಶನ?

ಬೆಂಗಳೂರು, ನ. 14– ಗಡಿ ಆಯೋಗದ ತೀರ್ಪನ್ನು ಚರ್ಚಿಸಲು ವಿಧಾನ ಮಂಡಲದ ತುರ್ತು ಅಧಿವೇಶನ ನಡೆಸಲು  ಸರಕಾರ ನಿರ್ಧರಿಸಿದಲ್ಲಿ ಆ ಅಧಿವೇಶನ 3 ದಿನಗಳ ಕಾಲ ನಡೆಯುವುದೆಂದು ನಿರೀಕ್ಷಿಸಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ವಿಧಾನ ಮಂಡಲದ ಅಧಿವೇಶನ ಮುಕ್ತಾಯವಾದಾಗ ರಾಜ್ಯಪಾಲರು ಅಧಿವೇಶನವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹಾಕಿದರು.

**

ಅನಿರ್ಬಂಧಿತ ಸಕ್ಕರೆ ಮಾರಾಟ ಸುಗ್ರೀವಾಜ್ಞೆ: ಎಂ.ಪಿ.ಗಳ ಆಕ್ಷೇಪ

ನವದೆಹಲಿ, ನ. 14– ಸಕ್ಕರೆ ಕಾರ್ಖನೆಗಳು ತಮ್ಮ ಶೇ 40ರಷ್ಟು ಉತ್ಪಾದನೆಯನ್ನು ಬಹಿರಂಗವಾಗಿ ಪೇಟೆಯಲ್ಲಿ ಮಾರಲು ಅವಕಾಶ ಕೊಡುವ ಸುಗ್ರೀವಾಜ್ಞೆಯನ್ನು ವಿರೋಧ ಪಕ್ಷಗಳ ಸದಸ್ಯರು ಇಂದು ಲೋಕಸಭೆಯಲ್ಲಿ ಹೀಗಳೆದರು.

ಪಕ್ಷೇತರ ಸದಸ್ಯ ಎಸ್.ಎಂ. ಬ್ಯಾನರ್ಜಿಯವರು ಕಾಂಗ್ರೆಸ್ ‍ಪಕ್ಷಕ್ಕೆ ಸಕ್ಕರೆ ಉದ್ಯಮಿಗಳು ‘ಔದಾರ್ಯದಿಂದ’ ಕಾಣಿಕೆ ನೀಡಿರುವುದು ಈ ಸುಗ್ರೀವಾಜ್ಞೆಗೆ ಕಾರಣವೆಂದರು.

**

‘ಸಿ.ಕೆ.’ ಅಂತ್ಯಕ್ರಿಯೆ

ಇಂದೂರು, ನ. 14– ಇಂದು ಇಲ್ಲಿ ನಿಧನ ಹೊಂದಿದ ಖ್ಯಾತ ಕ್ರಿಕೆಟ್ ಆಟಗಾರ ಸಿ.ಕೆ. ನಾಯಿಡು (ಜನಪ್ರಿಯ ಹೆಸರು ‘ಸಿ.ಕೆ.’) ಅವರ ಅಂತ್ಯಕ್ರಿಯೆ ಇಲ್ಲಿನ ಪ್ರೇಂಬಾನ್ ರುದ್ರಭೂಮಿಯಲ್ಲಿ ನಡೆಯಿತು. ಅವರ ಹಿರಿಯ ಮಗ ಚಿತೆಗೆ ಅಗ್ನಿಸ್ಪರ್ಶ ಮಾಡಿದ.

Comments
ಈ ವಿಭಾಗದಿಂದ ಇನ್ನಷ್ಟು

50 ವರ್ಷಗಳ ಹಿಂದೆ
ಭಾನುವಾರ, 21–4–1968

ಮಂಗಳೂರು ಬಂದರು ಪ್ರದೇಶದಲ್ಲಿ ಇಂದು ಲೂಟಿ, ಗಲಭೆ, ಬೆಂಕಿ ಹಚ್ಚುವ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮುಂತಾದ ಯತ್ನಗಳಲ್ಲಿ...

21 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
20–4–1968

ಕೈಗಾರಿಕೆಗಳ ವೇತನ ಮಂಡಲಿಯ ಶಿಫಾರಸುಗಳ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಕೈಗಾರಿಕೆಯಲ್ಲಿ ವೇತನ ಸ್ಥಗಿತಗೊಳಿಸಬೇಕೆಂಬ ಮಹತ್ವದ ವಿಷಯವನ್ನು ಈ ವಾರಾಂತ್ಯದಲ್ಲಿ ಇಲ್ಲಿ ಸೇರಲಿರುವ ತ್ರಿಪಕ್ಷೀಯ ಕಾರ್ಮಿಕ...

20 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಶುಕ್ರವಾರ, 19–4–1968

ಅನಾಸ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಎರಡು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದಾಗ ಹನ್ನೆರಡು ಮಂದಿ ಸತ್ತು, ಆರು ಜನಕ್ಕೆ ಗಾಯವಾಯಿತೆಂದು ಅಧಿಕೃತ ವರದಿಗಳು...

19 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಗುರುವಾರ, 18–4–1968

ಎರಡು ಅಥವಾ ಮೂರು ವಾರಗಳೊಳಗೆ ರಾಜ್ಯದ ಹೊಸ ಮುಖ್ಯಮಂತ್ರಿಯ ಆಯ್ಕೆ ನಡೆಯುವುದು ಎಂಬ ಸ್ಪಷ್ಟ ಸೂಚನೆಯನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ತೆರಳಲಿರುವ ಶ್ರೀ ನಿಜಲಿಂಗಪ್ಪನವರು ಇಂದು...

18 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಮಂಗಳವಾರ, 16–4–1968

ರಾಜ್ಯಾಂಗದ 356ನೇ ವಿಧಿಯ ಪ್ರಕಾರ ರಾಷ್ಟ್ರಪತಿ ಡಾ. ಜಾಕಿರ್‌ಹುಸೇನರು ಘೋಷಣೆಯನ್ನು ಹೊರಡಿಸಿ ಉತ್ತರ ಪ್ರದೇಶ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

16 Apr, 2018