ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿನ್ನೆಲೆ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಲಿಂಗಾಯತ ಧರ್ಮ: ನಾಳೆ ರಾಷ್ಟೀಯ ಸಮಾವೇಶ’ ಎಂಬ ತಲೆಬರಹವನ್ನು (ಪ್ರ.ವಾ., ನ. 18) ಓದುತ್ತಿದ್ದಂತೆಯೇ ವಿವೇಕಾನಂದರು ಧರ್ಮವನ್ನು ಕುರಿತು ಹೇಳಿರುವ ಈ ಕೆಳಕಂಡ ನುಡಿಗಳು ಮತ್ತೆ ನೆನಪಾದವು.

‘ಯಾವುದೇ ಧಾರ್ಮಿಕ ಪಂಥವು ಜನಸಾಮಾನ್ಯರಲ್ಲಿ ಮೇಲುಗೈಯನ್ನು ಪಡೆದಾಗಲೆಲ್ಲಾ ಅದಕ್ಕೊಂದು ಆರ್ಥಿಕ ಹಿನ್ನೆಲೆಯಿರುತ್ತದೆ. ಧರ್ಮದ ಆರ್ಥಿಕ ಅಂಶವು ಮಾತ್ರ ಜನರ ಮನಸ್ಸನ್ನು ಸೆಳೆಯುತ್ತದೆಯೇ ಹೊರತು, ಅದರ ಆಧ್ಯಾತ್ಮಿಕ ಅಥವಾ ತಾತ್ವಿಕ ಅಂಶವಲ್ಲ. ನೀವು ಬೀದಿಯಲ್ಲಿ ಒಂದು ವರ್ಷ ಪರ್ಯಂತ ತತ್ವವನ್ನು ಬೋಧಿಸಿದರೂ ಕೆಲವೇ ಮಂದಿ ಅನುಯಾಯಿಗಳನ್ನೂ ನೀವು ಪಡೆಯಲಾರಿರಿ. ಆದರೆ ನೀವು ತುಂಬ ಅರ್ಥಹೀನವಾದುದನ್ನು ಬೋಧಿಸಿದರೂ ಅದರಲ್ಲಿ ಆರ್ಥಿಕ ಪ್ರಯೋಜನವಿರುವುದಾದರೆ ಇಡೀ ಜನಸಮೂಹವೇ ನಿಮ್ಮ ಹಿಂದೆ ಬರುತ್ತದೆ’ (ವಿವೇಕಾನಂದ ವಾಣಿ- ಬೆ.ರ.ರಂಗರಾಜು ಸಂಗ್ರಹ).
–ಸಿ.ಪಿ.ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT