ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾ ಹೇಳಿದ ರಜೆಯ ಕಥೆ

Last Updated 16 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಿರ್ದೇಶಕಿ ಕವಿತಾ ಲಂಕೇಶ್ ಹೊಸದೊಂದು ಸಿನಿಮಾದೊಂದಿಗೆ ತೆರೆಗೆ ಮರಳಿದ್ದಾರೆ. ಈ ಸಿನಿಮಾದ ಹೆಸರು ‘ಸಮ್ಮರ್ ಹಾಲಿಡೇಸ್’. ಹೆಸರು ಕೇಳಿದ ತಕ್ಷಣ ಅನಿಸುವುದು ‘ಇದು ಮಕ್ಕಳ ಸಿನಿಮಾ ಆಗಿರಬಹುದೇ’ ಎಂದು. ಆ ಊಹೆ ನಿಜ. ಇದು ಮಕ್ಕಳಿಗಾಗಿ ಮಾಡಿರುವ ಸಿನಿಮಾ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಕವಿತಾ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಸಿನಿಮಾದಲ್ಲಿ ನಟಿಸಿರುವ ಇಶಾ, ಅನ್ಶ್‌ ಮತ್ತು ಸೋನಿಯಾ ಕೂಡ ಅವರ ಜೊತೆ ಇದ್ದರು.

ಈ ಸಿನಿಮಾದ ಸಂಭಾಷಣೆಗಳು ಕೃತಕ ಅನಿಸುವಂತೆ ಇರಬಾರದು ಎಂಬ ಉದ್ದೇಶದಿಂದ ಕವಿತಾ ಅವರು ಮಕ್ಕಳ ಜೊತೆ ಚರ್ಚೆ ಮಾಡಿಯೇ ಸಂಭಾಷಣೆ ಸಿದ್ಧಪಡಿಸಿದ್ದಾರಂತೆ. ಸಿನಿಮಾವನ್ನು ಡಿಸೆಂಬರ್ ವೇಳೆಗೆ ತೆರೆಗೆ ತರುವುದು ಅವರ ಗುರಿ.

ಶಾಳದ್ದು ಈ ಸಿನಿಮಾದಲ್ಲಿ 13 ವರ್ಷ ವಯಸ್ಸಿನ ಕ್ರೈಸ್ತ ಬಾಲಕಿಯ ಪಾತ್ರ. ಆ ಪಾತ್ರದ ಹೆಸರು ಜೆಸ್ಸಿ. ‘ಅಮ್ಮನ ಜೊತೆ ಚಿತ್ರೀಕರಣಕ್ಕೆ ಮೊದಲೂ ಹೋಗುತ್ತಿದ್ದೆ. ಆದರೆ, ನಟಿಸಿದ ಅನುಭವ ಇರಲಿಲ್ಲ’ ಎಂದರು ಇಶಾ.

ಈ ಸಿನಿಮಾದಲ್ಲಿ ಪ್ರಕಾಶ್‌ ರೈ ಹಾಗೂ ಸುಮನ್‌ ನಗರ್ಕರ್‌ ಅವರೂ ಅಭಿನಯಿಸಿದ್ದಾರೆ. ಜೊತೆಗೆ, ಗೌರಿ ಲಂಕೇಶ್ ಅವರೂ ಕಾರ್ಯಕರ್ತೆಯೊಬ್ಬಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT