ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದಲ್ಲಿ ಆತ್ಮಹತ್ಯಾ ದಾಳಿ: 50 ಸಾವು

Last Updated 21 ನವೆಂಬರ್ 2017, 14:23 IST
ಅಕ್ಷರ ಗಾತ್ರ

ಕಾನೊ, ನೈಜೀರಿಯಾ (ಎಎಫ್‌ಪಿ):  ಈಶಾನ್ಯ ನೈಜೀರಿಯಾದಲ್ಲಿ ಮಂಗಳವಾರ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ. ಬೋಕೊ ಹರಾಮ್‌ ಜಿಹಾದಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮುಬಿ ಪ್ರಾಂತ್ಯದ  ಶುವಾ ಪ್ರದೇಶದಲ್ಲಿರುವ ಮದೀನಾ ಮಸೀದಿಯಲ್ಲಿ ಬೆಳಗಿನ ಜಾಗ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಬಾಂಬ್‌ ದಾಳಿ ನಡೆದಿದೆ. ‘ಕನಿಷ್ಠ 50 ಮಂದಿ ಸತ್ತಿದ್ದು, ನೂರಾರು ಜನರಿಗೆ ಗಾಯಗಳಾಗಿವೆ. ಇದುವರೆಗೂ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ’ ಎಂದು ಪೊಲೀಸರು ಎಎಫ್‌ಪಿಗೆ ತಿಳಿಸಿದ್ದಾರೆ.

‘ಘಟನೆಗೆ ಕಾರಣ ಯಾರು ಎಂಬುದು ನಮಗೆ ಗೊತ್ತಿದೆ,  ಆದರೆ ಈ ಸಂದರ್ಭದಲ್ಲಿ ಯಾರನ್ನೂ ಆರೋಪಿಯಾಗಿಸುವುದು ಸೂಕ್ತವಲ್ಲ’ ಎಂದು ಅವರು ಹೇಳಿದ್ದಾರೆ. 2009ರಿಂದ ಇಲ್ಲಿಯವರೆಗೆ ಬೋಕೊ ಹರಾಮ್‌ ಉಗ್ರರು ಕನಿಷ್ಠ 20ಸಾವಿರ ಮಂದಿಯನ್ನು ಬಲಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT