ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಭತ್ಯೆ ಮುಂದುವರಿಸಿ

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

31-12-1993ರ ಒಳಗೆ ನಿವೃತ್ತಿಯಾಗಿ, 80 ವರ್ಷ ಪೂರೈಸಿದ ಪಿಂಚಣಿದಾರರಿಗೆ ಸರ್ಕಾರವು ಒಂದು ವಿಶೇಷ ಭತ್ಯೆಯನ್ನು ನೀಡುತ್ತಾ ಬಂದಿದೆ. ಆದರೆ ಇತ್ತೀಚೆಗೆ 30-7-1993ಕ್ಕಿಂತ ಮುಂಚೆ ನಿವೃತ್ತಿಯಾಗಿ 80 ವರ್ಷ ಪೂರೈಸಿರುವ ಪಿಂಚಣಿದಾರರಿಗೆ ಮಾತ್ರ ಈ ಭತ್ಯೆ ನೀಡುವಂತೆ ಬ್ಯಾಂಕ್‍ಗಳಿಗೆ ಸರ್ಕಾರ ನಿರ್ದೇಶನ ಕೊಟ್ಟಿದೆ. ಇದರಿಂದ ಸಾವಿರಾರು ಪಿಂಚಣಿದಾರರು ವಿಶೇಷ ಭತ್ಯೆಯಿಂದ ವಂಚಿತರಾಗುವಂತಾಗಿದೆ.

ಈ ಹಿಂದೆ ಪಡೆದಿರುವ ವಿಶೇಷ ಭತ್ಯೆಯನ್ನು ಸಹ ಮರುಪಾವತಿಸುವಂತೆ ಬ್ಯಾಂಕ್‌ಗಳು ಸೂಚಿಸಿವೆ. ಇದರಿಂದ ವಯೋವೃದ್ಧ ಪಿಂಚಣಿದಾರರಿಗೆ ಆರ್ಥಿಕವಾಗಿ ಬಹಳಷ್ಟು ತೊಂದರೆಯಾಗಲಿದೆ. ಆದಕಾರಣ ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಮೊದಲಿನ ನಿಯಮವನ್ನೇ ಮುಂದುವರಿಸಬೇಕು. ಸಾವಿರಾರು ಪಿಂಚಣಿದಾರರ ಹಿತ ಕಾಯಬೇಕು.

–ಪ್ರೊ. ಎಸ್.ಆರ್. ಪಾಟೀಲ
ಮೂಡಲಗಿ, ಗೋಕಾಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT