ಜನರೇಷನ್ ಗ್ಯಾಪ್

ಕಾಲದೊಂದಿಗೆ ಬದಲಾಗಲಿ ಪೀಳಿಗೆಯ ಅಂತರ

ಅಜ್ಜಿಯ ಸೀರೆ, ಅಮ್ಮನ ಚೂಡಿದಾರ್, ಮಗಳ ಜೀನ್ಸ್, ಅಜ್ಜನ ಪಂಚೆ, ಅಪ್ಪನ ಪ್ಯಾಂಟ್ ಹಾಗೂ ಮಗನ ಬರ್ಮುಡ – ಎಲ್ಲವೂ ಸಹಜ ಸುಂದರ ಎಂಬ ಭಾವನೆ ನಮ್ಮಲ್ಲಿದ್ದರೆ ಗ್ಯಾಪ್‌ಗೆ ಆಸ್ಪದವಿಲ್ಲ.

ಕಾಲದೊಂದಿಗೆ ಬದಲಾಗಲಿ ಪೀಳಿಗೆಯ ಅಂತರ

ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದೂ ತಾಳಕ್ಕೆ ತಕ್ಕಂತೆ ಕುಣಿಯಬೇಕು’ – ಈ ನಾಣ್ನುಡಿಯನ್ನು ಹಿರಿಯರು ಕಿರಿಯರು ಎಲ್ಲರೂ ಸರಿಯಾಗಿ ಅರ್ಥ್ಯೆಸಿಕೊಂಡರೆ ಜನರೇಷನ್ ಗ್ಯಾಪ್ ಇರದೆ ಜನರೇಷನ್ ಬೆಸುಗೆ ಇರುತ್ತದೆ ಎಂದು ನನ್ನ ಅನುಭವ ಹಾಗೂ ಅಭಿಪ್ರಾಯ.

ಅಜ್ಜಿಯ ಸೀರೆ, ಅಮ್ಮನ ಚೂಡಿದಾರ್, ಮಗಳ ಜೀನ್ಸ್, ಅಜ್ಜನ ಪಂಚೆ, ಅಪ್ಪನ ಪ್ಯಾಂಟ್ ಹಾಗೂ ಮಗನ ಬರ್ಮುಡ – ಎಲ್ಲವೂ ಸಹಜ ಸುಂದರ ಎಂಬ ಭಾವನೆ ನಮ್ಮಲ್ಲಿದ್ದರೆ ಗ್ಯಾಪ್‌ಗೆ ಆಸ್ಪದವಿಲ್ಲ. ಬಾಲ್ಯದಲ್ಲಿ ಮಕ್ಕಳನ್ನು ನಮ್ಮ ಪ್ರತಿಷ್ಠೆಗೆ ಅನುಗುಣವಾಗಿಯೋ, ಹಣದ ಬಲದಿಂದಲೋ ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಬೆಳೆಸಿ ಮಕ್ಕಳು ಪ್ರಾಯಕ್ಕೆ ಬಂದ ಅನಂತರ ಸಂಪ್ರದಾಯ, ಆಚಾರ–ವಿಚಾರದ ಬಗ್ಗೆ ಹೇಳಿದರೆ ಹಿರಿಯರು ಮತ್ತು ಕಿರಿಯರ ಮಧ್ಯೆ ಗ್ಯಾಪ್ ಮೂಡುವುದು ಸಹಜ.

ಜಾಗತೀಕರಣದಿಂದ ಹಾಗೂ ಸಂಪರ್ಕ ಮಾಧ್ಯಮಗಳಿಂದ ತೀವ್ರವಾಗಿ ಬದಲಾವಣೆಗಳಾಗುತ್ತಿರುವ ಈ ಕಾಲದಲ್ಲಿ ಮಕ್ಕಳ ಭಾವನಾತ್ಮಕ ಗುಣಗಳನ್ನು ಅರಿಯುವುದರಲ್ಲಿ ಹಿರಿಯರು ವಿಫಲರಾಗುತ್ತಿದ್ದಾರೆ. ಹೆಣ್ಣುಮಕ್ಕಳಿಗಾದರೂ ಅವರ ತಾಯಂದಿರು ಸ್ವಲ್ಪ ಮಟ್ಟಿಗೆ ಭಾವನೆಗಳನ್ನು ಹಂಚಿಕೊಳ್ಳಲು ಸಹಕರಿಸುತ್ತಾರೆ. ಆದರೆ ಗಂಡುಮಕ್ಕಳ ಪಾಡು ಅಯ್ಯೋ ಎನಿಸುತ್ತದೆ. ಗಂಡು ಹೇಗೆ ಬೆಳೆದರೂ ಚೆಂದ ಎನ್ನುವವರು ಕೆಲವರಾದರೆ ಹಲವರು ಸದಾ ಸಂಶಯದಲ್ಲಿ ಅವರನ್ನು ನೋಡುತ್ತಾ ಹಿತವಚನಗಳ ಮಹಾಪೂರವನ್ನೇ ಹರಿಸುತ್ತಾರೆ.

ಗಂಡುಮಕ್ಕಳನ್ನು ಹೆತ್ತ ಹೆಚ್ಚಿನ ಪಾಲಕರು ಮಕ್ಕಳೊಂದಿಗೆ ಮನ ಬಿಚ್ಚಿ ಮಾತನಾಡುವುದೇ ಕಡಿಮೆ. ಆಗ ಅವರಿಗೆ ಸ್ನೇಹಿತರೇ ಆತ್ಮೀಯರಾಗುತ್ತಾರೆ. ಮಕ್ಕಳು ಪಾಲಕರ ಜಾಲಕ್ಕೆ ಸಿಕ್ಕ ಮೀನಾಗದೆ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳಾಗಬೇಕು. ಅವರ ಆನಂದದ ಹಾರಾಟವನ್ನು ಮನಃಪೂರ್ವಕವಾಗಿ ಆಸ್ವಾದಿಸುವ ಮನಃಸ್ಥಿತಿ ಪಾಲಕರಲ್ಲಿ ಇರಬೇಕು. ಬೆಳೆದ ಮಗನೊಂದಿಗೆ ಆತ್ಮೀಯವಾಗಿ ವ್ಯವಹರಿಸುವ ತಾಯಂದರಿಗೆ ಮಗನನ್ನು ಮುಚ್ಚಟೆಯಾಗಿ ಬೆಳೆಸುತ್ತಿದ್ದಾಳೆ – ಎಂದು ಹಾಗೂ ಮಗನನ್ನು ‘ಅಮ್ಮನ ಬಾಲ’, ‘ಹೆಣ್ಣಪ್ಪಿ’ ಎಂದೆಲ್ಲಾ ಆಗ ಜೆರಿಯುತ್ತಾರೆ. ಹೆತ್ತವರ ಸಾಂಗತ್ಯ ಕಡಿಮೆ ಆದಷ್ಟೂ ಜನರೇಷನ್ ಗ್ಯಾಪ್ ಏರ್ಪಟ್ಟು ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ.

ಅತ್ತೆ–ಸೊಸೆ, ಮಾವ–ಅಳಿಯ, ಮಗ–ಮಗಳು, ಮೊಮ್ಮಕ್ಕಳು – ಹೀಗೆ ಎಲ್ಲರೂ ಪರಸ್ಪರ ಹೊಂದಿಕೊಂಡು ಕಾಲದ ಓಟದಲ್ಲಿ ಸ್ವಲ್ಪ ಹಿಂದುಮುಂದಾದರೂ ಹೊಂದಾಣಿಕೆ ಮಾಡಡಿಕೊಂಡು ಮುಂದೆ ನಡೆದರೆ ಜನರೇಷನ್ ಗ್ಯಾಪ್ ಇರದೆ ಬೆಸುಗೆಗೆ ಅವಕಾಶವಿರುತ್ತದೆ. ಹಳೆಯ ಬೇರು ಸ್ವಲ್ಪ ಚಿಗುರಲು ಪ್ರಯತ್ನಿಸಿದರೆ ಹೊಸ ಚಿಗುರು ಹಳೆಯ ಸತ್ವಗಳನ್ನು ಹೀರಿಕೊಂಡು ಸಮೃದ್ಧವಾಗಿ ಬೆಳೆಯುತ್ತದೆ. ಇದು ನನ್ನದೇ ಅನುಭವ.

Comments
ಈ ವಿಭಾಗದಿಂದ ಇನ್ನಷ್ಟು
‘ನಿದ್ದೆಯಲ್ಲೇ ನನ್ನ ಮಾತುಕತೆ!’

ಸಲಹೆ
‘ನಿದ್ದೆಯಲ್ಲೇ ನನ್ನ ಮಾತುಕತೆ!’

17 Mar, 2018
ಬೆನ್ನಿನ ಬಿಗಿತ ನಿವಾರಣೆಗೆ ಕಟಿ ಚಕ್ರಾಸನ

ಯೋಗ
ಬೆನ್ನಿನ ಬಿಗಿತ ನಿವಾರಣೆಗೆ ಕಟಿ ಚಕ್ರಾಸನ

17 Mar, 2018
ಯುಗದ ಆದಿ ಯುಗಾದಿ

ಭೂಮಿಕಾ
ಯುಗದ ಆದಿ ಯುಗಾದಿ

17 Mar, 2018
ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

ಆಯುರ್ವೇದ
ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

17 Mar, 2018
ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

ಭೂಮಿಕಾ
ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

17 Mar, 2018