ಬೇಲೂರು

ವೀರಶೈವ ಮಠಗಳಿಗೆ ನೆರವು ನೀಡದ ಸರ್ಕಾರ

ಧರ್ಮ ಸಂದೇಶಗಳು ಮಾನವನನ್ನು ತಲುಪಬೇಕು. ಹಾಗಾದಾಗ ಮಾತ್ರ ಸಮಾಜ ಸರಿದಾರಿಯಲ್ಲಿ ನಡೆಯುತ್ತದೆ. ಕತ್ತಲೆಯನ್ನು ತೊಳೆಯಲು ಆತ್ಮಜ್ಞಾನದ ಅರಿವು ಆಗಬೇಕು

ಬೇಲೂರು: ‘ಸಿರಿವಂತ ಮಠಗಳು ಎಂಬ ಕಾರಣಕ್ಕೆ ವೀರಶೈವ ಮಠಗಳಿಗೆ ಸರ್ಕಾರ ನೆರವು ನೀಡುತ್ತಿಲ್ಲ’ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠಾಧೀಶರಾದ ಡಾ.ಅನ್ನದಾನೀಶ್ವರ ಮಹಾ ಶಿವಯೋಗಿ ಸ್ವಾಮೀಜಿ ಆರೋಪಿಸಿದರು.

ತಾಲ್ಲೂಕಿನ ಬಿಕ್ಕೋಡಿನಲ್ಲಿರುವ ಕೋಡಿಮಠದ ಶಾಖಾಮಠವಾದ ವಿರಕ್ತ ದೊಡ್ಡ ಮಠದಲ್ಲಿ ಬುಧವಾರ ರಾತ್ರಿ ನಡೆದ ಲಕ್ಷದೀಪೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಠ ಮಾನ್ಯಗಳಿಗೆ ರಾಜಮಹಾರಾಜರು ಹಿಂದೆ ಗೌರವ ನೀಡುತ್ತಿದ್ದರು. ಇಂದಿನ ಸರ್ಕಾರಗಳು ಮಠಮಾನ್ಯಗಳಿಗೆ ನೆರವಿನ ಹಸ್ತ ಚಾಚುತ್ತಿಲ್ಲ. ಆದರೂ ಮಠಗಳು ಸರ್ಕಾರಗಳತ್ತ ಕೈಯ್ಯೊಡ್ಡುವ ಕೆಲಸ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಸಮಾಜದಲ್ಲಿ ಎಲ್ಲವೂ ವ್ಯಾವಹಾರಿಕವಾಗಿಯೇ ನಡೆಯುತ್ತಿವೆ. ಸಂಬಂಧಗಳು ಹಾದಿ ತಪ್ಪುತ್ತಿವೆ. ಅಂತರಂಗದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ದೀಪವನ್ನು ಹಚ್ಚುವ ಕೆಲಸ ಆಗಬೇಕಿದೆ ಎಂದರು.

ಧರ್ಮ ಸಂದೇಶಗಳು ಮಾನವನನ್ನು ತಲುಪಬೇಕು. ಹಾಗಾದಾಗ ಮಾತ್ರ ಸಮಾಜ ಸರಿದಾರಿಯಲ್ಲಿ ನಡೆಯುತ್ತದೆ. ಕತ್ತಲೆಯನ್ನು ತೊಳೆಯಲು ಆತ್ಮಜ್ಞಾನದ ಅರಿವು ಆಗಬೇಕು ಎಂದು ನುಡಿದರು.

ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ಮೂರು ಕಳಸದ ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಸಂಕಲಾಪುರ ಮಠದ ಧರ್ಮರಾಜೇಂದ್ರ ಮಹಾಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಕತ್ರಿಘಟ್ಟದ ಚಂದ್ರಶೇಖರ ಗುರೂಜಿ, ಮೌಲ್ವಿ ಇಬ್ರಾಹಿಂ ಮುಸಲಿಯಾರ್‌, ಜಿ.ಪಂ. ಸದಸ್ಯ ರತ್ನಮ್ಮ ಐಸಾಮಿ ಗೌಡ, ತಾ.ಪಂ. ಅಧ್ಯಕ್ಷ ಪಿ.ಎಸ್‌.ಹರೀಶ್‌, ಉಪಾಧ್ಯಕ್ಷೆ ತೀರ್ಥಮ್ಮ, ಬಿಕ್ಕೋಡು ಗ್ರಾ.ಪಂ. ಅಧ್ಯಕ್ಷ ಯುವರಾಜು, ಕಾಫಿ ಬೆಳೆಗಾರ ಎಂ.ಎಸ್‌.ಪರಮಶಿವಪ್ಪ, ವೀರಶೈವ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಐಸಾಮಿಗೌಡ, ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎಂ.ದಯಾನಂದ್‌, ಪ್ರಮುಖರಾದ ಗಣೇಶ್‌, ಜೆ.ಸಿ.ಮೋಹನ್‌ಕುಮಾರ್‌, ಬಿಕ್ಕೋಡು ಬಸವರಾಜು ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ದಿನದಲ್ಲಿ ಒಂದೇ ಬಾರಿ ಆಹಾರ

ಶ್ರವಣಬೆಳಗೊಳ
ದಿನದಲ್ಲಿ ಒಂದೇ ಬಾರಿ ಆಹಾರ

21 Jan, 2018

ಅರಕಲಗೂಡು
ಅರಕಲಗೂಡಿನಲ್ಲಿ ರೈತರಿಂದ ಪ್ರತಿಭಟನೆ

ಬರಗಾಲದಿಂದ ತತ್ತರಿಸಿರುವ ಅನ್ನದಾತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಸರ್ಕಾರ ನಿದ್ರಿಸುತ್ತಿದೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ...

21 Jan, 2018
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

ಶ್ರವಣಬೆಳಗೊಳ
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

20 Jan, 2018
ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧ ಪೂರೈಸಿ

ಹಾಸನ
ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧ ಪೂರೈಸಿ

20 Jan, 2018

ಹಾಸನ
ಉತ್ತರ ಭಾರತ ಯುವಕರಿಗೆ ಥಳಿತ

ಎನ್‌.ಆರ್‌.ವೃತ್ತದಿಂದ ಹೊಸಕೊಪ್ಪಲು ಕಡೆಗೆ ಹೋಗುತ್ತಿದ್ದ ಆಟೊದಲ್ಲಿ ಯುವತಿ ಪ್ರಯಾಣಿಸುತ್ತಿದ್ದರು.

20 Jan, 2018