ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಗೆ ರಾಣಿ ಪದ್ಮಾವತಿ ಕಥೆಯ ಬೋಧನೆ

Last Updated 22 ನವೆಂಬರ್ 2017, 14:56 IST
ಅಕ್ಷರ ಗಾತ್ರ

ಭೋಪಾಲ್: ಮುಂದಿನ ವರ್ಷದಿಂದ ಮಧ್ಯಪ್ರದೇಶದ ಶಾಲಾ ಮಕ್ಕಳಿಗೆ ರಜಪೂತ ರಾಣಿ ಪದ್ಮಾವತಿ ಕಥೆಯನ್ನು ಬೋಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ರಜಪೂತ ಸಮುದಾಯ ಉಜೈನಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಹಾಣ್ ಅವರು, ಕೆಲವು ದಿನಗಳಿಂದ ಪದ್ಮಾವತಿ ಸಿನಿಮಾಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮುಂದಿನ ವರ್ಷದಿಂದ ಎಲ್ಲಾ ಮಕ್ಕಳಿಗೆ ಪದ್ಮಾವತಿಯ ಇತಿಹಾಸವನ್ನು ತಿಳಿಸಬೇಕಾಗಿದೆ ಎಂದಿದ್ದಾರೆ.

ಮಹಾರಾಣಿ ಪದ್ಮಾವತಿಯ ಇತಿಹಾಸ ತಿಳಿದುಕೊಳ್ಳದ ಜನರು ಅಪ್ರಜ್ಞಾಪೂರ್ವಕವಾಗಿ ವರ್ತಿಸುತ್ತಿದ್ದಾರೆ. ಯುವಪೀಳಿಗೆ ಇತಿಹಾಸವನ್ನು ವಿರೂಪಗೊಳಿಸುತ್ತಿದೆ. ಹಾಗಾಗಿ ಮೊದಲು ಪದ್ಮಾವತಿಯ ವ್ಯಕ್ತಿತ್ವದ ಬಗ್ಗೆ ಬೋಧಿಸಬೇಕಾಗಿದೆ.

ಚೌಹಾಣ್ ಅವರು ಕೆಲವು ದಿನಗಳ ಹಿಂದೆ, ಮಧ್ಯಪ್ರದೇಶದಲ್ಲಿ ರಾಣಿ ಪದ್ಮಾವತಿಯ ಪ್ರತಿಮೆಯನ್ನು ನಿರ್ಮಿಸಲಾಗುವುದು. ಜತೆಗೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT