ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರಂಕಿಯ ಗಡಿ ದಾಟಿ ಕ್ರಿಕೆಟ್ ಲೋಕದಲ್ಲಿ ಹೊಸ ಭಾಷ್ಯ ಬರೆದಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಗಳಿಸಿದ ಶ್ರೇಯಕ್ಕೆ ಪಾತ್ರರಾಗಿದ್ದರು. ಅವರು ಈ ಸಾಧನೆ ಮಾಡಿದ ವಿಶ್ವದ ಎಂಟನೇ ಆಟಗಾರ. ಭಾರತದ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ.
ಸಚಿನ್ ‘ಶತಕಗಳ ಶತಕ’ ದಾಖಲಿಸಿದ ಏಕೈಕ ಆಟಗಾರ ಎನಿಸಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ–20 ಸೇರಿ ಒಟ್ಟು 664 ಪಂದ್ಯಗಳನ್ನು ಆಡಿರುವ ಅವರು ಈ ಪೈಕಿ ಟೆಸ್ಟ್‌ನಲ್ಲಿ 51 ಶತಕಗಳನ್ನು ಸಿಡಿಸಿದ್ದಾರೆ.
ಏಕದಿನ ಮಾದರಿಯಲ್ಲಿ 49 ಬಾರಿ ಮೂರಂಕಿಯ ಗಡಿ ದಾಟಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ‘ಅರ್ಧಶತಕ‘ ದಾಖಲಿಸಿದವರ ಮಾಹಿತಿ ಇಲ್ಲಿದೆ.