ನುಡಿಹಬ್ಬದಲ್ಲಿ ಕಂಡ ಬಿಡಿ ಚಿತ್ರಗಳು

ಕನ್ನಡದ ಭಾವಾವೇಶ, ಹಲವು ವೇಷ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಿಂದ ಸ್ಕೂಟರ್‌ನಲ್ಲಿ ಬಂದಿರುವ ಭೀಮರಾಯ ಹೂಗಾರ ಹಲವು ವರ್ಷಗಳಿಂದ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 5,000 ಕನ್ನಡ ನುಡಿಮುತ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಮಾರಾಟ ಮಾಡುತ್ತಿದ್ದಾರೆ.

ಭೀಮರಾಯ ಹೂಗಾರ

ಮೈಸೂರು: ಕನ್ನಡಕ್ಕಾಗಿ ಸ್ವಯಂ ಪ್ರೇರಣೆಯಿಂದ ನಾಡಿನ ಎಲ್ಲೆಡೆಯಿಂದ ಮೈಸೂರಿಗೆ ಬಂದ ಹಲವರು ಸಮ್ಮೇಳನದಲ್ಲಿ ಮಿಂಚುತ್ತಿದ್ದಾರೆ. ಕನ್ನಡಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವ ಇವರನ್ನು ಕಂಡರೆ ಯಾರಿಗಾದರೂಸ್ಫೂರ್ತಿಯುಕ್ಕದೇ ಇರದು.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಿಂದ ಸ್ಕೂಟರ್‌ನಲ್ಲಿ ಬಂದಿರುವ ಭೀಮರಾಯ ಹೂಗಾರ ಹಲವು ವರ್ಷಗಳಿಂದ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 5,000 ಕನ್ನಡ ನುಡಿಮುತ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಮಾರಾಟ ಮಾಡುತ್ತಿದ್ದಾರೆ. ತಮ್ಮ ಸ್ಕೂಟರ್‌ ಅನ್ನು ಕೆಂಪು ಹಳದಿ ಬಾವುಟಗಳಿಂದ  ಅಲಂಕರಿಸಿ, ಮೂರು ದಿನಗಳ ಕಾಲ ಬರುವ ದಾರಿಯುದ್ದಕ್ಕೂ ಕನ್ನಡ ಸಮ್ಮೇಳನದ ಹಿರಿಮೆ ಬಗ್ಗೆ ಡಂಗುರ ಸಾರುತ್ತಿದ್ದಾರೆ. ‘ಕನ್ನಡದ ಪುಸ್ತಕ ಓದುವವರು ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಕನ್ನಡ ಸಾಹಿತ್ಯವುಳ್ಳ ಎಲ್ಲ ರೀತಿಯ ಪುಸ್ತಕಗಳನ್ನು ನಾನು ಮಾರುತ್ತೇನೆ. ಈ ಮೂಲಕವಾದರೂ ಕನ್ನಡದ ಕಂಪು ಪಸರಿಸಲಿ ಎನ್ನುವುದು ನನ್ನ ಉದ್ದೇಶ’ ಎಂದು ಅವರು ವಿವರಿಸಿದರು.

Comments