ನಿಧಿಯಾಸೆಗೆ ದುಷ್ಕರ್ಮಿಗಳಿಂದ ಈಶ್ವರ ಮೂರ್ತಿ ಭಗ್ನ

‘ಎಲ್ಲಾ ಕೆಲಸ ಮುಗದ ಮ್ಯಾಲೆ ಗುಡಿಯ್ಯಾಗ ಮೂರ್ತಿಗೆ ಸುಣ್ಣ ಹಚ್ಚಿ ಹೋಗಬೇಕಂತ ಸುಣ್ಣ ಹಾಕಿ ಇಲ್ಲಿ ಇಟ್ಟಾರ ನೋಡ್ರಿ’ 

ಈಶ್ವರಲಿಂಗು ಕೆಳಗಿನ ಪಾಣಿಪೀಠದ ಕಲ್ಲಿನ ಸುತ್ತ ದುಷ್ಕರ್ಮಿಗಳು ನೆಲವನ್ನು ಅಗೆದ ಚಿತ್ರ.

ಬಿ.ಎನ್‌. ಜಾಲಿಹಾಳ (ಬಾದಾಮಿ) : ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಸೋಮವಾರ ರಾತ್ರಿ ನಿಧಿಯಾಸೆಗಾಗಿ ದುಷ್ಕರ್ಮಿಗಳು ಪ್ರಾಚೀನ ಗುಡಿಯಲ್ಲಿನ ಈಶ್ವರ ಮೂರ್ತಿಯನ್ನು ಸಂಪೂರ್ಣವಾಗಿ ಅಗೆದು ಕಿತ್ತು ಹಾಕಿದ್ದು, ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ.

ಚಾಲುಕ್ಯರು ಹುಲಿಗೆಮ್ಮನಕೊಳ್ಳದ ದೇವಾಲಯದ ಬೆಟ್ಟದ ಮೇಲೆ 6ರಿಂದ 8 ಚಿಕ್ಕ ಚಿಕ್ಕ ಈಶ್ವರ ದೇವಾಲಯಗಳನ್ನು ರೂಪಿಸಿದ್ದು, ಬೆಟ್ಟದ ಮೇಲಿನ ಪೂರ್ವದಿಕ್ಕಿನಲ್ಲಿರುವ ಈಶ್ವರ ಮೂರ್ತಿಯನ್ನು ಅಗೆದು ನಂತರ ಕಿತ್ತು ಹಾಕಿದ್ದಾರೆ.

ಮೂರ್ತಿಯ ಕೆಳಗಿನ ಪಾಣಿಪೀಠದ ಕಲ್ಲಿನ ಸುತ್ತ ಸಂಪೂರ್ಣವಾಗಿ ಅಗೆದಿದ್ದು, ಪಾಣಿಪೀಠ ಕೀಳಲು ಬಂದಿಲ್ಲ. ಅಗೆದ ಮಣ್ಣು ಮತ್ತು ಕಲ್ಲನ್ನು ಗುಡಿಯ ಹೊರಗಿನ ಭಾಗದಲ್ಲಿ ಹಾಕಿದ್ದಾರೆ. ಕೆಲಸ ಮುಗಿದ ಮೇಲೆ ಮೂರ್ತಿಗೆ ಸುಣ್ಣ ಬಳಿಯಲು ಪಾತ್ರೆಯಲ್ಲಿ ಸುಣ್ಣವನ್ನು ಹಾಕಿ ಇಟ್ಟಿದ್ದು ಕಂಡು ಬಂದಿದೆ.

‘ಎಲ್ಲಾ ಕೆಲಸ ಮುಗದ ಮ್ಯಾಲೆ ಗುಡಿಯ್ಯಾಗ ಮೂರ್ತಿಗೆ ಸುಣ್ಣ ಹಚ್ಚಿ ಹೋಗಬೇಕಂತ ಸುಣ್ಣ ಹಾಕಿ ಇಲ್ಲಿ ಇಟ್ಟಾರ ನೋಡ್ರಿ’ ಎಂದು ದೇವಾಲಯದಲ್ಲಿದ್ದ ಮಹಿಳೆಯೊಬ್ಬರು ಸುಣ್ಣದ ಪಾತ್ರೆಯನ್ನು ತೋರಿಸಿದರು.

ರಾತ್ರಿ 11 ಗಂಟೆ ಸುಮಾರಿಗೆ ಕುರಿದಡ್ಡಿಯಿಂದ ಕುರಿಗಳು ಕಳೆದ ಕಾರಣ ಇಬ್ಬರು ಕುರಿಗಾಯಿಗಳು ಹುಲಿಗೆಮ್ಮಕೊಳ್ಳಕ್ಕೆ ರಾತ್ರಿ ಬ್ಯಾಟರಿ ಮೂಲಕ ಬಂದಿದ್ದಾರೆ. ಬೆಳಕನ್ನು ನೋಡಿದ ನಿಧಿಗಳ್ಳರು ಯಾರೋ ಬಂದಿದ್ದಾರೆ ಎಂದು ಭಾವಿಸಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.

ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಎರಡು ಮೂರು ಬಾರಿ ಕಾರುಗಳು ಈ ರಸ್ತೆಯಲ್ಲಿ ಸಂಚರಿಸಿವೆ. ಪ್ರೇಕ್ಷಣೀಯ ಸ್ಥಳ ವೀಕ್ಷಿಸಲು ಯಾರಾದರೂ ಬಂದಿರಬಹುದು ಎಂದು ಭಾವಿಸಿದ್ದೆವು ಎಂದು ಗ್ರಾಮಸ್ಥರು ತಿಳಿಸಿದರು.

ಗುಡಿಯ ಅರ್ಚಕ ಲಕ್ಷ್ಮಣ ಪೂಜಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸಿಪಿಐ ಕೆ.ಎಸ್‌. ಹಟ್ಟಿ ಮತ್ತು ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ನಿಧಿಗಳ್ಳರ ಶೋಧ ಕಾರ್ಯ ಕೈಗೊಳ್ಳುವುದಾಗಿ ಸಿಪಿಐ ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು

ಬಾದಾಮಿ
‘ಪ್ರಧಾನಿ ಕೈ ಬಲಪಡಿಸಲು ಹೋರಾಟ’

‘ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಮತ್ತು ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಾದಾಮಿ ಕ್ಷೇತ್ರದಿಂದ ಬಿ. ಶ್ರೀರಾಮುಲು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ....

26 Apr, 2018

ಬಾಗಲಕೋಟೆ
ಯಶಸ್ವಿ ಸಂಧಾನ; ಕೋಪ ಶಮನ!

‘ಸಂಸದ ಬಿ.ಶ್ರೀರಾಮುಲುಗೆ ಮಾತ್ರ ಟಿಕೆಟ್ ಬಿಟ್ಟು ಕೊಡುವೆ’ ಎಂದು ಪಟ್ಟು ಹಿಡಿದ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ದಿಢೀರನೆ ತಾವೂ ನಾಮಪತ್ರ ಸಲ್ಲಿಸಿ ಬಂದು ಬಂಡಾಯದ...

26 Apr, 2018

ಬಾಗಲಕೋಟೆ
ಮತದಾನ ಜಾಗೃತಿಗೆ ಹಾಸ್ಯ ಕಾರ್ಯಕ್ರಮ

ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸಿರುವ ಹಾಸ್ಯ ಸಂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಕಲಾವಿದರಾದ ಪ್ರಾಣೇಶ, ಯಶವಂತ ಸರದೇಶಪಾಂಡೆ, ನರಸಿಂಹ ಜೋಶಿ, ಪ್ರಹ್ಲಾದ ಆಚಾರ್ಯ,...

26 Apr, 2018
ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ: ತೇಜಸ್ವಿ

ಜಮಖಂಡಿ
ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ: ತೇಜಸ್ವಿ

25 Apr, 2018

ರಬಕವಿ ಬನಹಟ್ಟಿ
ಸಿದ್ದು ಸವದಿ ನಾಮಪತ್ರ ಸಲ್ಲಿಕೆ

ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಏಳೂ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ವಿಜಯಶಾಲಿಗಳಾಗಲಿದ್ದಾರೆ ಎಂದು ತೇರದಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು...

25 Apr, 2018