ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಕನ್ನಡಕಕ್ಕೆ ಗುಡ್ ಬೈ ಹೇಳಿದ ಡಿಎಂಕೆ ನೇತಾರ ಕರುಣಾನಿಧಿ

Last Updated 20 ನವೆಂಬರ್ 2017, 15:02 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಿಎಂಕೆ ನೇತಾರ ಕರುಣಾನಿಧಿ ಹೆಸರು ಕೇಳಿದಾಗ ಕಪ್ಪು ಕನ್ನಡಕ ಧರಿಸಿದ ವ್ಯಕ್ತಿಯ ಮುಖವೇ ಕಣ್ಮುಂದೆ ಬರುತ್ತದೆ. ಕರುಣಾನಿಧಿ ಎಂದರೆ ಬಿಳಿ ಧೋತಿ, ಶರ್ಟ್, ಹಳದಿ ಶಾಲು, ಕಪ್ಪು ಕನ್ನಡಕ ತೊಟ್ಟ ವ್ಯಕ್ತಿ. ಆದರೆ ಈಗ ಕರುಣಾನಿಧಿ ಲುಕ್ ಬದಲಾಗಿದೆ. 46 ವರ್ಷಗಳಿಂದ ಕಪ್ಪು ಕನ್ನಡಕ ಧರಿಸುತ್ತಿದ್ದ ಕರುಣಾನಿಧಿ ಈಗ ಆ ಕನ್ನಡಕ್ಕೆ ಗುಡ್ ಬೈ ಹೇಳಿದ್ದಾರೆ.

'ಎನ್ ಉಯಿರಿನುಂ ಮೇಲಾನ ಉಡನ್‍ಪ್ಪಿರಪ್ಪುಗಳೇ' ಎಂದು ಭಾಷಣ ಆರಂಭಿಸುವ ಕರುಣಾನಿಧಿಯವರ ಗುರುತಿನ ಸಂಕೇತವಾಗಿತ್ತು ಕಪ್ಪು ಕನ್ನಡಕ,
92ರ ಹರೆಯದ ಕರುಣಾನಿಧಿಯವರಲ್ಲಿ ಕನ್ನಡಡಕ ಬದಲಿಸುವಂತೆ ಡಾಕ್ಟರ್ ಹೇಳಿದ್ದು, ಅವರ ನಿರ್ದೇಶನದಂತೆ ಕನ್ನಡಕ ಬದಲಿಸಲಾಗಿದೆ. ಮಗ ಎಂ.ಕೆ ತಮಿಳರಶನ್ ಕರುಣಾನಿಧಿಯವರಿಗೆ ಸೂಕ್ತವಾಗುವ ಕನ್ನಡಕದ ಫ್ರೇಮ್ ಹುಡುಕಲು 40 ದಿನ ತೆಗೆದುಕೊಂಡಿದ್ದಾರೆ ಎಂದು  ವಿಜಯ ಆಪ್ಟಿಕಲ್ಸ್ ಸಿಇಒ ರೋಷನ್ ಜಯರಾಮ್  ಹೇಳಿದ್ದಾರೆ. ಹಗುರವಾದ, ಜರ್ಮನ್ ಫ್ರೇಮ್‍ನ್ನು ಕರುಣಾನಿಧಿಯವರಿಗಾಗಿಯೇ ಹೊರ ರಾಷ್ಟ್ರದಿಂದ ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT