ಬಳ್ಳಾರಿ

ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಆಗ್ರಹ

‘ಎಲ್ಲ ಮಾದಿಗ ಸಂಘಟನೆಗಳು ಒಟ್ಟಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ರೂಪಿಸಲಿವೆ. ಮುಂದಿನ ದಿನಗಳಲ್ಲಿ ಬೇರೆ ಸಂಘ ಮತ್ತು ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಬಳ್ಳಾರಿ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು’

ಬಳ್ಳಾರಿ: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ಮಾದಿಗ ದಂಡೋರ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಧರಣಿ ನಡೆಸಿದರು.

‘ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷ ಗತಿಸಿದರೂ ಮಾದಿಗ ಸಮುದಾಯದವರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ತಾವು ಅಹಿಂದ ನಾಯಕರೆಂದು ಕರೆದುಕೊಂಡರೂ ಆಯೋಗದ ವರದಿಯನ್ನು ಅಂಗೀಕರಿಸಲು ಹಿಂಜರಿಯುತ್ತಿದ್ದಾರೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ಶ್ರೀನಿವಾಸ ಆಕ್ರೋಶ ವ್ಯಕ್ತಪಡಿಸಿದರು.

‘ಎಲ್ಲ ಮಾದಿಗ ಸಂಘಟನೆಗಳು ಒಟ್ಟಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ರೂಪಿಸಲಿವೆ. ಮುಂದಿನ ದಿನಗಳಲ್ಲಿ ಬೇರೆ ಸಂಘ ಮತ್ತು ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಬಳ್ಳಾರಿ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡರಾದ ಅರ್ಜುನ್ ಹೆಗಡೆ, ಕಾರೇಕಲ್ಲು ವೀರೇಶ್, ತೋಲಮಾಮಿಡಿ ಮಾರೆಣ್ಣ, ಬಿ.ಕಮಲ, ಕೃಷ್ಣಪ್ಪ, ಚಂದ್ರಶೇಖರ್, ಎಂ.ಸೋಮಶೇಖರ್, ಕುರುವಳ್ಳಿ, ಸಿ.ಕೆಂಚಪ್ಪ ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸಂಡೂರಿನಲ್ಲಿ ಬಿರುಸುಗೊಂಡ ಹುಣಸೆ ಕೃಷಿ

ಸಂಡೂರು
ಸಂಡೂರಿನಲ್ಲಿ ಬಿರುಸುಗೊಂಡ ಹುಣಸೆ ಕೃಷಿ

24 Mar, 2018

ಬಳ್ಳಾರಿ
ಹಸ್ತಪ್ರತಿ ಸಂರಕ್ಷಣೆಗೆ ಸರ್ಕಾರ ಮುಂದಾಗಲಿ

‘ಹಸ್ತಪ್ರತಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಬೃಹತ್‌ ಯೋಜನೆ ರೂಪಿಸಬೇಕು. ಆ ಕ್ಷೇತ್ರದಲ್ಲಿ ಪಳಗಿ ತಜ್ಞರೆನಿಸಿಕೊಂಡವರಿಗೆ ಆ ಕೆಲಸವನ್ನು ವಹಿಸಿಕೊಡಬೇಕು’ ಎಂದು ಹಿರಿಯ ವಿದ್ವಾಂಸ ಎಂ.ಪಿ. ಮಂಜಪ್ಪಶೆಟ್ಟಿ...

24 Mar, 2018

ಬಳ್ಳಾರಿ
ಗ್ರಾಮ ತ್ಯಾಜ್ಯ ಸಂಸ್ಕರಣೆಗೆ ಖನಿಜ ನಿಧಿ

ಗಣಿಗಾರಿಕೆಯಿಂದ ಬಾಧಿತವಾದ ಹಳ್ಳಿಗಳಲ್ಲಿ ಘನ ಮತ್ತು ಹಸಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ, ತ್ಯಾಜ್ಯ ಸಂಸ್ಕರಣೆ ಮೂಲಕ ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಉತ್ತೇಜನ ನೀಡಲು...

24 Mar, 2018

ಬಳ್ಳಾರಿ
ಕರೂರಿನಿಂದ ಪಾದಯಾತ್ರೆ 25ರಿಂದ

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ(ಎಲ್‌ಎಲ್‌ಸಿ) ಏ.15ರ ವರೆಗೆ ನೀರು ಹರಿಸಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ...

23 Mar, 2018

ಬಳ್ಳಾರಿ
ಬರ ನಿರ್ವಹಣೆಗೆ ₹15 ಕೋಟಿ ಪ್ರಸ್ತಾವ

‘ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆಗೆಂದು ₹15 ಕೋಟಿ ವೆಚ್ಚದ ಕ್ರಿಯಾಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು. ...

23 Mar, 2018