ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ವೈಭವ ಪ್ರದರ್ಶನದಲ್ಲಿ ಗಮನ ಸೆಳೆದ ಸಂಗೀತ ಪರಿಕರ

Last Updated 25 ನವೆಂಬರ್ 2017, 9:23 IST
ಅಕ್ಷರ ಗಾತ್ರ

ಉಡುಪಿ: ‘ಹಿಂದೂ ವೈಭವ’ ಪ್ರದ ರ್ಶನದಲ್ಲಿರುವ ಭಾರತ ಮೊಟ್ಟ ಮೊದಲ ಸಂಗೀತ ವಸ್ತು ಸಂಗ್ರ ಹಾಲಯ ಎಂಬ ಹೆಗ್ಗಳಿಕೆ ಪಡೆದ ಗಂಗೂಬಾಯಿ ಹಾನಗಲ್‌ ವಸ್ತು ಸಂಗ್ರ ಹಾಲಯದ ನೂರು ವರ್ಷದ ಹಳೆ ವಾದ್ಯಗಳಾದ ತಾವುಸ, ತಂಬೂರಿ, ರುದ್ರ ವೀಣಾ, ಬೀನ್ ಗಮನ ಸೆಳೆ ಯುತ್ತಿವೆ. ಅದನ್ನು ನೋಡಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ.

ಡಾ. ಗಂಗೂಬಾಯಿ ಹಾನಗಲ್‌ ಅವರ ಮೊಮ್ಮಗ ಮನೋಜ ಹಾನ ಗಲ್‌ 2005ರಲ್ಲಿ ಕೇವಲ 30 ಪರಿಕರಗಳೊಂದಿಗೆ ಆರಂಭಿಸಿದ ಸಂಗ್ರ ಹಾಲಯದಲ್ಲಿ ಇಂದು 160ಕ್ಕೂ ಹೆಚ್ಚಿನ ವಾದ್ಯಗಳಿವೆ.

ಭಾರತೀಯ ಶಾಸ್ತ್ರೀಯ ಸಂಗೀತ, ಜಾನಪದ, ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ತಂತಿ ವಾದ್ಯ , ಚರ್ಮ ವಾದ್ಯ, ಗಾಳಿ ವಾದ್ಯ, ಗಾಜಿನ ವಾದ್ಯ, ಮಣ್ಣಿನ ವಾದ್ಯ, ಲೋಹದ ವಾದ್ಯ ಸೇರಿದಂತೆ, ತಾಪುರ, ತಂಬೂರಿ, ವೀಣೆ, ಸಿತಾರ, ಸಾರಂಗಿ, ವಯಲಿನ್, ರುದ್ರ ವೀಣಾ, ಕುಚುವಾ ಸಿತಾರ, ಸರೋದ್, ದಿಲರುಬಾ, ಮ್ಯಾಂಡೋಲಿನ್‌, ಸ್ವರ ಮಂಡಳ, ಬೀನ್, ದುರ ಪೆಟ್ಟಿಗೆ, ಘಟಂ, ಭಜನ ತಾನಪುರ, ಸ್ವರ ಮಂಡಳ, ಸ್ವರ ಪೆಟ್ಟಿಗೆ, ತಬಲಾ, ಡಗ್ಗಾ, ಹಾರ್ಮೋನಿಯಂ, ತಾವುಸ್, ಸುರಸೋಟಾ, ಜಲತರಂಗ, ಏಕತಾರ ಡೊಳ್ಳು, ನಗಾರಿ, ಕುಡುಕಿ, ಚೆಂಡೆ, ಶಂಖ, ಸಾಂಬಳ, ಸೂರಪೆಟ್ಟಿಗೆ, ಕಹಳೆ, ತುಂತುನಿ, ಪುಂಗಿ, ಶಹನಾಯಿ, ಟ್ರಂಪ್ ಪ್ಯಾಡ್, ಬ್ಯಾಂಡ್ ಸೆಟ್, ಬಿಗಲು, ಗೆಜ್ಜೆ, ಕೊಳಲು, ಬೆಂಗಾಲಿ, ಹಲಗೆ, ಡುಕ್ಕಡ, ಗುಮ್ಮುಟಿ, ಸುರಸೊಟಾ ಹೀಗೆ ವಿವಿಧ ಬಗ್ಗೆ ಚರ್ಮ ವಾದ್ಯಗಳು ಹಾಗೂ ಬುಡಕಟ್ಟು ವಾದ್ಯಗಳು ಸೇರಿದಂತೆ 200ಕ್ಕೂ ಅಧಿಕ ವಾದ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್‌ ಅವರು ಉಪಯೋಗಿಸಿದ ತಂಬೂರಿ ಕೂಡ ಪ್ರದರ್ಶನದ ಆಕರ್ಷಣೆಯನ್ನು ಹೆಚ್ಚಿಸಿದೆ. ಈಗಾಗಲೇ ಸಾವಿರಾರು ಮಂದಿ ಜನರು ನೋಡಿ ಅಭಿಪ್ರಾಯ ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಬಂದು ವೀಕ್ಷಿಸಿದ್ದಾರೆ. ಅನೇಕ ಸಂಗೀತ ಕಲಾವಿದರು ಸಂಗೀತ ಪರಿಕರಗಳನ್ನು ನೋಡಿ ಸಂತೋಷ ವ್ಯಕ್ತಪಡಿಸಿರುವುದು ಸಂತಸ ತಂದಿದೆ ಎಂದು ಮನೋಜ ಹಾನಗಲ್‌ ತಿಳಿಸಿದರು.

ಸಂಗೀತ ಪ್ರಿಯರ ಮೆಚ್ಚುಗೆ
ಪದ್ಮವಿಭೂಷಣ ಡಾ. ಗಂಗೂ ಬಾಯಿ ಹಾನಗಲ್ಲ ವಸ್ತು ಸಂಗ್ರಹಾಲಯವನ್ನು ಹುಬ್ಬಳ್ಳಿಯ ದೇಶಪಾಂಡೆ ನಗರದ ಗಂಗಜ್ಜಿಯ ಮನೆಯಲ್ಲಿ ಸ್ಥಾಪಿಸಲಾಗಿದೆ, ಭಾರತಾದ್ಯಂತ ಸಂಚರಿಸಿ ಆನೇಕ ಸಂಗೀತ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಅನೇಕ ಖ್ಯಾತ ಸಂಗೀತಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮನೋಜ ಬಾಬುರಾಜ್ ಹಾನಗಲ್ಲ ಅವರು ಹೇಳಿದರು.

* *

ನಮ್ಮ ಮನೆಯಲ್ಲಿರುವ 80 ವರ್ಷಗಳ ಹಿಂದಿನ ಪುರಾತನ ವೀಣೆಯನ್ನು ಈ ಸಂಗ್ರಹಾಲಯಕ್ಕೆ ನೀಡುವ ಯೋಚನೆ ಇದೆ.
ವಿಶಾಲಾಕ್ಷಿ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT