ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸದಿಂದ ಬದುಕುವವರೇ ವೀರಶೈವರು

Last Updated 17 ನವೆಂಬರ್ 2017, 10:19 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ವಿರೋಧ ಮಾಡದೇ ಪ್ರೀತಿ, ವಿಶ್ವಾಸದಿಂದ ಬದುಕುವವರೇ ವೀರಶೈವರು. ಬೇಡ–ಬೇಡ ಎಂದು ಹೇಳಿದ ಬಸವಣ್ಣನವರ ವಚನಗಳನ್ನು ಲಿಂಗಾಯತ ನಾಟಕ ಕಂಪೆನಿ ಬೇಕು–ಬೇಕು ಎಂದು ಹೊರಟಿದೆ’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀಗಳು ಹೇಳಿದರು.

ನಗರದ ಹೊರವಲಯದ ಗಂಗಾಪುರ ರಸ್ತೆಯ ಹಿರೇಮಠದ ಆವರಣದ ಶನೈಶ್ಚರ ಮಂದಿರದಲ್ಲಿ ಬುಧವಾರ ರಾತ್ರಿ ಸಿದ್ಧಾಂತ ಶಿಖಾಮಣಿ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಲಿಂಗಾಯತ ಧರ್ಮವನ್ನು ಇಬ್ಭಾಗ ಮಾಡಲು ವ್ಯವಸ್ಥಿತ ಸಂಚು ಸಮಾಜದಲ್ಲಿ ನಡೆದಿದೆ. ಇದಕ್ಕೆ ಯಾರೂ ಕಿವಿಗೊಡಬಾರದು. ಬಸವಣ್ಣನವರು ಇವನಾರವ ಇವನಾರವ ಎಂದೆಣಿಸದೇ ಇವ ನಮ್ಮವ ಇವ ನಮ್ಮವರು ಎಂದರು.ಆದರೆ, ಈ ಕಂಪೆನಿ ಲಿಂಗಕಟ್ಟಿಕೊಂಡವರನ್ನೇ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಉಳಿದವರ ಪಾಡೇನು’ ಎಂದು ಪ್ರಶ್ನಿಸಿದರು.

‘ವೀರಶೈವ ಮತ್ತು ಲಿಂಗಾಯತದ ಬಗ್ಗೆ ಹುಳಿ ಹಿಂಡುವ ಕೆಲಸವನ್ನು ದುರುದ್ದೇಶ ಪೂರ್ವಕವಾಗಿ ಕೆಲವರು ಮಾಡುತ್ತಿದ್ದಾರೆ. ಇದು ಎಂದಿಗೂ ಫಲಪ್ರದವಾಗದು. ಆದರೆ, ಅಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್ ಸೇರಿದಂತೆ ಎಲ್ಲ ಧರ್ಮಗಳ ಮೌಲ್ಯ ಒಂದೇ ಆಗಿದೆ. ಆಯಾ ಧರ್ಮಗಳು ಅನುಸರಿಸುತ್ತಿರುವ ಆಚಾರ ವಿಚಾರ, ಆಚರಣೆ, ಸಂಪ್ರದಾಯಗಳು ವಿಭಿನ್ನವಾಗಿದ್ದರೂ ಎಲ್ಲ ಧರ್ಮಗಳು ನೈತಿಕ, ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿವೆ’ ಎಂದರು.

‘ಸಮಾಜದಲ್ಲಿ ಕೆಟ್ಟದ್ದನ್ನೇ ಅನುಸರಿಸುವ, ಪ್ರಚೋಧಿಸುವ ಕೆಲಸವು ಹೆಚ್ಚಾಗಿ ನಡೆಯುತ್ತಿದೆ. ಇನ್ನೊಬ್ಬರಿಗೆ ಶಿಕ್ಷೆ ಕೊಡಬೇಕು, ತಾನು ಮಾತ್ರ ಚೆನ್ನಾಗಿರಬೇಕು ಎಂಬ ಸ್ವಾರ್ಥದ ಜನರಲ್ಲಿ ಏಕೆ ಕ್ಷಮಾಗುಣ, ದಯಾಗುಣ ಬರುವುದಿಲ್ಲ. ಇನ್ನೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಮನಸ್ಸು ನೋಯಿಸಿ ಆನಂದ ಪಡುವ ಜನರಲ್ಲಿ ಬದಲಾವಣೆ ಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ರಾಮಕೃಷ್ಣ ವಿವೇಕ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ, ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಲಿಂಗದಹಳ್ಳಿಯ ವೀರಭದ್ರ ಸ್ವಾಮೀಜಿ ಮಾತನಾಡಿದರು.

ಶನೈಶ್ಚರಮಂದಿರದ ಶಿವಯೋಗಿ ಶ್ರೀಗಳು, ಹೆರೂರಿನ ನಂಜುಂಡ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅ.ಸಿ.ಹಿರೇಮಠ, ಗಿರಿಜಾದೇವಿ ದುರ್ಗದಮಠ, ಚನ್ನಬಸಪ್ಪ ಕೊಂಬಳಿ, ಬಸವರಾಜ ಚಳಗೇರಿ, ಬಸವರಾಜ ಸವಣೂರ, ಭಾರತಿ ಜಂಬಗಿ, ಮಂಗಳಗೌರಿ ಅರುಣಕುಮಾರ, ಚೈತ್ರಾ ಮಾಗನೂರ, ವಿನಯ ಕೆ. ಮಠದ, ಇಕ್ಬಾಲ್‌ಸಾಬ್ ರಾಣೆಬೆನ್ನೂರು, ಭರಮಪ್ಪ ಉರ್ಮಿ, ದಿಳ್ಳೆಪ್ಪ ಸತ್ತೆಪ್ಪನವರ, ಬಸನಗೌಡ ಪಾಟೀಲ, ಸುರೇಂದ್ರ ಜ್ಯೋತಿ, ಸುನಂದಮ್ಮ ತಿಳವಳ್ಳಿ, ಗಾಯತ್ರಮ್ಮ ಕುರುವತ್ತಿ, ಶಕುಂತಲಮ್ಮ ಜಂಬಗಿ, ಮೈತ್ರಾ ಹದಡಿ, ಸಿದ್ದು ಚಿಕ್ಕಬಿದರಿ, ಜಾಹ್ನವಿ ಉಪ್ಪಿನ, ಪುಷ್ಪಾ ಇದ್ದರು.

* * 

ವೀರಶೈವ ಮತ್ತು ಲಿಂಗಾಯತದ ಬಗ್ಗೆ ಹುಳಿ ಹಿಂಡುವ ಕೆಲಸವನ್ನು ದುರುದ್ದೇಶ</p><p>ಪೂರ್ವಕವಾಗಿ ಕೆಲವರು ಮಾಡುತ್ತಿದ್ದಾರೆ. ಇದು ಫಲಪ್ರದವಾಗದು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ,
ಶ್ರೀಶೈಲ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT