ತುವಕೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ

ಪೊಲೀಸರಿಂದಲೇ ದೌರ್ಜನ್ಯ, ಅವರು ಏನು ಮಾಡಿದರೂ ನಡೆಯುತ್ತದೆಯೆ? ಆರೋಪಿತ ಯುವಕನ ತಾಯಿ ಆಕ್ರೋಶ

'ನಮ್ಮ ಮಗ ಯೂಸೂಫ್ ಮತ್ತು ಸಂಬಂಧಿ ರಿಯಾಜ್ ಪಾಷಾ ಯಾವುದೇ ತಪ್ಪು ಮಾಡಿಲ್ಲ, ಪೊಲೀಸರೇ ದೌರ್ಜನ್ಯ ನಡೆಸಿದ್ದಾರೆ' ಎಂದು ಯೂಸೂಫ್ ತಾಯಿ ಅಫ್ರೊಜ್ ಆರೋಪಿಸಿದರು.

ತುಮಕೂರು: 'ನಮ್ಮ ಮಗ ಯೂಸೂಫ್ ಮತ್ತು ಸಂಬಂಧಿ ರಿಯಾಜ್ ಪಾಷಾ ಯಾವುದೇ ತಪ್ಪು ಮಾಡಿಲ್ಲ, ಪೊಲೀಸರೇ ದೌರ್ಜನ್ಯ ನಡೆಸಿದ್ದಾರೆ' ಎಂದು ಯೂಸೂಫ್ ತಾಯಿ ಅಫ್ರೊಜ್ ಆರೋಪಿಸಿದರು.

ಸುಖಾ ಸುಮ್ಮನೆ ಪೊಲೀಸರೊಂದಿಗೆ ಜಗಳ ಮಾಡಲಾಗುತ್ತದೆಯೇ? ಪೋಲಿಸರೇ ನಮ್ಮ ಹುಡುಗರ ವಾಹನ ತಡೆದು ಏಕಾ ಏಕಿ ದೌರ್ಜನ್ಯ ನಡೆಸಿದ್ದಾರೆ. ಹೆಲ್ಮೆಟ್ ಹಾಕಿಲ್ಲದಿದ್ದರೆ ದಂಡ ಹಾಕಿ ಕ್ರಮ ಜರುಗಿಸಲಿ. ದೌರ್ಜನ್ಯ ಯಾಕೆ ಮಾಡಬೇಕು. ಠಾಣೆಯಲ್ಲಿ ನಮ್ಮ ಮಕ್ಕಳನ್ನೂ ಭೇಟಿ ಮಾಡಲು ಅವಕಾಶ ಕೊಡುತ್ತಿಲ್ಲ. ಪೊಲೀಸರು ಏನು ಮಾಡಿದರೂ ನಡೆಯುತ್ತದೆಯೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಿಯಾಜ್ ಪಾಷಾ ನಮ್ಮ ಸಂಬಂಧಿಕ. ಯೂಸೂಫ್ ನಮ್ಮ ಮಗನಾಗಿದ್ದು, ಬಿ.ಕಾಂ ಓದುತ್ತಿದ್ದಾನೆ. ರಿಯಾಜ್ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾನೆ. ಅಂಗಡಿಗೆ ಏನೊ ತರಬೇಕಾಗಿದೆ ಎಂದು ಹೋಗಿದ್ದಾಗ ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಎಂದು ಆಪಾದಿಸಿದರು.

ಭೇಟಿಗೆ ನಿರಾಕರಣೆ: ಹೊಸ ಬಡಾವಣೆ ಠಾಣೆಯಲ್ಲಿದ್ದ ಆರೋಪಿತರಾದ ಯೂಸೂಫ್ ಮತ್ತು ರಿಯಾಜ್ ಅವರನ್ನು ಭೇಟಿ ಮಾಡಲು ಕುಟುಂಬದವರಿಗೆ ಅವಕಾಶ ನಿರಾಕರಿಸಿದರು. ಮಾಧ್ಯಮದವರಿಗೂ ಆರೋಪಿಗಳ ಹೇಳಿಕೆ ಪಡೆಯಲು ಬಿಡಲಿಲ್ಲ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ. ಹೀಗಾಗಿ ಭೇಟಿಗೆ ಅವಕಾಶ ಕೊಡುವುದಿಲ್ಲ ಎಂದು ಮಾಧ್ಯಮದವರಿಗೆ ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ, ಸಿಪಿಐ ರಾಧಾಕೃಷ್ಣ ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ತಾಂತ್ರಿಕ ಸಹಾಯಕನಿಗೆ ಸಿಇಒ ಕಪಾಳಮೋಕ್ಷ

ಸೋಮವಾರಪೇಟೆ
ತಾಂತ್ರಿಕ ಸಹಾಯಕನಿಗೆ ಸಿಇಒ ಕಪಾಳಮೋಕ್ಷ

20 Jan, 2018
ಪಟಾಕಿಯನ್ನೂ ಸುಡದ ದೆಹಲಿಯೇ ಇಲ್ನೋಡು; ಇದು ಅಣುಬಾಂಬ್‌ಗೆ ಎದ್ದ ಹೊಗೆಯಲ್ಲ, ಬೆಂಗಳೂರಿನಲ್ಲಿ ಕೆರೆಗಳಿಗೆ ಕೊಳ್ಳಿಯಿಟ್ಟಿದ್ದೇವೆ!: ನಾಗರಿಕರ ಆಕ್ರೋಶ

ಬೆಳ್ಳಂದೂರು ಕೆರೆಗೆ ಮತ್ತೆ ಬೆಂಕಿ; ಸಂರಕ್ಷಣೆಗೆ ಸರ್ಕಾರ ವಿಫಲ
ಪಟಾಕಿಯನ್ನೂ ಸುಡದ ದೆಹಲಿಯೇ ಇಲ್ನೋಡು; ಇದು ಅಣುಬಾಂಬ್‌ಗೆ ಎದ್ದ ಹೊಗೆಯಲ್ಲ, ಬೆಂಗಳೂರಿನಲ್ಲಿ ಕೆರೆಗಳಿಗೆ ಕೊಳ್ಳಿಯಿಟ್ಟಿದ್ದೇವೆ!: ನಾಗರಿಕರ ಆಕ್ರೋಶ

20 Jan, 2018
ಉದ್ಯೋಗ ದೊರೆಯದವರ ಜತೆ ನಾವಿದ್ದೇವೆ: ಅನಂತಕುಮಾರ ಹೆಗಡೆ

ಉದ್ಯೋಗ ಮೇಳಕ್ಕೆ ಚಾಲನೆ
ಉದ್ಯೋಗ ದೊರೆಯದವರ ಜತೆ ನಾವಿದ್ದೇವೆ: ಅನಂತಕುಮಾರ ಹೆಗಡೆ

20 Jan, 2018
ಗೋಹತ್ಯೆ ನಿಷೇಧಕ್ಕೆ ರಕ್ತದಲ್ಲಿ ಪತ್ರ ಬರೆದ ಸ್ವಾಮೀಜಿಗಳು

ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ
ಗೋಹತ್ಯೆ ನಿಷೇಧಕ್ಕೆ ರಕ್ತದಲ್ಲಿ ಪತ್ರ ಬರೆದ ಸ್ವಾಮೀಜಿಗಳು

20 Jan, 2018
ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಎಸ್.ಎಂ.ಕೃಷ್ಣ  ಒತ್ತಾಯ

ಪ್ರಧಾನಿ ಮೋದಿಗೆ ಪತ್ರ
ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಎಸ್.ಎಂ.ಕೃಷ್ಣ ಒತ್ತಾಯ

20 Jan, 2018