ಹೈದರಾಬಾದ್‌

ವೈರಲ್‌ ವಿಡಿಯೊ: ಚುಡಾಯಿಸಿದ ಬಳಿಕ ಗಗನ ಸಖಿಯ ಕಾಲು ಮುಟ್ಟಿ ಕ್ಷಮೆ ಕೋರಿದ ಯುವಕ

ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕನೊಬ್ಬ ಗಗನ ಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಳಿಕ ಆಕೆಯ ಪಾದ ಮುಟ್ಟಿ ಕ್ಷಮೆ ಕೋರಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹೈದರಾಬಾದ್‌: ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕನೊಬ್ಬ ಗಗನ ಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಳಿಕ ಆಕೆಯ ಪಾದ ಮುಟ್ಟಿ ಕ್ಷಮೆ ಕೋರಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಳೆದ ಭಾನುವಾರ ಈ ಘಟನೆ ನಡೆದಿದೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಏರ್‌ಲೈನ್ಸ್‌ ಸಂಸ್ಥೆಯ ಗಗನ ಸಖಿಯೊಂದಿಗೆ ಭರತ್ ಮತ್ತು ಕಲ್ಯಾಣ್‌ ಎಂಬ  ಯುವಕರು ಅನುಚಿತವಾಗಿ ವರ್ತಿಸಿದ್ದಾರೆ. ಕೂಡಲೇ ಆ ಯುವತಿ ಗಸ್ತಿನಲ್ಲಿದ್ದ  ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಮಾನ ನಿಲ್ದಾಣದ  ಆವರಣದಲ್ಲಿನ ಪೊಲೀಸ್‌ ಠಾಣೆಗೆ ಆರೋಪಿತರನ್ನು ಕರೆತಂದಿದ್ದಾರೆ. ಮದ್ಯ ಸೇವಿಸಿದ್ದರಿಂದ ಅಮಲಿನಲ್ಲಿ ಈ ರೀತಿ ನಡೆದುಕೊಂಡಿದ್ದೇವೆ ಎಂದು ಹೇಳಿ ಆ ಗಗನ ಸಖಿಯ ಕ್ಷಮೆ ಕೋರಿದ್ದಾರೆ.

ಕೊನೆಗೆ ಪೊಲೀಸರ ಎದುರೇ ಒಬ್ಬ ಯುವಕ ಗಗನ ಸಖಿಯ ಕಾಲು ಮುಟ್ಟಿ ಕ್ಷಮೆ ಕೋರಿದ್ದಾನೆ.  ಈ ಘಟನೆ ಕುರಿತಂತೆ ಗಗನ ಸಖಿ ದೂರು ನೀಡಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಉತ್ತರ ಪ್ರದೇಶದ ಎಟಿಎಂನಲ್ಲಿ ಗ್ರಾಹಕರಿಗೆ ಸಿಕ್ಕಿದ್ದು ₹500 ನಕಲಿ ನೋಟು!

‘ಚಿಲ್ಡ್ರನ್‌ ಬ್ಯಾಂಕ್‌ ಆಫ್‌ ಇಂಡಿಯಾ’ನೋಟು
ಉತ್ತರ ಪ್ರದೇಶದ ಎಟಿಎಂನಲ್ಲಿ ಗ್ರಾಹಕರಿಗೆ ಸಿಕ್ಕಿದ್ದು ₹500 ನಕಲಿ ನೋಟು!

24 Apr, 2018
ಉತ್ತರ ಪ್ರದೇಶದಂಥ ರಾಜ್ಯಗಳೇ ಭಾರತ ಹಿಂದುಳಿಯಲು ಕಾರಣ: ಅಮಿತಾಭ್‌ ಕಾಂತ್

ನೀತಿ ಆಯೋಗದ ಸಿಇಒ ಹೇಳಿಕೆ
ಉತ್ತರ ಪ್ರದೇಶದಂಥ ರಾಜ್ಯಗಳೇ ಭಾರತ ಹಿಂದುಳಿಯಲು ಕಾರಣ: ಅಮಿತಾಭ್‌ ಕಾಂತ್

24 Apr, 2018
ಎನ್‌ಡಿಎ ಸರ್ಕಾರ ₹4 ಲಕ್ಷ ಕೋಟಿ ಸಾಲ ವಸೂಲಿ ಮಾಡಿದೆ ಎಂಬ ಬಿಜೆಪಿ ಮಾಹಿತಿ ನಿಜವೇ?

ಸುಳ್ಳು ಮಾಹಿತಿ ಹರಡಿದ್ದ ಬಿಜೆಪಿ, ನಮೋ ಆ್ಯಪ್‌
ಎನ್‌ಡಿಎ ಸರ್ಕಾರ ₹4 ಲಕ್ಷ ಕೋಟಿ ಸಾಲ ವಸೂಲಿ ಮಾಡಿದೆ ಎಂಬ ಬಿಜೆಪಿ ಮಾಹಿತಿ ನಿಜವೇ?

24 Apr, 2018
ವಾಗ್ದಂಡನೆ ನೋಟಿಸ್‌ ತಿರಸ್ಕರಿಸಿದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ: ಕಾಂಗ್ರೆಸ್

ನವದೆಹಲಿ
ವಾಗ್ದಂಡನೆ ನೋಟಿಸ್‌ ತಿರಸ್ಕರಿಸಿದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ: ಕಾಂಗ್ರೆಸ್

24 Apr, 2018
‘ಖಾತೆಗೆ ₹ 15 ಲಕ್ಷ: ಆರ್‌ಟಿಐ ವ್ಯಾಪ್ತಿಗೆ ಬರಲ್ಲ’

ಜನರ ಬ್ಯಾಂಕ್‌ ಖಾತೆಗೆ ₹15 ಲಕ್ಷ ಠೇವಣಿ
‘ಖಾತೆಗೆ ₹ 15 ಲಕ್ಷ: ಆರ್‌ಟಿಐ ವ್ಯಾಪ್ತಿಗೆ ಬರಲ್ಲ’

24 Apr, 2018