ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ ಷೇರು ಮರುಖರೀದಿ ನ. 29ರಿಂದ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊ, ಇದೇ 29ರಿಂದ ಷೇರು ಮರು ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

₹ 11 ಸಾವಿರ ಕೋಟಿಗಳ ಈ ಷೇರು ಮರು ಖರೀದಿ ಯೋಜನೆಯಲ್ಲಿ ಪ್ರತಿ ಷೇರನ್ನು ಸದ್ಯದ ದರದ ಶೇ 8.6ರಷ್ಟು ಹೆಚ್ಚಿನ ಬೆಲೆಗೆ (₹ 320ರ ದರದಲ್ಲಿ) ಖರೀದಿಸಲಾಗುವುದು.

ಅರ್ಹ ಷೇರುದಾರರು ನವೆಂಬರ್‌ 29 ರಿಂದ ಡಿಸೆಂಬರ್‌ 13ರ ಅವಧಿಯಲ್ಲಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು. ಷೇರು ಮರು ಖರೀದಿಯು ಪ್ರತಿ ಷೇರಿನ ಗಳಿಕೆ ಹೆಚ್ಚಿಸಲಿದ್ದು, ಸಂಸ್ಥೆಯಲ್ಲಿನ ಹೆಚ್ಚುವರಿ ನಗದನ್ನು ಷೇರುದಾರರಿಗೆ ವರ್ಗಾಯಿಸಲು ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT