ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಕ್ಕೆ ಪೈಪ್‌ ಜೋಡಣೆ ಕಾಮಗಾರಿ

Last Updated 18 ನವೆಂಬರ್ 2017, 5:48 IST
ಅಕ್ಷರ ಗಾತ್ರ

ಬಾದಾಮಿ: ಇಲ್ಲಿನ ಬಸ್‌ ನಿಲ್ದಾಣದ ಸಮೀಪದ ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿರುವ ಹಳ್ಳಕ್ಕೆ ಮತ್ತೆರಡು ಪೈಪ್ ಜೋಡಣೆ ಕಾಮಗಾರಿ ಆರಂಭವಾಗಿದೆ. ಮೊದಲು ಎರಡು ಪೈಪ್‌ಗಳನ್ನು ಜೋಡಿಸಲಾಗಿತ್ತು.ಬೆಟ್ಟದಿಂದ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಕಳೆದ ಅಕ್ಟೋಬರ್‌ನಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ವರದಿ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಹೇಳಿ ಮತ್ತೆ ಎರಡು ಪೈಪ್‌ ಜೋಡಿಸಲು ತಿಳಿಸಲಾಗಿದೆ ಎಂದು ಕೆಶಿಪ್‌ ಎಂಜಿನಿಯರ್‌ ಎಸ್‌.ಸಿ. ನಾಯಕ ಹೇಳಿದರು. ಈ ಬಾರಿ ಬಾದಾಮಿ ಬೆಟ್ಟದ ಪರಿಸರದಲ್ಲಿ ಮಳೆಯ ಅಭಾವದಿಂದ ಹಳ್ಳದ ನೀರು ಬರಲಿಲ್ಲ. ಒಂದು ವೇಳೆ ಮಳೆಯಾಗಿದ್ದರೆ ಹಳ್ಳದ ನೀರು ಸಂಪೂರ್ಣವಾಗಿ ರಸ್ತೆಯ ಮೇಲೆಯೇ ಹರಿಯುತ್ತಿತ್ತು.

2007 ಮತ್ತು 2009 ರಲ್ಲಿ ಇದೇ ಹಳ್ಳದ ನೀರು ಪಟ್ಟಣದ ವಿವಿಧ ವಾರ್ಡುಗಳಲ್ಲಿ ಹೊಕ್ಕು ಜನಜೀವನ ಅಸ್ತವ್ಯಸ್ತವಾಗಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಮೊದಲು ಇದೇ ಹಳ್ಳಕ್ಕೆ ಮೊದಲು ನಾಲ್ಕು ಪೈಪಗಳಿದ್ದರೂ ಕೇವಲ ಎರಡು ಪೈಪ್‌ಗಳನ್ನು ಹಾಕಿ ಮುಚ್ಚಲಾಗಿತ್ತು. ಈಗ ಮತ್ತೆ ಎರಡು ಪೈಪ್‌ ಜೋಡಣೆಯ ಕಾಮಗಾರಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT