ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಎಪಿಆರ್‌ಸಿ ರ‍್ಯಾಲಿ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅಂತರರಾಷ್ಟ್ರೀಯ ಏಷ್ಯಾ ಪೆಸಿಫಿಕ್‌ ರ‍್ಯಾಲಿ (ಎಪಿಆರ್‌ಸಿ), ಇಂಡಿಯನ್‌ ನ್ಯಾಷನಲ್‌ ರ‍್ಯಾಲಿ (ಐಎನ್‌ಆರ್‌ಸಿ) ಶುಕ್ರವಾರ ಆರಂಭವಾಗಲಿದ್ದು, 26ರವರೆಗೆ ಕಾರುಗಳ ಸದ್ದು ಮೊಳಗಲಿದೆ.

ದಿ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಚಿಕ್ಕಮಗಳೂರು ಮತ್ತು ಕಾಫಿ ಡೇ ಗ್ಲೊಬಲ್‌ ವತಿಯಿಂದ ರ‍್ಯಾಲಿ ಏರ್ಪಡಿಸಲಾಗಿದೆ. ದೇಶ ವಿದೇಶಗಳಿಂದ ಚಾಲಕ ಸ್ಪರ್ಧಿಗಳು ಕಾರುಗಳೊಂದಿಗೆ ನಗರಕ್ಕೆ ಬಂದಿದ್ದಾರೆ.

ಎಪಿಆರ್‌ಸಿ– 6, ಐಎನ್‌ಆರ್‌ಸಿ–39, ಜಿಪ್ಸಿ– 4 ಸಹಿತ ಒಟ್ಟು 49 ಕಾರುಗಳು ಕಣಿವೆಯಲ್ಲಿ ದೂಳೆಬ್ಬಿಸಲಿವೆ. 49 ಚಾಲಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಏಷ್ಯಾ ಪೆಸಿಫಿಕ್‌ ರ‍್ಯಾಲಿಗೆ 502 ಕಿಲೋ ಮೀಟರ್‌ ಮತ್ತು ಐಎನ್‌ಆರ್‌ಸಿ ರ‍್ಯಾಲಿಗೆ 224.72 ಕಿ.ಮೀ ದೂರ ನಿಗದಿಪಡಿಸಲಾಗಿದೆ.

ಏಷ್ಯಾ ಪೆಸಿಫಿಕ್‌ ರ‍್ಯಾಲಿ ಚಾಂಪಿಯನ್‌ಶಿಪ್ ಭಾರತದ ಗೌರವ್ ಗಿಲ್‌ ಅವರಿಗೋ ಅಥವಾ ನಾರ್ವೆಯ ಓಲೆ ಕ್ರಿಸ್ಟಿಯನ್‌ ವೆಬಿ ಅವರಿಗೋ ಎಂಬುದು ಈ  ರ‍್ಯಾಲಿಯಲ್ಲಿ ಗೊತ್ತಾಗಲಿದೆ. ಸ್ಕೋಡಾ ಫ್ಯಾಬಿಯಾ ಆರ್‌– 5 ಕಾರಿನಲ್ಲಿ ಚಮತ್ಕಾರ ಪ್ರದರ್ಶಿಸಲಿದ್ದಾರೆ. ಚಾಲಕರ ಸಾಹಸಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಗಳು ಕಾತುರರಾಗಿದ್ದಾರೆ. ವಿದೇಶಗಳಿಂದಲೂ ರ‍್ಯಾಲಿ ಪ್ರಿಯರು ಬಂದಿದ್ದಾರೆ.

ಐಎನ್‌ಆರ್‌ಸಿಲ್ಲಿ ಅರ್ಜುನ್‌ರಾವ್, ಸತೀಶ್‌ ರಾಜಗೋಪಾಲ್‌, ಅಮಿತರಾಜ್‌ ಜೀತ್‌ಗೋಶ್‌, ಅಶ್ವಿನ್‌ ನಾಯಕ್‌, ಕರ್ಣ ಕಡೂರು, ರಾಹುಲ್‌ ಕಾಂತರಾಜ್‌, ವಿವೇಕ್‌ ಭಟ್‌ ಪಾಲ್ಗೊಳ್ಳಲಿದ್ದಾರೆ. ಕಾಫಿ ಕಣಿವೆಯ ತಗ್ಗುದಿಣ್ಣೆಯ ಹಾದಿಯಲ್ಲಿ ಕಾರುಗಳ ಸಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT