ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ ನಡುವೆಯೂ ಪ್ರಗತಿ

Last Updated 19 ನವೆಂಬರ್ 2017, 3:36 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಎನ್ನುವುದು ಜನ್ಮಸಮಸ್ಯೆ ಎಂಬಂತಾಗಿದೆ. ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಪ್ರಗತಿ ಉತ್ತಮ ಸ್ಥಿತಿಯಲ್ಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌ ಹೇಳಿದರು.

ವಾರ್ತಾ ಇಲಾಖೆ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ‘ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಏಕಕಾಲದಲ್ಲಿ ಎರಡು ಗ್ರಾಮ ಪಂಚಾಯಿತಿನಿರ್ವಹಣೆ ಮಾಡುತ್ತಿದ್ದಾರೆ ಎಂದರು.

ಅಲ್ಲದೆ, ಕೆಲವು ಪಿಡಿಒಗಳು ಬಡ್ತಿ ಪಡೆದು ಉದ್ಯೋಗ ಖಾತರಿ ಯೋಜನೆಗೆ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಕಾರ್ಯದರ್ಶಿ ಗ್ರೇಡ್‌–1 ಹುದ್ದೆಗಳ ಕೊರತೆ ಇದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ. ಇಷ್ಟೆಲ್ಲಾ ಕೊರತೆ ನಡುವೆಯೂ ಪ್ರಗತಿಯಲ್ಲಿ ಹಿಂದಿ ಬಿದ್ದಿಲ್ಲ’ ಎಂದು ಹೇಳಿದರು.

‘ಉದ್ಯೋಗ ಖಾತರಿ ಯೋಜನೆ ಅಡಿ ಎರೆಹುಳು ಗೊಬ್ಬರ ಘಟಕ ಸ್ಥಾಪನೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಕೊಟ್ಟಿಗೆ ನಿರ್ಮಾಣ, ಬ್ಯಾಂಕ್‌ ಖಾತೆ ತೆರೆಯುವಲ್ಲಿಯೂ ಪ್ರಥಮ ಸ್ಥಾನ ಪಡೆದಿದೆ. ಕುಶಲ ರಹಿತ ಕೆಲಸಗಳಲ್ಲಿ 2ನೇ ಸ್ಥಾನ, ರೇಷ್ಮೆ ಇಲಾಖೆಯ ಕೆಲಸಗಳಲ್ಲಿ 4ನೇ ಸ್ಥಾನ ಪಡೆಯಲಾಗಿದೆ. ಯೋಜನೆಯಲ್ಲಿ ಶೇ 96 ಸಾಧನೆ ದಾಖಲಿಸಲಾಗಿದೆ. ಸುಮಾರು ₹ 5 ಕೋಟಿಯಷ್ಟು ಕೂಲಿ ಬಾಕಿ ಇದ್ದು ಅನುದಾನದ ನಿರೀಕ್ಷೆಯಲ್ಲಿದ್ದೇವೆ. 15 ದಿನದೊಳಗೆ ಕೂಲಿ ಪಾವತಿ ಮಾಡಲಾಗುವುದು. ಸಲಕರಣೆಗಳ ಪಾವತಿ ಸಮಸ್ಯೆಯಾಗಿದ್ದು ಇದರ ನಡುವೆಯೂ ಶೇ 94.5ರಷ್ಟು ಸಾಧನೆ ಮಾಡಲಾಗಿದೆ’ ಎಂದು ಹೇಳಿದರು.

‘ನವೆಂಬರ್‌ ಅಂತ್ಯದವರೆಗೆ 16.5 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿತ್ತು. ಈಗಾಗಲೇ ಶೇ 116ರಷ್ಟು ಗುರಿಗಿಂತ ಹೆಚ್ಚು ಸಾಧನೆ ಮಾಡಲಾಗಿದೆ. ಉದ್ಯೋಗ ಖಾತರಿಯಲ್ಲಿ ವೈಯಕ್ತಿಕ ಕಾಮಗಾರಿಗಳ ಪ್ರಗತಿಯಲ್ಲಿ ಅಭಿವೃದ್ಧಿ ಆಗಿಲ್ಲ. ಕಾರ್ಮಿಕರು ಹೆಚ್ಚಿನ ಕೂಲಿ ನಿರೀಕ್ಷೆ ಮಾಡುವ ಕಾರಣ ಉದ್ಯೋಗಿ ಖಾತರಿ ಕೂಲಿಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಮೈಸೂರು, ಬೆಂಗಳೂರು ನಗರಗಳು ಸಮೀಪದಲ್ಲೇ ಇರುವ ಕಾರಣ ಕಾರ್ಮಿಕರು ನಗರಗಳತ್ತ ಕೆಲಸಕ್ಕೆ ಹೋಗುತ್ತಾರೆ’ ಎಂದು ಹೇಳಿದರು.

ವಸತಿ ಯೋಜನೆ ಕುಂಠಿತ: ‘ಜನಪ್ರತಿನಿಧಿಗಳ ಅಸಹಕಾರದಿಂದ ವಸತಿ ಯೋಜನೆಗಳ ಪ್ರಗತಿಯಲ್ಲಿ ಕುಂಠಿತವಾಗಿದೆ. ಮೇಲುಕೋಟೆ ಕ್ಷೇತ್ರದ ಶಾಸಕರು ಫಲಾನುಭವಿಗಳ ಪಟ್ಟಿ ನೀಡದ ಕಾರಣ ಬಸವ ವಸತಿ ಯೋಜನೆ ಲಾಭ ಅರ್ಹ ಫಲಾನುಭವಿಗಳಿಗೆ ಸಿಕ್ಕಿಲ್ಲ. 2013–14 ಸಾಲಿನ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಳ್ಳದ ಫಲಾನುಭವಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಸದ್ಯ ನಿರ್ಮಾಣ ವೆಚ್ಚ ಹೆಚ್ಚಾಗಿರುವ ಕಾರಣ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

‘2016–17ನೇ ಸಾಲಿನಲ್ಲಿ ಜಿಲ್ಲೆಯ 39 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. 32 ಗೋಕಟ್ಟೆ, 18 ಕಲ್ಯಾಣಿ ಅಭಿವೃದ್ಧಿ ಮಾಡಲಾಗಿದೆ. 74 ಬಹುಕಮಾನು ಚೆಕ್‌ ಡ್ಯಾಂ ನಿರ್ಮಾಣ ಗುರಿ ಹೊಂದಲಾಗಿದ್ದು 47 ಕಾಮಗಾರಿಗಳು ಪ್ರಗತಿಯಲ್ಲಿವೆ. 17 ಕಾಮಗಾರಿಗಳು ಪೂರ್ಣಗೊಂಡಿವೆ. ಸಾಕಷ್ಟು ಮಳೆ ಸುರಿದು ಕೆರೆ, ಕಟ್ಟೆಗಳು ತುಂಬಿದ್ದರೂ ನಾಗಮಂಗಲ ತಾಲ್ಲೂಕಿನ 7 ಗ್ರಾಮಗಳಿಗೆ ಈಗಲೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ಹೇಳಿದರು.

ಸಾಧನೆಯ ಲಾಭ ಜನಪ್ರತಿನಿಧಿಗಳಿಗೆ
‘ಯಾವುದೇ ಯೋಜನೆ ಜಾರಿಯಲ್ಲಿ ಆಗಿರುವ ಸಾಧನೆ ಆಯಾ ಜನಪ್ರತಿನಿಧಿಗೆ ಸಿಗಬೇಕು. ಅಧಿಕಾರಿಗಳು ಎಲ್ಲಾ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಬೇಕು. ಆದರೆ ಅದಕ್ಕೆ ಅವರು ಯಾವುದೇ ಪ್ರಚಾರ ಪಡೆಯಬಾರದು. ನಾಗರಿಕ ಸೇವಾ ತತ್ವವೂ ಇದೇ ಆಗಿದ್ದು, ಅಧಿಕಾರಿಗಳು ಪ್ರಚಾರದಿಂದ ದೂರವೇ ಇರಬೇಕು. ಅಧಿಕಾರಿಗಳು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿ ಯೋಜನೆಗಳ ಲಾಭ ಫಲಾನುಭವಿಗೆ ದೊರೆಯುವಂತೆ ಕೆಲಸ ಮಾಡಬೇಕು’ಎಂದು ಶರತ್‌ ಹೇಳಿದರು.

ಬಂಡೆಯ ಮೇಲೆ ಮಾದರಿ ಶೌಚಾಲಯ
‘ಸ್ವಚ್ಛಭಾರತ ಯೋಜನೆ ಅನುಷ್ಠಾನದ ವೇಳೆ ಹಲವು ಸವಾಲುಗಳು ಸೃಷ್ಟಿಯಾಗಿದ್ದವು. ಬಂಡೆಯ ಮೇಲೆ ಶೌಚಾಲಯ ನಿರ್ಮಿಸುವುದು ನಮಗೆ ಪ್ರಮುಖ ಸಮಸ್ಯೆಯಾಗಿತ್ತು. ಅದಕ್ಕೆ ಹೆಚ್ಚು ಹಣ ಖರ್ಚಾಗುತ್ತಿತ್ತು. ಉದ್ಯೋಗ ಖಾತ್ರಿ ಹಣ ಬಳಸಿ ಬಂಡೆಯ ಮೇಲೆ ಶೌಚಾಲಯ ನಿರ್ಮಿಸಿದೆವು. ಅದು ಮಾರಿದಿಯಾಗಿದ್ದು ಬಾಗಲಕೋಟೆ, ಕೊಪ್ಪಳ ಸೇರಿ ಇತರ ಜಿಲ್ಲೆಗಳಲ್ಲೂ ಇದೇ ಮಾದರಿ ಅನುಸರಿಸಲಾಗುತ್ತಿದೆ’ ಎಂದರು.

ಉದ್ಯೋಗ ಖಾತ್ರಿ ಅದಾಲತ್‌
‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಅದಾಲತ್‌ ಮಾಡಲಾಗುತ್ತಿದೆ. ಇದರಲ್ಲಿ ಜನವಾದಿ ಮಹಿಳಾ ಸಂಘಟನೆ ಸೇರಿ ಯೋಜನೆ ಜಾರಿಯಲ್ಲಿ ಸಹಾಯ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳ ಸದಸ್ಯರು ಭಾಗವಹಿಸಿ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತಿದ್ದಾರೆ. ಯೋಜನೆ ಜಾರಿಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT