ದಾವಣಗೆರೆ

ಪರಿಹಾರಕ್ಕಾಗಿ ಉಪವಾಸ ಸತ್ಯಾಗ್ರಹ

‘ನಾವು ಸಣ್ಣ ರೈತರು. ನನ್ನ ಗಂಡನ ತಂದೆ ಹೆಸರಿಗೆ 1ಎಕರೆ 6 ಗುಂಟೆ ಜಮೀನು ಇದ್ದು, ಅವರಿಗೆ 3 ಗಂಡುಮಕ್ಕಳಿದ್ದಾರೆ. ನನ್ನ ಗಂಡ ಹಿರಿಯರಾಗಿದ್ದು, ಮನೆಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು

ದಾವಣಗೆರೆ: ಆತ್ಮಹತ್ಯೆ ಪ್ರಕರಣದಲ್ಲಿ ಪರಿಹಾರಕ್ಕೆ ಆಗ್ರಹಿಸಿ ಹರಿಹರ ತಾಲ್ಲೂಕು ಗಂಗನರಸಿ ರೈತ ಕುಟುಂಬ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿತು.

ಆತ್ಮಹತ್ಯೆ ಮಾಡಿಕೊಂಡ ರೈತ ನಾಗರಾಜ ಅವರ ಪತ್ನಿ ನೇತ್ರಾವತಿ ಈ ಸಂದರ್ಭ ಮಾತನಾಡಿ, ‘ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ನನ್ನ ಗಂಡನ
ಸಾವು ರೈತ ಆತ್ಮಹತ್ಯೆ ಪ್ರಕರಣದಲ್ಲಿ ದಾಖಲಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಇದುವರೆಗೂ ಪರಿಹಾರ ಸೌಲಭ್ಯ ಸಿಕ್ಕಿಲ್ಲ’ ಎಂದು ದೂರಿದರು.

‘ನಾವು ಸಣ್ಣ ರೈತರು. ನನ್ನ ಗಂಡನ ತಂದೆ ಹೆಸರಿಗೆ 1ಎಕರೆ 6 ಗುಂಟೆ ಜಮೀನು ಇದ್ದು, ಅವರಿಗೆ 3 ಗಂಡುಮಕ್ಕಳಿದ್ದಾರೆ. ನನ್ನ ಗಂಡ ಹಿರಿಯರಾಗಿದ್ದು, ಮನೆಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಅವರಿಗೆ ವಿವಿಧೆಡೆ ಸುಮಾರು ₹ 10ಲಕ್ಷ ಸಾಲ ಮಾಡಿದ್ದರು. ಬೆಳೆ ನಷ್ಟದಿಂದ ಸಾಲ ತೀರಿಸಲಾಗಿದೆ ನೊಂದು ಇದೇ ಜೂನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಪ್ರಕರಣ ವಿವರಿಸಿದರು.

‘ಹರಿಹರ ಗ್ರಾಮಾಂತರ ಠಾಣೆಯಲ್ಲಿ ಇದು ಆತ್ಮಹತ್ಯೆ ಪ್ರಕರಣ ಎಂದು ದಾಖಲಾಗಿದೆ. ಸರ್ಕಾರದಿಂದ ₹ 5ಲಕ್ಷ ಪರಿಹಾರ, ₹ 2 ಸಾವಿರ ವಿಧವಾ ಮಾಶಾಸನ ಇದುವರೆಗೂ ಸಿಕ್ಕಿಲ್ಲ. ಕುಟುಂಬ ನಿರ್ವಹಣೆ ನನಗೆ ಕಷ್ಟವಾಗುತ್ತಿದೆ. ಅಧಿಕಾರಿಗಳು ಆದಷ್ಟು ಬೇಗ ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ರೈತ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯ ರೈತ ಸಂಘದ ಹರಿಹರ ಮುಖಂಡ ರವಿ ಪಟೇಲ್ ಅವರೂ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಶಾಸಕ ಶಿವಶಂಕರ್‍ ನಾಮಪತ್ರ ಸಲ್ಲಿಕೆ ನಾಳೆ

ಹರಿಹರ
ಶಾಸಕ ಶಿವಶಂಕರ್‍ ನಾಮಪತ್ರ ಸಲ್ಲಿಕೆ ನಾಳೆ

22 Apr, 2018

ಹರಪನಹಳ್ಳಿ
ಹರಪನಹಳ್ಳಿ ಜನರು ಪ್ರಜ್ಞಾವಂತರು

‘ನಾನು ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ. ಸೇವೆ ಮಾಡುವೆ. ಆದರೆ, ಕರುಣಾಕರ ರೆಡ್ಡಿ ಶಾಸಕರಾಗಿ, ಸಚಿವರಾಗಿ ಕೋಟ್ಯಂತರ ಹಣ ಕೊಳ್ಳೆ ಹೊಡೆದಿದ್ದಾರೆ’ ಎಂದು ಬಿಜೆಪಿ...

22 Apr, 2018

ದಾವಣಗೆರೆ
ಕೆಜೆಪಿ ಮೇಲುಗೈ, ಬಿಜೆಪಿಯಲ್ಲಿ ಅಸಮಾಧಾನ!

ಅಂತೂ ಇಂತು ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಕೆಜೆಪಿ ಬಣ ಮೇಲುಗೈ ಸಾಧಿಸಿದೆ.

22 Apr, 2018

ಹೊನ್ನಾಳಿ
‘ಗೆದ್ದರೆ ತಾಲ್ಲೂಕಿನ ಕೆರೆಗಳಿಗೆ ನೀರು’

ಹೊನ್ನಾಳಿ ‘ತಾಲ್ಲೂಕಿನ ಮತದಾರರು ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು’ ಎಂದು ಶಾಸಕ ಡಿ.ಜಿ. ಶಾಂತನಗೌಡ ಮನವಿ ಮಾಡಿದರು.

22 Apr, 2018

ದಾವಣಗೆರೆ
ಎಸ್ಸೆಸ್, ಎಸ್‌ಎಸ್‌ಎಂ, ಎಸ್‌ಎಆರ್‌ ನಾಮಪತ್ರ ಸಲ್ಲಿಕೆ

ದಾವಣಗೆರೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದರು.

21 Apr, 2018