ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿಯಲ್ಲೇ 4ರ ಹರೆಯದ ಬಾಲಕಿಗೆ ಸಹಪಾಠಿಯಿಂದ ಲೈಂಗಿಕ ದೌರ್ಜನ್ಯ!

Last Updated 23 ನವೆಂಬರ್ 2017, 12:06 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ದೆಹಲಿಯ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ 4ರ ಹರೆಯದ ಬಾಲಕಿಯೊಬ್ಬಳಿಗೆ ಆಕೆಯ ಸಹಪಾಠಿ ಬಾಲಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ನಡೆದಿದೆ. 

ಬಾಲಕಿಯ ಅಮ್ಮನ ದೂರಿನ ಪ್ರಕಾರ ಆರೋಪಿ ಬಾಲಕ ತನ್ನ ಮಗಳ ಗುಪ್ತಾಂಗಕ್ಕೆ ಪೆನ್ಸಿಲ್, ಬೆರಳಿನಿಂದ ಗಾಯ ಮಾಡಿದ್ದಾನೆ.  ಬಾಲಕಿಯ ಅಮ್ಮ ನೀಡಿದ ದೂರಿನನ್ವಯ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಸ್ಕೊ) ಬಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ದೆಹಲಿ ಎಸಿಪಿ ಹೇಳಿದ್ದಾರೆ.

ಕೇಸು ದಾಖಲಾಗಿದ್ದರೂ ಬಾಲಕನ ವಯಸ್ಸು ನೋಡಿ, ಮುಂದಿನ ಪ್ರಕ್ರಿಯೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಪೊಲೀಸರು ಇನ್ನೂ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ.

ಆರೋಪಿ ಬಾಲಕನನ್ನು ಶಾಲೆಯಿಂದ ಹೊರ ಹಾಕಿ
ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಾಲಕನ್ನು ಶಾಲೆಯಿಂದ ವಜಾ ಮಾಡಬೇಕು ಎಂದು ಬಾಲಕಿಯ ಅಮ್ಮ ಒತ್ತಾಯಿಸಿದ್ದಾರೆ. ಬಾಲಕನ ಕೃತ್ಯದ ಬಗ್ಗೆ ಶಾಲೆಯವರಿಗೆ ತಿಳಿಸಿದ್ದೆ. ಆ ಬಾಲಕನನ್ನು ತರಗತಿಯ ಬೇರೆ ಸೆಕ್ಷನ್‍ಗೆ ಹಾಕಲಾಗಿದೆ, ಇನ್ನು ಮುಂದೆ ಆ ಶಾಲೆಯಲ್ಲಿ ನನ್ನ ಮಗಳು ಸುರಕ್ಷಿತವಾಗಿರಲ್ಲ ಎಂದಿದ್ದಾರೆ.

ಅದೇ ವೇಳೆ ಮಗಳನ್ನು ಆ ಶಾಲೆಯಿಂದ ಬೇರೆ ಶಾಲೆಗೆ ದಾಖಲು ಮಾಡಲು ಅಮ್ಮ ತೀರ್ಮಾನಿಸಿದ್ದಾರೆ.

ಇಬ್ಬರೂ ಚಿಕ್ಕ ವಯಸ್ಸಿನ ಮಕ್ಕಳು. ಈ ಪ್ರಕರಣವನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸಬೇಕಾಗಿದೆ. ಈಗಾಗಲೇ ಬಾಲಕನಿಗೆ ಆಪ್ತ ಸಲಹೆ ನೀಡಲಾಗಿದೆ ಎಂದು ದೆಹಲಿ ಪೊಲೀಸ್ ಮುಖ್ಯಸ್ಥರ ವಕ್ತಾರ ದೆಪೇಂದ್ರ ಪಾಠಕ್ ಹೇಳಿದ್ದಾರೆ.

ಬಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಬಾಲಕಿಯ ಅಮ್ಮನ ಪ್ರಕಾರ ಆರೋಪಿ ಬಾಲಕ ಶಾಲಾ ತರಗತಿಯಲ್ಲಿ ಮತ್ತು ವಾಶ್ ರೂಂನಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.  ಭಾರತೀಯ ದಂಡ ಸಂಹಿತೆಯ ಪ್ರಕಾರ 7 ವರ್ಷದ ಕೆಳಗಿನ ಮಕ್ಕಳು ತಪ್ಪೆಸಗಿದರೆ ಆ ಪ್ರಕರಣವನ್ನು ವಿಶೇಷ ರೀತಿಯಲ್ಲಿ ನಿಭಾಯಿಸಬೇಕಾಗುತ್ತದೆ.

ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದುದರ ಬಗ್ಗೆ ದೂರು ನೀಡಿದ್ದರೂ ಶಾಲಾ ಅಧಿಕೃತರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಾಲಕಿಯ ಅಮ್ಮ ಶಾಲಾ ಅಧಿಕೃತರ ವಿರುದ್ಧ ಕಿಡಿ ಕಾರಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಹೇಳಿಕೆ ನೀಡಿರುವ ಅವರು, ಶಾಲಾ ಪ್ರಿನ್ಸಿಪಾಲ್, ಶಾಲೆಯ ಶಿಕ್ಷಕಿ ಮತ್ತು ಆಪ್ತ ಸಲಹೆಗಾರರನ್ನು ವಜಾ ಮಾಡಬೇಕು. ಶಾಲಾ ಅಧಿಕೃತರು ಫೇಸ್‍ಬುಕ್‍ನಲ್ಲಿ ಕ್ಷಮೆ ಯಾಚಿಸಬೇಕು ಮತ್ತು ತನ್ನ ಮಗಳ ಎರಡು ವರ್ಷದ ಶಾಲಾ ಶುಲ್ಕವನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT