ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಷಾರ್ ಕಪೂರ್

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ತುಷಾರ್ ಕಪೂರ್ ಹುಟ್ಟಿದ ದಿನವಿಂದು (ನವೆಂಬರ್ 20, 1976). 70ರ ದಶಕದ ಸೂಪರ್ ಸ್ಟಾರ್ ಜಿತೇಂದ್ರ ಅವರ ಮಗನಾಗಿರುವ ತುಷಾರ್, ‘ಮುಝೆ ಕುಚ್‌ ಕೆಹನಾ ಹೈ’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಆದರೆ, ಪ್ರೇಕ್ಷಕರ ಗಮನವನ್ನು ಅಷ್ಟಾಗಿ ಸೆಳೆಯಲಿಲ್ಲ.

ತಮ್ಮದೇ ಬ್ಯಾನರ್ ಬಾಲಾಜಿ ಮೋಷನ್ ಪಿಕ್ಚರ್ಸ್‌ ಮೂಲಕ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರೂ ಅದೃಷ್ಟ ಅವರ ಕೈಹಿಡಿಯಲಿಲ್ಲ. ಮಲ್ಟಿ ಸ್ಟಾರ್‌ಗಳಿರುವ ಚಿತ್ರಗಳ ಮೂಲಕ ಜನಪ್ರಿಯರಾದ ತುಷಾರ್, ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ತುಷಾರ್ ಸಹೋದರಿ ಏಕ್ತಾ ಕಪೂರ್ ಕಿರುತೆರೆಯಲ್ಲಿ ಹೆಸರುವಾಸಿ. ತಮ್ಮದೇ ಆದ ಪ್ರೊಡಕ್ಷನ್ ಮೂಲಕ ಅನೇಕ ಸಿನಿಮಾಗಳನ್ನೂ ನಿರ್ಮಿಸಿದ್ದಾರೆ. ಅವಿವಾಹಿತರಾಗಿರುವ ತುಷಾರ್ ಕಪೂರ್ ಕಳೆದ ವರ್ಷ ಐವಿಎಫ್‌–ಬಾಡಿಗೆ ತಾಯಿ ಮೂಲಕ ಗಂಡು ಮಗುವೊಂದಕ್ಕೆ ತಂದೆಯಾಗಿದ್ದಾರೆ. ಇತ್ತೀಚೆಗಷ್ಟೇ ತುಷಾರ್ ಅಭಿನಯದ ‘ಗೋಲ್‌ಮಾಲ್ ಅಗೇನ್’ ಸಿನಿಮಾ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT