ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಕನ್ನಡ ಕಲರವ

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನ ಮೊದಲ ಮಗಳು ಅಮೆರಿಕದಲ್ಲಿ 5 ವರ್ಷದಿಂದ ನೆಲೆಸಿದ್ದಾಳೆ. ನನ್ನ ಮೊಮ್ಮಗಳನ್ನು ಎರಡೂವರೆ ವರ್ಷವಾದಾಗಿನಿಂದಲೇ ಅಲ್ಲಿನ ಡೇಕೇರ್‍ಗೆ ಕಳುಹಿಸುತ್ತಿದ್ದಾರೆ. ಅವಳು ಅಲ್ಲಿನ ವಾತಾವರಣಕ್ಕನುಸಾರ-ಮನೆಯಲ್ಲೂ ಇಂಗ್ಲೀಷ್‍ನಲ್ಲೇ ಮಾತಾಡಲು ಪ್ರಾರಂಭಿಸಿದ್ದಳು.

ಸುಮಾರು 2 ವರ್ಷದ ಹಿಂದೆ ನಾನು ಮಗಳ 2ನೇ ಹೆರಿಗೆಗೆ ಹೋಗಿದ್ದೆ. ಆಗ ಮೊಮ್ಮಗಳಿಗೆ ಕನ್ನಡದಲ್ಲೇ ಮಾತಾಡಲು ಪ್ರೇರೇಪಿಸಿದೆ. ಕನ್ನಡದ ಮಕ್ಕಳ ಚಿಕ್ಕ ಪದ್ಯಗಳನ್ನು ಹೇಳಿಕೊಟ್ಟೆ. ಅವಳು ಕನ್ನಡದಲ್ಲೇ ಎಲ್ಲರ ಜೊತೆ ಮಾತಾಡಿದರೆ ನಾನೂ ಅಲ್ಲೇ ಅವಳ ಜೊತೆ ಉಳಿಯುವುದಾಗಿ ಆಸೆ ತೋರಿಸಿದೆ. ಇಲ್ಲಿಂದ ತೆಗೆದುಕೊಂಡು ಹೋಗಿದ್ದ ಕನ್ನಡ ಅಕ್ಷರ ಮಾಲೆ ಪುಸ್ತಕದಲ್ಲಿ ದಿನಕ್ಕೊಂದು ಅಕ್ಷರ ತಿದ್ದಲು ಹೇಳಿಕೊಟ್ಟೆ.

ನಾನು ಅಲ್ಲಿದ್ದ 5 ತಿಂಗಳ ಅವಧಿಯಲ್ಲಿ ಪುಸ್ತಕದ ಅರ್ಧದಷ್ಟು ಭಾಗವನ್ನು ತಿದ್ದಿ ಮುಗಿಸಿದ್ದಳು. ಅಂದಿನಿಂದ ಇಂದಿವರೆಗೂ ನಮ್ಮೆಲ್ಲರ ಹತ್ತಿರ ಕನ್ನಡದಲ್ಲೇ ಮಾತನಾಡುತ್ತಾಳೆ. ಅವಳ ಪುಟ್ಟ ತಂಗಿಗೂ ಕನ್ನಡ ಮಾತಾಡಲು ಕಲಿಸಿದ್ದಾಳೆ.

ರಾಜೇಶ್ವರಿ ಚನ್ನೇಗೌಡ, ಶ್ರೀನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT