ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚರ್ನೋಬಿಲ್ ದುರಂತಕ್ಕೆ ಪರಮಾಣು ಸ್ಫೋಟವೇ ಮುಖ್ಯ ಕಾರಣ’

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಾಸ್ಕೊ: 1986ರ ಏಪ್ರಿಲ್ 26ರಂದು ಉಕ್ರೇನ್‌ನಲ್ಲಿ ನಡೆದ ಭೀಕರ ಚರ್ನೋಬಿಲ್ ದುರಂತಕ್ಕೆ ಪರಮಾಣು ಸ್ಫೋಟವೇ ಮುಖ್ಯ ಕಾರಣ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಹಬೆ ಕೊಳವೆ ಸ್ಫೋಟವು (ಸ್ಟೀಮ್) ದುರಂತಕ್ಕೆ ಕಾರಣವಾಯಿತು ಎಂದು ಈ ಮೊದಲಿನ ಅಧ್ಯಯನಗಳು ಹೇಳಿದ್ದವು.

ಘಟನೆಯಿಂದ 31 ಜನರು ಮೃತಪಟ್ಟು, 237 ಜನ ವಿಕಿರಣ ಕಾಯಿಲೆಗೆ ಒಳಗಾಗಿದ್ದರು.

‘ಅಂದು ನಡೆದ ಮೂರು ಸ್ಫೋಟಗಳ ಪೈಕಿ ಮೊದಲೆರಡು ಪರಮಾಣುವಿನಿಂದ ಸಂಭವಿಸಿದ್ದವು. ಇವು ಅವಶೇಷಗಳನ್ನು ವಾತಾವರಣದಲ್ಲಿ ಎತ್ತರಕ್ಕೆ ಕೊಂಡೊಯ್ದವು. ಇದಾದ ಮೂರು ಸೆಕೆಂಡ್‌ನಲ್ಲಿ ಹಬೆ ಕೊಳವೆ ಸ್ಫೋಟವಾಯಿತು. ಇದು ಘಟಕವನ್ನು ಸಂಪೂರ್ಣ ಧ್ವಂಸಗೊಳಿಸಿತು. ಅವಶೇಷಗಳು ವಾತಾವರಣದ ಕಡಿಮೆ ಎತ್ತರದಲ್ಲಿ ಚೆಲ್ಲಾಡಿದವು’ ಎಂದು ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT