ಒಳಾಂಗಣ

ಮನೆ ಸ್ವಚ್ಛತೆಗೆ ಆ್ಯಪ್ ನೆರವು

ದುಡಿಯುವ ಎಷ್ಟೋ ದಂಪತಿಗಳಿಗೆ ಮನೆಕೆಲಸದ ಭಾರವನ್ನು ಕಡಿಮೆ ಮಾಡಿವೆ ಇಂಥ ಆ್ಯಪ್ ಹಾಗೂ ವೆಬ್‌ಸೈಟ್‌ಗಳು. ಇದು ಒತ್ತಡದ ಜಗತ್ತು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಧಾವಂತವೇ ಬದುಕಿನ ಭಾಗವಾಗಿದೆ.

ಮನೆ ಸ್ವಚ್ಛತೆಗೆ ಆ್ಯಪ್ ನೆರವು

ಒಂದೇ ಕಂಪೆನಿಯಲ್ಲಿ ದುಡಿಯುವ ಸರಳಾ ಮತ್ತು ಸಮೀರ್ ಬೆಳಿಗ್ಗೆ ಒಟ್ಟಿಗೆ ಮನೆ ಬಿಟ್ಟರೆ, ರಾತ್ರಿ ಜೊತೆಯಾಗಿಯೇ ಮನೆ ಸೇರುತ್ತಾರೆ. ದುಡಿದು ಸುಸ್ತಾಗಿ ಮನೆಗೆ ಬರುವ ದಂಪತಿ ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಮನೆಕೆಲಸ ನಿರ್ವಹಣೆ ಇವರ ಪಾಲಿಗೆ ದೊಡ್ಡ ಸಮಸ್ಯೆ. ಮನೆ ಕೆಲಸದವರಿಗಾಗಿ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಮನೆ ಶುಚಿ ಮಾಡುವುದೇ ದೊಡ್ಡ ಸಮಸ್ಯೆ ಎನಿಸಿತ್ತು. ಸ್ನೇಹಿತರ ಸಲಹೆಯಂತೆ ಅಂತರ್ಜಾಲದಲ್ಲಿ ತಡಕಾಡಿ ಮನೆ ಶುಚಿಗೊಳಿಸುವ ಆ್ಯಪ್‌ಗಳ ಮೊರೆಹೋದರು.

ದುಡಿಯುವ ಎಷ್ಟೋ ದಂಪತಿಗಳಿಗೆ ಮನೆಕೆಲಸದ ಭಾರವನ್ನು ಕಡಿಮೆ ಮಾಡಿವೆ ಇಂಥ ಆ್ಯಪ್ ಹಾಗೂ ವೆಬ್‌ಸೈಟ್‌ಗಳು. ಇದು ಒತ್ತಡದ ಜಗತ್ತು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಧಾವಂತವೇ ಬದುಕಿನ ಭಾಗವಾಗಿದೆ. ಮನೆಯಲ್ಲಿ ಗಂಡ–ಹೆಂಡತಿ ಇಬ್ಬರೂ ದುಡಿಯುವವರು, ಇನ್ನು ಬ್ಯಾಚುಲರ್‌ಗಳ ಕತೆಯಂತೂ ಕೇಳುವುದೇ ಬೇಡ. ಮನೆ ಒರೆಸುವುದು, ಬಚ್ಚಲುಮನೆ ಶುಚಿ ಮಾಡುವುದು, ಕಸ ಗುಡಿಸುವುದು ಇವರ ಪಾಲಿಗೆ ದೊಡ್ಡ ಸವಾಲು. ಇಂಥವರೂ ಇದೀಗ ಆ್ಯಪ್‌ಗಳ ಮೊರೆ ಹೋಗುತ್ತಿದ್ದಾರೆ.

ನಗರದಲ್ಲಿ ಹೆಚ್ಚಿನ ಮಂದಿ ಭಾನುವಾರ ಬಂದರೆ ಸಾಕು ಮನೆ ಸ್ಚಚ್ಛಗೊಳಿಸಲು ಮೀಸಲಿಡುತ್ತಾರೆ. ಒಂದೇ ದಿನದಲ್ಲಿ ಎಷ್ಟು ಅಂಥ ಶುಚಿ ಮಾಡುವುದು ಸಾಧ್ಯ. ಹಾಗಾಗಿ ಈ ಮನೆ ಸ್ವಚ್ಛಗೊಳಿಸುವ ಸೇವೆ ಒದಗಿಸುವವರಿಗೆ ಬೇಡಿಕೆ ಹೆಚ್ಚುತ್ತಿದೆ.

ಬೇಡಿಕೆ ಹೆಚ್ಚಾದಂತೆ ಆ್ಯಪ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಗ್ರಾಹಕರನ್ನು ಆಕರ್ಷಿಸುವ ಸಲುವಾಗಿಯೇ ಹಲವು ಕೊಡುಗೆಗಳನ್ನು ನೀಡುತ್ತಿವೆ. ಸೋಪ್ ಆಯಿಲ್, ಪೊರಕೆ, ಸ್ಪಾಂಜ್‌ ಮುಂತಾದ ಅವಶ್ಯಕ ವಸ್ತುಗಳನ್ನು ಅವರೇ ತರುತ್ತಾರೆ. ಫ್ಯಾನ್, ಟ್ಯೂಬ್‌ಲೈಟ್‌ಗಳನ್ನು ಒರೆಸುವುದು, ಮೆಟ್ಟಿಲುಗಳಲ್ಲಿ ಸೇರಿಕೊಂಡ ದೂಳು ತೆಗೆಯುವುದು, ಬಾತ್‌ರೂಂ ಗೋಡೆಗಳನ್ನು ತೊಳೆಯುವುದು, ಬಾಗಿಲು, ಕಿಟಕಿಗಳನ್ನು ಒರೆಸುವುದು ಮುಂತಾದ ಕೆಲಸಗಳನ್ನು ಇವರು ಅಚ್ಚುಕಟ್ಟಾಗಿ ಮಾಡಿ ಮುಗಿಸಿ, ಮನೆಯನ್ನು ಫಳಫಳ ಹೊಳೆಯುವಂತೆ ಮಾಡುತ್ತಾರೆ.

ಇನ್ನು ಮನೆಗಳಲ್ಲಿ ಜಿರಳೆ, ಬ್ಯಾಕ್ಟಿರಿಯಾ, ಕ್ರಿಮಿಕೀಟಗಳ ನಿವಾರಣೆಗಳಿಗೆ ಸೂಕ್ತ ಔಷಧಿಗಳನ್ನು ಇವರು ಸಿಂಪಡಿಸುತ್ತಾರೆ. ಇಷ್ಟೇ ಅಲ್ಲದೇ ಪೈಪ್‌ಲೈನ್ ಸಮಸ್ಯೆ, ನೀರಿನ ನಳ ಸೋರುವುದು, ಗೀಸರ್ ಕೆಟ್ಟಿರುವುದು ಮುಂತಾದ ಸಮಸ್ಯೆಗಳಿಗೆ ಆ್ಯಪ್ ಮೂಲಕವೇ ಪ್ಲಂಬರ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. ದರವೂ ಮನೆಯ ವಿಸ್ತೀರ್ಣಕ್ಕೆ ಅನುಗುಣವಾಗಿರುತ್ತದೆ. ಕನಿಷ್ಠ ಬೆಲೆ ₹2,000 ದಿಂದ ಪ್ರಾರಂಭವಾಗುತ್ತದೆ.

ಆ್ಯಪ್‌ಗಳು: ಹೌಸ್‌ಜಾಯ್‌ (housejoy), ಹೆಲ್ಪರ್‌– ಹೋಮ್‌ ಸರ್ವಿಸ್‌ ಎಕ್ಸ್‌ಪರ್ಟ್ಸ್(Helpr-Home Service expert),

ವೆಬ್‌ಸೈಟ್‌ಗಳು: ಕ್ಲೀನ್‌ ಫೆನಾಟಿಕ್‌ (clean Fanatic), ಡೀಪ್‌ ಕ್ಲೀನಿಂಗ್‌ ಸರ್ವಿಸ್‌ (Deep Cleaning Service), ಹೋಮ್‌ ಟ್ರೈಆ್ಯಂಗಲ್‌ (Home Triangle)

ಗಪೂನ್ ಆ್ಯಪ್‌
ಮನೆಕೆಲಸದವರನ್ನು ಹುಡುಕಿ ಕೊಡುವ ಸಲುವಾಗಿಯೇ ಪ್ರಾರಂಭವಾಗಿದ್ದು ಗಪೂನ್ ಆ್ಯಪ್‌ (Gapoon) ಮತ್ತು ವೆಬ್‌ಸೈಟ್‌. ಇದರ ಸ್ಥಾಪಕರಾದ ಅಪೂರ್ವ ಮಿಶ್ರಾ ಮತ್ತು ಅಂಕಿತ್ ಅಸೈ ಬೆಂಗಳೂರಿಗೆ ಬಂದ ಆರಂಭದಲ್ಲಿ ಮನೆಕೆಲಸದವರು ಸಿಗದೆ ತೊಂದರೆ ಅನುಭವಿಸಿದ್ದರು. ಭಾಷೆಯೂ ಇವರಿಗೆ ತೊಡಕಾಗಿತ್ತು. ಬೇರೆ ರಾಜ್ಯಗಳಿಂದ ನಗರಕ್ಕೆ ಬಂದವರಿಗೂ ಇಂಥದ್ದೇ ಸಮಸ್ಯೆ ಎದುರಾಗಿರುತ್ತದೆ ಎಂಬುದನ್ನು ಮನಗಂಡ ಅವರು ಪರಿಹಾರ ಹುಡುಕಲು ಮುಂದಾದರು. ಅವರ ಪರಿಶ್ರಮದಿಂದ ಆರಂಭವಾಗಿದ್ದು ಗಪೂನ್ ಆ್ಯಪ್.

ಗಪೂನ್ ಆ್ಯಪ್ ಕೇವಲ ಮನೆಗಳಿಗೆ ಮಾತ್ರವಲ್ಲದೇ ರೆಸ್ಟೊರೆಂಟ್ ಮತ್ತು ಆಸ್ಪತ್ರೆಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಇದರ ಮೂಲಕ ನೀವು ಮನೆಕೆಲಸದವರನ್ನು ಬುಕ್ ಮಾಡಿಕೊಳ್ಳಬಹುದು. ಗ್ರಾಹಕರು ಹೇಳಿದ ದಿನ ಸಮಯಕ್ಕೆ ಮನೆ ಬಾಗಿಲಿನಲ್ಲಿ ಹಾಜರಿರುವ ಸಿಬ್ಬಂದಿ ಮೊದಲೇ ತಿಳಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸುತ್ತಾರೆ.

ಗಪೂನ್‌ನಲ್ಲಿ ಮರಗೆಲಸ, ಪ್ಲಂಬರ್‌, ಗೀಸರ್‌ ಸರ್ವಿಸ್‌, ಪೇಂಟಿಂಗ್‌, ಟೈಲ್ಸ್ ಸ್ವಚ್ಛತೆಯ ಸೇವೆಗಳೂ ಲಭ್ಯ. ಸುಮಾರು 264 ಗುತ್ತಿಗೆದಾರರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರ ಜೊತೆಗೆ ಕನಿಷ್ಠ ಮೂವರು ಕೆಲಸ ಮಾಡುತ್ತಾರೆ.

ಮಾಹಿತಿಗೆ www.gapoon.com ವೆಬ್‌ಸೈಟ್ ನೋಡಿ

*
ನಾನು ಆಫೀಸ್‌ಗೆ ಹೋಗಿ ಮನೆಗೆ ಬರುವಷ್ಟರಲ್ಲಿಯೇ ಸಂಜೆಯಾಗುತ್ತದೆ. ಮನೆಕೆಲಸದವರನ್ನು ಹುಡುಕಿ ಸೋತಿದ್ದೆ. ಅವರಿಗೆ ತಿಂಗಳಿಗೆ 3ರಿಂದ 4 ಸಾವಿರ ಕೊಡಬೇಕು. ನನ್ನ ಸ್ನೇಹಿತೆಯೊಬ್ಬಳು ಮನೆಕೆಲಸಗಳಿಗೆ ನೆರವಾಗುವ ಕೆಲವು ವೈಬ್‌ಸೈಟ್‌ ಬಗ್ಗೆ ತಿಳಿಸಿದಳು. ಆರು ತಿಂಗಳಿಗೊಮ್ಮೆ ಮನೆ ಶುಚಿ ಮಾಡಲು ಅವರ ಸಹಾಯ ಪಡೆಯುತ್ತಿದ್ದೇನೆ.
–ಪ್ರಶಾಂತಿ, ಐಟಿ ಉದ್ಯೋಗಿ

Comments
ಈ ವಿಭಾಗದಿಂದ ಇನ್ನಷ್ಟು
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

ಸೂರು ಸ್ವತ್ತು
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

9 Mar, 2018
ಬಗೆಬಗೆ ವಿನ್ಯಾಸ

ಸೂರು ಸ್ವತ್ತು
ಬಗೆಬಗೆ ವಿನ್ಯಾಸ

9 Mar, 2018
ತಾರಸಿ ಮೇಲೆ ಕೈತೋಟ ಮಾಡಿ...

ಸೂರು ಸ್ವತ್ತು
ತಾರಸಿ ಮೇಲೆ ಕೈತೋಟ ಮಾಡಿ...

9 Mar, 2018
ಭೂಮಿಯೂ ಇಲ್ಲಿ ಠೇವಣಿ

ಸೂರು ಸ್ವತ್ತು
ಭೂಮಿಯೂ ಇಲ್ಲಿ ಠೇವಣಿ

9 Mar, 2018
ಮುಖ್ಯ ಬಾಗಿಲಿಗೆ ವಾಸ್ತು ನಿಯಮ

ಸೂರು ಸ್ವತ್ತು
ಮುಖ್ಯ ಬಾಗಿಲಿಗೆ ವಾಸ್ತು ನಿಯಮ

9 Mar, 2018