ವೈಯಕ್ತಿಕ ಸಾಲ: ಇನ್ನು ಸುಲಭ

ಸ್ಟ್ಯಾಷ್‍ಫಿನ್‍ನ ಉತ್ಪನ್ನಗಳು ಇದೀಗ ಪೈಸಾಬಜಾರ್‌ಡಾಟ್‌ಕಾಂ ತಾಣದಲ್ಲಿ ಲಭ್ಯ ಇರಲಿವೆ. ಸಾಲಗಾರರು ಅತ್ಯಂತ ಸುಲಭವಾಗಿ ಮತ್ತು ಯಾವುದೇ ಜಂಜಾಟ ಇಲ್ಲದೆ ಸಾಲ ಪಡೆಯಲು ಇದರಿಂದ ಸಾಧ್ಯವಾಗಲಿದೆ. ಜತೆಗೆ ತ್ವರಿತ ಗತಿಯ ಸಾಲ ವಿತರಣೆ ಸಾಧ್ಯವಾಗಲಿದೆ.

ವೈಯಕ್ತಿಕ ಸಾಲ: ಇನ್ನು ಸುಲಭ

ಆನ್‍ಲೈನ್ ಮೂಲಕ ಸಾಲ ನೀಡುವ ಸಂಸ್ಥೆಯಾಗಿರುವ ಸ್ಟ್ಯಾಷ್‍ಫಿನ್ (Stashfin), ಸಾಲ ಮತ್ತು ಕಾರ್ಡ್‍ಗಳಿಗೆ ಸಂಬಂಧಿಸಿದ  ಮಾರುಕಟ್ಟೆ ತಾಣ  ಪೈಸಾಬಜಾರ್‌ಡಾಟ್‌ಕಾಂ (Paisabazaar.com) ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಸ್ಟ್ಯಾಷ್‍ಫಿನ್‍ನ ಉತ್ಪನ್ನಗಳು ಇದೀಗ ಪೈಸಾಬಜಾರ್‌ಡಾಟ್‌ಕಾಂ ತಾಣದಲ್ಲಿ ಲಭ್ಯ ಇರಲಿವೆ. ಸಾಲಗಾರರು ಅತ್ಯಂತ ಸುಲಭವಾಗಿ ಮತ್ತು ಯಾವುದೇ ಜಂಜಾಟ ಇಲ್ಲದೆ ಸಾಲ ಪಡೆಯಲು ಇದರಿಂದ ಸಾಧ್ಯವಾಗಲಿದೆ. ಜತೆಗೆ ತ್ವರಿತ ಗತಿಯ ಸಾಲ ವಿತರಣೆ ಸಾಧ್ಯವಾಗಲಿದೆ.

ಇಂದಿನ ಯುವ ಪೀಳಿಗೆಯ ವೃತ್ತಿಪರರ ಆದ್ಯತೆಗೆ ಅನುಗುಣವಾಗಿ ಮತ್ತು ಗ್ರಾಹಕರ ನಡವಳಿಕೆ, ಅಗತ್ಯಗಳಿಗೆ ಪೂರಕವಾಗಿ ಸೇವೆ ಒದಗಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಸ್ಟ್ಯಾಷ್‍ಫಿನ್, ನವ ಪೀಳಿಗೆಯ ಸಾಲಗಾರರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದೆ. ಹಣಕಾಸು ಸೇವಾ ಕ್ಷೇತ್ರದ ಮಾಜಿ ವೃತ್ತಿಪರ ಪರಿಣತರನ್ನು ಹೊಂದಿರುವ ಸ್ಟ್ಯಾಷ್‍ಫಿನ್ ಸಂಸ್ಥೆಯ ತಂಡವು, ವೇತನ ಪಡೆಯುವ ವೃತ್ತಿಪರರ ವಲಯದಲ್ಲಿ ಮುಂಚೂಣಿ  ಸಾಲ ನೀಡುವ ತಾಣಗಳಲ್ಲಿ ಒಂದಾಗಿದೆ. ವಿವಿಧ ರೀತಿಯ ಸಾಲ ಸೌಲಭ್ಯಗಳು ಹಾಗೂ ಕ್ರೆಡಿಟ್ ಕಾರ್ಡ್ ವಹಿವಾಟಿನ ‘ಪೈಸಾಬಜಾರ್‌ಡಾಟ್‌ಕಾಂ’ ಸಂಸ್ಥೆಯು ದೇಶದ ಅತಿ ದೊಡ್ಡ ಆನ್‍ಲೈನ್ ಹಣಕಾಸು ಮಾರುಕಟ್ಟೆ ತಾಣವಾಗಿದೆ.

ಎರಡೂ ಸಂಸ್ಥೆಗಳ ತಂತ್ರಜ್ಞಾನ ಪ್ರಯೋಜನವನ್ನು ಪಡೆಯಲಿರುವ ಸಾಲಗಾರರು, ಸಾಲ ಪಡೆಯುವ ಕುರಿತು ತ್ವರಿತ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಈಗಾಗಲೇ  ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಸಾಲ ನೀಡಿಕೆ ಪ್ರಕ್ರಿಯೆಯಲ್ಲಿ ಇರುವಂತೆ ಸಾಲ ನೀಡುವ ಮತ್ತು ಪಡೆಯುವ ಪ್ರಕ್ರಿಯೆಯಲ್ಲಿ ಅನಗತ್ಯವಾಗಿರುವ ಕಾಗದ ಕೆಲಸದಿಂದ ಮುಕ್ತಿ ದೊರೆಯಲಿದೆ.

‘ಸಾಲ ಉತ್ಪನ್ನಗಳು ಮತ್ತು ಸಾಲಗಾರರರ ನಡುವೆ ಹಾಲಿ ಇರುವ ಅಂತರವನ್ನು ತೊಡೆದುಹಾಕುವಲ್ಲಿ ಈ ಒಪ್ಪಂದ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಸ್ಟ್ಯಾಷ್‍ಫಿನ್ ಸಂಸ್ಥೆಯ ಸಂಸ್ಥಾಪಕ ತುಷಾರ್ ಅಗರ್‌ವಾಲ್‌  ಹೇಳಿದ್ದಾರೆ.

‘ಸ್ಟ್ಯಾಷ್‍ಫಿನ್  ಜತೆಗಿನ ಸಹಭಾಗಿತ್ವದ ನೆರವಿನಿಂದ ಸಾಲದ ನಿರೀಕ್ಷೆಯಲ್ಲಿರುವ ಗ್ರಾಹಕರನ್ನು ತಲುಪಿ, ತ್ವರಿತ ಗತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಅವರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿದೆ’ ಎಂದು ಪೈಸಾಬಜಾರ್‌ಡಾಟ್‌ಕಾಂನ ಸಂಸ್ಥೆಯ ಸಿಇಒ ನವೀನ್ ಕುಕ್ರೇಜಾ ತಿಳಿಸಿದ್ದಾರೆ. ಪೈಸಾಬಜಾರ್ ಸಂಸ್ಥೆಯು ದೇಶದಾದ್ಯಂತ   250ಕ್ಕೂ ಅಧಿಕ ನಗರಗಳಲ್ಲಿ ಪ್ರತಿ ತಿಂಗಳೂ ಸುಮಾರು ₹ 300 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ವಿತರಿಸುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಐ.ಟಿ ರಿಟರ್ನ್‌  ಐಟಿಆರ್‌–1 ಫಾರಂ ಬಳಕೆ

ವಾಣಿಜ್ಯ
ಐ.ಟಿ ರಿಟರ್ನ್‌ ಐಟಿಆರ್‌–1 ಫಾರಂ ಬಳಕೆ

13 Jun, 2018
ಆದಾಯ, ತೆರಿಗೆ ವಿನಾಯ್ತಿಗೆ ವಿಮೆ

ವಾಣಿಜ್ಯ
ಆದಾಯ, ತೆರಿಗೆ ವಿನಾಯ್ತಿಗೆ ವಿಮೆ

13 Jun, 2018
ಡಿಜಿಟಲ್‌ ಯುಗದಲ್ಲಿ ಗೃಹಸಾಲ

ವಾಣಿಜ್ಯ
ಡಿಜಿಟಲ್‌ ಯುಗದಲ್ಲಿ ಗೃಹಸಾಲ

13 Jun, 2018
ಮತ್ತೆ ಬೇಸಿಕ್‌ ಫೋನ್‌ಗಳ ವೈಭವ

ವಾಣಿಜ್ಯ
ಮತ್ತೆ ಬೇಸಿಕ್‌ ಫೋನ್‌ಗಳ ವೈಭವ

13 Jun, 2018
ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ವರ್ಚುವಲ್ ರಿಯಾಲಿಟಿ

ವಾಣಿಜ್ಯ
ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ವರ್ಚುವಲ್ ರಿಯಾಲಿಟಿ

13 Jun, 2018