ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ತಲುಪದ ನೀರು: ಒಣಗಿದ ಬೆಳೆ

Last Updated 20 ನವೆಂಬರ್ 2017, 9:07 IST
ಅಕ್ಷರ ಗಾತ್ರ

ಜೇವರ್ಗಿ: ತಾಲ್ಲೂಕಿನ ಅರಳಗುಂಡಗಿ ಗ್ರಾಮದ ವ್ಯಾಪ್ತಿಯ ಇಂಡಿ ಶಾಖಾ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ. ಮುಖ್ಯ ಕಾಲುವೆ 9ರಿಂದ 4ರ ವರೆಗೆ ಸಿಂದಗಿ ತಾಲ್ಲೂಕಿನ ಗೊರಗುಂಡಗಿ ಗ್ರಾಮದ 800 ಎಕರೆ, ಅರಳಗುಂಡಗಿಯ 1,500 ಎಕರೆ, ಮುರಗಾನೂರ ಗ್ರಾಮದ 500 ಎಕರೆ ಹಾಗೂ ಹಾಲಘತ್ತರಗಿಯ 500 ಎಕರೆ ಜಮೀನು ಈ ಕಾಲುವೆಯ ವ್ಯಾಪ್ತಿಯಲ್ಲಿದೆ. ಆದರೆ, ನೀರು ಹರಿಸಿ 10 ದಿನಗಳಾದರೂ ಜಮೀನುಗಳಿಗೆ ನೀರು ತಲುಪಿಲ್ಲ.

ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ‘ಮುಖ್ಯ ಕಾಲುವೆಗೆ ನೀರು ಕಡಿಮೆ ಇದೆ. ಇದರಿಂದ ನೀರು ಪೂರೈಕೆ ಆಗುತ್ತಿಲ್ಲ. ಹೆಚ್ಚುವರಿ ನೀರು ಹರಿದು ಬರುತ್ತಿದೆ. ಎರಡು ದಿನಗಳಲ್ಲಿ ನೀರು ಪೂರೈಕೆ ಆಗಲಿದೆ ಎನ್ನುತ್ತಾರೆ’ ಎಂದು ರೈತರು ತಿಳಿಸಿದ್ದಾರೆ.

‘ಬೆಳೆದ ಬೆಳೆ ನೀರಿಲ್ಲದೆ ಒಳಗುತ್ತಿವೆ. ನೀರು ಬಾರದೆ ರೈತರು ಕಂಗಾಲಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು’ ಎಂಬುದು ರೈತರ ಒತ್ತಾಯ. 2–3 ವರ್ಷಗಳಿಂದ ಈ ಕಾಲುವೆಗೆ ನೀರು ಹರಿದು ಬರುತ್ತಿಲ್ಲ. ಕಾಲುವೆ ನೆಪಮಾತ್ರಕ್ಕೆ ಎಂಬಂತಾಗಿದೆ. ಮಳೆ ಇಲ್ಲದೆ ತೊಗರಿ, ಹತ್ತಿ ಒಳಗಿ ನಿಂತಿವೆ.

ರೈತರ ಗೋಳು ಕೇಳುವವರು ಯಾರೂ ಇಲ್ಲ. ಕೂಡಲೇ ಕೃಷ್ಣ ಭಾಗ್ಯ ಜಲನಿಗಮದ ಅಧಿಕಾರಿಗಳು ನೀರು ಬಿಡುಗಡೆಗೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅರಳಗುಂಡಗಿ ರೈತ ಶರಣಗೌಡ ಹೀರೆಗೌಡರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT