ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಕರ್ಮ ಅಭಿವೃದ್ಧಿ ನಿಗಮ: ₹ 100 ಕೋಟಿ ಅನುದಾನಕ್ಕೆ ಪ್ರಸ್ತಾವ’

Last Updated 19 ನವೆಂಬರ್ 2017, 3:37 IST
ಅಕ್ಷರ ಗಾತ್ರ

ನಾಗಮಂಗಲ: ‘ಈ ಹಿಂದೆ ಎಲ್ಲಾ ಸರ್ಕಾರಗಳ ಮುಂದೆ ವಿಶ್ವಕರ್ಮ ಸಮಾಜ ಹಲವು ಬೇಡಿಕೆಗಳನ್ನು ಇಡುತ್ತಲೇ ಬಂದಿದೆ. ಆದರೆ ಆಳುವ ಪಕ್ಷಗಳು ಸಮಾಜದ ಬೇಡಿಕೆ ಈಡೇರಿ ಸಲಿಲ್ಲ’ ಎಂದು ರಾಜ್ಯ ವಿಶ್ವಕರ್ಮ ಅಭಿ ವೃದ್ಧಿ ನಿಗಮದ ಅಧ್ಯಕ್ಷ ನಂದಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಎಸ್ಎಸ್ ಕೆ ವಿಶ್ವಕರ್ಮ ಸಮಾಜ ಸೇವಾ ಸಂಘದಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ ₹ 35 ಕೋಟಿ ಅನುದಾನ ನೀಡಿದೆ. ಅಲ್ಲದೆ ವಿಶ್ವಕರ್ಮ ಜಯಂತಿ ಆಚರಣೆಗೆ ಅನುವು ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ ಮಾತ್ರ ವಿಶ್ವಕರ್ಮ ಅಭಿವೃದ್ಧಿನಿಗಮ ಆಸ್ತಿತ್ವದಲ್ಲಿದೆ’ ಎಂದರು.

‘ಅನುದಾನವನ್ನು ₹ 100 ಕೋಟಿಗೆ ಏರಿಸುವ ಪ್ರಸ್ತಾವವನ್ನು ನಿಗಮ ಸರ್ಕಾರದ ಮುಂದೆ ಇಟ್ಟಿದೆ. ಪೂರಕವಾಗಿ ಮುಖ್ಯಮಂತ್ರಿ ಸ್ಪಂದಿಸಿ ದ್ದಾರೆ. ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ 6 ಸಾವಿರ ಕೋಟಿ ಹಣವಿದ್ದು, ಅಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಮೃತಪಟ್ಟರೆ ಪರಿಹಾರವಾಗಿ ₹ 5 ಲಕ್ಷ ಹಣ ದೊರೆಯುತ್ತದೆ’ ದೊರೆಯುತ್ತದೆ ಎಂದರು.

‘ಇಂದು ವಿಶ್ವಕರ್ಮ ಸಮಾಜ ಮರಗೆಲಸ, ಚಿನ್ನ ಕುಸುರಿ, ಶಿಲ್ಪಿ, ಎರಕ ಹೊಯ್ಯುವುದು ಸೇರಿ ಹಲವು ಕೆಲಸಗಳಲ್ಲಿ ತೊಡಗಿದೆ. ಇವರೆಲ್ಲರಿಗೆ ಯಾವುದೇ ವಿಧವಾದ ಸಾಲ ಸೌಲಭ್ಯ ಸಿಗುತ್ತಿಲ್ಲ, ಇಂಥವರಿಗಾಗಿ ಕೌಶಾಲಾಭಿವೃದ್ದಿ ಯೋಜನೆಯಡಿ ತಾಂತ್ರಿಕ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುವುದು. ₹ 10 ಲಕ್ಷದವರೆಗೆ ಬ್ಯಾಂಕ್ ಗಳಿಂದ ಸಾಲ ನೀಡಲಾಗುವುದು. ವಿಶ್ವಕರ್ಮ ಸಮಾಜದವರಿಗೆ ಪ್ರತಿ ವರ್ಷ10 ಸಾವಿರ ಮನೆ ನೀಡಲು ಒತ್ತಾಯ ಮಾಡಿದ್ದೇವೆ’ ಎಂದು ಹೇಳಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಎನ್. ಕೃಷ್ಣಾಚಾರ್ ಮಾತನಾಡಿ ಸಂಘಕ್ಕೆ ನಿವೇಶನದ ಅವಶ್ಯಕತೆ ಇದ್ದು ನಾವು ಈಗಾಗಲೇ 6 ಗುಂಟೆ ನಿವೇಶನಕ್ಕೆ ಮುಂಗಡವಾಗಿ ₹ 2 ಲಕ್ಷ ಪಾವತಿಸಿದ್ದು, ಶಾಸಕರು ಧನ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ಕೊರತೆಯಿಂದಾಗಿ ಹಲವು ಕಚೇರಿಗಳಿಗೆ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ, ತಾಲ್ಲೂಕಿನಲ್ಲಿ ವಿಶ್ವ ಕರ್ಮ ಜನಾಂಗದ ಗುಂಪುಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಸಮಾಜದ ಮುಖಂಡರು ಮಾಡ ಬೇಕು. ನಿವೇಶನದ ಖರೀದಿಗೆ ಸಹಾಯ ಮಾಡುತ್ತೇನೆ’ ಎಂದರು.

ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಈಶ್ವರ್ ವಿಶ್ವಕರ್ಮ, ಕಾರ್ಮಿಕ ನಿರೀಕ್ಷಕ ಎಂ. ಮಹೇಶ್ ಗೌಡ, ಎಪಿಎಂಸಿ ಅಧ್ಯಕ್ಷ ಕರೀಗೌಡ, ಕಾನೂನು ಸಲಹೆಗಾರ ಕೆ.ಜಿ.ಲಕ್ಷ್ಮಿಸಾಗರ್, ಸಹಕಾರ್ಯದರ್ಶಿ ಸಿ.ದಿವಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT