2005ರಲ್ಲಿ ಲಡಾಕ್‌ನಲ್ಲಿ ಜನಿಸಿದ ತೆಂಜಿನ್, 19ನೇ ಬಕುಲಾ ರಿನ್‌ಪೋಚೆಯ ಪುನರ್ಜನ್ಮ ಎಂದು ಟಿಬೆಟನ್ನರು ನಂಬಿದ್ದಾರೆ. ಅಂದಿನಿಂದ ಬೌದ್ಧ ಅನುಯಾಯಿಗಳು ವಿಶೇಷ ಆಸಕ್ತಿ, ಭಕ್ತಿಯಿಂದ ನೋಡುತ್ತಿದ್ದ ತೆಂಜಿನ್, ಇಲ್ಲಿನ ಮೊನ್ಯಾಸ್ಟ್ರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದರು. 12ನೇ ವಯಸ್ಸಿಗೇ ಬೌದ್ಧ ಪಂಡಿತರ ಸರಿಸಮ ಕುಳಿತುಕೊಳ್ಳುವ ಯೋಗ ಪಡೆದುಕೊಂಡಿದ್ದಾರೆ ಎಂದು ಬೌದ್ಧ ಮಂದಿರದ ಮುಖಂಡ ಕೊಂಚೊಕ್ ನಂದಕ್ ‘ಪ್ರಜಾವಾಣಿ’ಗೆ ತಿಳಿಸಿದರು.