ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಲ್ಲಿ ಸಾಮಾಜಿಕ ಕಾಳಜಿ ಬೆಳೆಸಿ’

Last Updated 15 ನವೆಂಬರ್ 2017, 6:27 IST
ಅಕ್ಷರ ಗಾತ್ರ

ಕಮಲನಗರ: ಶಾಲಾ ಮಕ್ಕಳು ವ್ಯಾಸಂಗ ಅವಧಿಯಲ್ಲಿ ಪರಿಸರ, ನಾಡು–ನುಡಿ, ಮತ್ತು ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಓಂಕಾರ ಸೊಲ್ಲಾಪುರೆ ಹೇಳಿದರು.

ಪಟ್ಟಣದ ವಿಶ್ವಾಸನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್‌ ಪುಸ್ತಕ ವಿತರಿಸಿ ಮಾತನಾಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜನಾರ್ದನ್‌ ಸಾವರ್ಗೇಕರ್‌ ಮಾತನಾಡಿದರು. ಮುಖಂಡ ದಯಾನಂದ ವಡ್ಡೆ, ನಿತೀಶ್‌ ಮುಧೋಳಕರ್, ಮುಖ್ಯ ಶಿಕ್ಷಕಿ ಲತಾ ಸ್ವಾಮಿ, ಪಿ. ರಾಹು ಇದ್ದರು.

ಭಾಗೀರಥಿ ಪಬ್ಲಿಕ್‌ ಶಾಲೆ: ಪಟ್ಟಣದ ಭಾಗೀರಥಿ ಪಬ್ಲಿಕ ಶಾಲೆಯಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ನೆಹರು ಅವರ ಭಾವಚಿತ್ರಕ್ಕೆ ಮುಖ್ಯ ಶಿಕ್ಷಕ ನಿತಿನ್‌ ಶಿವಣಕರ್‌ ಪೂಜೆ ಸಲ್ಲಿಸಿದರು.

ರಕ್ಷಾಳ್‌ (ಬಿ): ಸಮೀಪದ ರಕ್ಷಾಳ್‌ (ಬಿ) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಹರು ಅವರ ಭಾವಚಿತ್ರಕ್ಕೆ ಎಸ್‌.ಡಿ.ಎಂ.ಸಿ ಅಧ್ಯಕ್ಷ ವಿನೋದಕುಮಾರ ಮಾನಕೋಜಿ ಪೂಜೆ ಸಲ್ಲಿಸಿದರು.

ಮುಖ್ಯ ಶಿಕ್ಷಕ ನೀಲಕಂಠ ಕೋಡಗೆ ಮಾತನಾಡಿದರು. ಶಾಮಗೊಂಡ ಮೇತ್ರೆ, ಬಾಲಾಜಿ ಮಾನಕೋಜಿ, ಹಮೀದ್‌ ಮಲೀಕ್‌, ಸತ್ಯನಾರಾಯಣ ಪ್ರಸಾದ್‌, ರಾಜಕುಮಾರ ಇದ್ದರು.

ಭಾಲ್ಕಿ ವರದಿ: ‘ಇಂದಿನ ಮಕ್ಕಳೇ ನಾಳಿನ ನಾಗರಿಕರು. ದೇಶದ ಉಜ್ವಲ ಭವಿಷ್ಯದ ರೂವಾರಿ ಗಳಾಗಿರುವ ಮಕ್ಕಳು ಶ್ರೇಷ್ಠ ನಾಯಕರ ಆದರ್ಶ, ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು’ಎಂದು ಸೌಮ್ಯ ಗುಣವಂತ ನುಡಿದರು.

ತಾಲ್ಲೂಕಿನ ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ಸಂಚಾಲಿತ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೃಷ್ಟಿ ಗುರುನಾಥ ಮಾತನಾಡಿ, ‘ಎಲ್ಲರೂ ಗುಣಾತ್ಮಕ ಶಿಕ್ಷಣ, ಉತ್ತಮ ಸಂಸ್ಕಾರ ಪಡೆದು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಹೇಳಿದರು.

ಅಪೇಕ್ಷಾ ರೇವಣಸಿದ್ದಪ್ಪಾ ಮಾತನಾಡಿ, ‘ಮಕ್ಕಳು ಚಿಕ್ಕಂದಿನಿಂದಲೇ ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಕಾಣಬೇಕು. ಅವುಗಳನ್ನು ಸಾಕಾರಗೊಳಿಸಲು ನಿರಂತರ ಪ್ರಯತ್ನ ಪಡಬೇಕು. ಶಿಕ್ಷಕರು, ಪಾಲಕರನ್ನು ಗೌರವಿಸುವುದರ ಜತೆಗೆ ನೆಹರು ಅವರಂತೆ ದೇಶಪ್ರೇಮ ಬೆಳೆಸಿಕೊಳ್ಳಬೇಕು’ ಎಂದರು.

ವೈಷ್ಣವಿ ರಾಮಲಿಂಗ, ಸಮೀರ್ ಫಾರೂಕ್, ಪ್ರವಿತಾ ದೇವಿದಾಸ, ಮಲ್ಲಿಕಾರ್ಜುನ ರಮೇಶ, ಅಮರ ಸಂಜುಕುಮಾರ, ಮುಖ್ಯಶಿಕ್ಷಕಿ ಬಸವಶ್ರೀ ಮಾಳಗೆ, ಮಹೇಶ ಬನ್ನಾಳೆ, ವಿರೇಶ ವಿವೇಕಿ, ರೇಣುಕಾ ಹೀರಾ, ಉತ್ತಮ ನಾಗೂರೆ, ಭರತ ನಂದನವರೆ, ನಾಗರತ್ನ ಬೆಡಸೂರೆ, ಕಾವೇರಿ ಪಾಟೀಲ, ಅಂಬಿಕಾ ಹಾಲಕುಡೆ, ಮಹೇಶ ದೇಶ ಮುಖ್, ಜೈರಾಜ ದೊಡ್ಡೆ ಇದ್ದರು.

ಜಯಂತಿ ಪ್ರಾರ್ಥನೆ ಗೀತೆ ಹಾಡಿ ದರು. ಬಸವಶ್ರೀ ಸ್ವಾಗತಿಸಿದರು. ವೈಷ್ಣವಿ ಸಂಜು ಕುಮಾರ ನಿರೂಪಿಸಿದರು. ಬಸವಾಂಜಲಿ ವಂದಿಸಿದರು. ‘ಮಕ್ಕಳೇ ಪಾಲಕರ ನೈಜ ಆಸ್ತಿ’: ‘ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ, ಅವರಿಗೆ ಗುಣಾತ್ಮಕ, ಸಂಸ್ಕಾರಯುತ ಶಿಕ್ಷಣ ನೀಡಿ ಅತ್ಯಮೂಲ್ಯ ಆಸ್ತಿಯನ್ನಾಗಿಸಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಹಜ್ಜರಗಿ ನುಡಿದರು.

ತಾಲ್ಲೂಕಿನ ಚಳಕಾಪೂರ ಗ್ರಾಮದ ಸರ್ಕಾರಿ ಕುವೆಂಪು ಶತಮಾನೋತ್ಸವ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರು ಮಕ್ಕಳ ಭಾವನೆಗಳನ್ನು ಗೌರವಿಸುವುದರ ಮೂಲಕ ಅವರ ಹಕ್ಕುಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು. ಕರವೇ ಜಿಲ್ಲಾ ಗೌರವ ಕಾರ್ಯದರ್ಶಿ ಸುಭಾಷ ಕೆನಡೆ, ತಾಲ್ಲೂಕು ಕಾರ್ಯದರ್ಶಿ ಸಿದ್ದು ಜಮಾದಾರ, ಸಂಜು ರುದ್ರಪ್ಪಾ, ಮುಖ್ಯಶಿಕ್ಷಕ ವಿರೇಂದ್ರ ಬುದಾರೆ, ಶಿಕ್ಷಕರಾದ ಜಗನ್ನಾಥ ಪರಿಠ್‌, ಮಲ್ಲಿಕಾರ್ಜುನ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಕಾಕಾ ಬೆಟ್ಟದ್‌, ಪ್ರಮುಖರಾದ ಸಂತೋಷ ಬೆಟ್ಟದ್‌, ಸಂಜು ಬೆಟ್ಟದ್‌, ಚಿನ್ನು ವಾಡೇಕರ್‌, ಬಸವ ಸಂದೇಶ ಶಾಲೆ ಅಧ್ಯಕ್ಷ ಹಣಮಂತ ಹುಲೇಪನೂರ್‌, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT