ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಐಐ–ಐಸಿಆರ್‌ಸಿ ಪ್ರಶಸ್ತಿ ಗೌರವ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಿರುವನಂತಪುರದ ‘ಮಲಯಾಳ ಮನೋರಮಾ’ ಪತ್ರಿಕೆಯ ಮುಖ್ಯ ವರದಿಗಾರ ಮಹೇಶ್‌ ಗುಪ್ತನ್‌ ಮತ್ತು ಜೈಪುರದ ‘ಹಿಂದೂಸ್ತಾನ್‌ ಟೈಮ್ಸ್‌’ ಪತ್ರಿಕೆಯ ಮುಖ್ಯ ಛಾಯಾಗ್ರಾಹಕ ಹಿಮಾನ್ಶು ವ್ಯಾಸ್‌ ಅವರಿಗೆ ಪಿಐಐ-ಐಸಿಆರ್‌ಸಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಲೇಖನ ವಿಭಾ‌ಗದಲ್ಲಿ ಗುಪ್ತನ್‌ ಅವರ ‘ಅವರೂ ಕೂಡ ನಮ್ಮ ಮುದ್ದಿನ ಮಕ್ಕಳು’ ಲೇಖನ ಮತ್ತು ಛಾಯಾಗ್ರಹಣ ವಿಭಾಗದಲ್ಲಿ ‘ವ್ಹೀಲ್‌ಚೇರ್ ಟಿ-20 ಕ್ರಿಕೆಟ್ ರಾಷ್ಟ್ರೀಯ ತ್ರಿಕೋನ ಸರಣಿ’ಯಲ್ಲಿ ವ್ಯಾಸ್‌ ಸೆರೆ ಹಿಡಿದಿದ್ದ ಛಾಯಾಚಿತ್ರ ಮೊದಲ ಬಹುಮಾನಕ್ಕೆ ಭಾಜನವಾಗಿವೆ.

ಅತ್ಯುತ್ತಮ ಲೇಖನ ವಿಭಾಗದಲ್ಲಿ ಮಲಯಾಳ ಮನೋರಮಾ ಪತ್ರಿಕೆಯ ಮುಖ್ಯ ಉಪ ಸಂಪಾದಕ ಕೇರಳದ ಮಲ್ಲಪುರಂನ ಟಿ.ಅಜೀಶ್‌ ದ್ವಿತೀಯ ಮತ್ತು ‘ದಿ ವೀಕ್‌’ ವಾರಪತ್ರಿಕೆಯ ವಿಶೇಷ ಪ್ರತಿನಿಧಿ ಬೆಂಗಳೂರಿನ ಮಿನಿ ಥಾಮಸ್‌ ತೃತೀಯ ಬಹುಮಾನ ಪಡೆದುಕೊಂಡರು.

ಛಾಯಾಗ್ರಹಣ ವಿಭಾಗದಲ್ಲಿ ಹಿಂದೂಸ್ತಾನ್‌ ಟೈಮ್ಸ್‌ನ ವಿಶೇಷ ಛಾಯಾಗ್ರಾಹಕರಾದ ರಾಜ್‌ ಕೆ.ರಾಜ್‌ ಮತ್ತು ಕುನಾಲ್‌ ಪಿ.ಪಾಟೀಲ್‌ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.

‘ಇಂಡಿಯಾ ಸ್ಪೆಂಡ್‌’ ವೆಬ್‌ಸೈಟ್‌ನಲ್ಲಿ ಮೂರು ಭಾಗಗಳಾಗಿ ಪ್ರಕಟವಾದ ಸರಣಿ ಲೇಖನಗಳಿಗಾಗಿ ಸ್ವಾಗತ ಯಾದವರ್ ಮತ್ತು ಪ್ರಾಚಿ ಸಾಲ್ವೆ ಅವರಿಗೆ ವಿಶೇಷ ಪ್ರಶಸ್ತಿ ಲಭಿಸಿದವು.

ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ತಮಿಳುನಾಡು ಕರಕುಶಲ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಸಂತೋಷ್‌ ಬಾಬು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ‘ಅಶಕ್ತತೆ ಮೆಟ್ಟಿ ಬದುಕುವುದು– ಗೆಲುವುಗಳು ಮತ್ತು ಸವಾಲುಗಳು’ ಈ ವರ್ಷದ ಸ್ಪರ್ಧೆಯ ವಿಷಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT