ನಂಗಲಿ

ರೋಗಗ್ರಸ್ಥವಾದ ಆರೋಗ್ಯ ಕೇಂದ್ರ

‘ಆರೋಗ್ಯ ಕೇಂದ್ರವು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದರಿಂದ ಹಳೆ ಕಟ್ಟಡ ನಿರುಪಯುಕ್ತವಾಗಿದೆ. ಕಟ್ಟಡದಲ್ಲಿ ಆವರಣದಲ್ಲಿ ಕಸ ವಿಲೇವಾರಿ ಮಾಡದಂತೆ ಸ್ಥಳೀಯರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಗುಡಿಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಹಳೆ ವಸತಿ ಗೃಹದ ಬಳಿ ಕಟ್ಟಡ ನಿರ್ಮಾಣ ಸಾಮಗ್ರಿ ಮತ್ತು ಸೌದೆಗಳನ್ನು ರಾಶಿ ಹಾಕಿರುವುದು.

ನಂಗಲಿ: ಇಲ್ಲಿಗೆ ಸಮೀಪದ ಗುಡಿಪಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡವು ಮೂಲಸೌಕರ್ಯ ಸಮಸ್ಯೆಯಿಂದ ರೋಗಗ್ರಸ್ಥವಾಗಿದೆ. ಅಕ್ಕಪಕ್ಕದ ನಿವಾಸಿಗಳು ಹಾಗೂ ಕೋಳಿ ಅಂಗಡಿಗಳ ಕೆಲಸಗಾರರು ತ್ಯಾಜ್ಯವನ್ನು ಕಟ್ಟಡದ ಆವರಣದಲ್ಲಿ ವಿಲೇವಾರಿ ಮಾಡುತ್ತಿದ್ದು, ನೈರ್ಮಲ್ಯ ಸಮಸ್ಯೆ ಎದುರಾಗಿದೆ. ತ್ಯಾಜ್ಯವು ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳು ಕೇಂದ್ರದೊಳಗೆ ಹೋಗಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗುಡಿಪಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಈ ಹಿಂದೆ ವೈದ್ಯಕೀಯ ಸೇವೆಗಾಗಿ ತಾಲ್ಲೂಕು ಕೇಂದ್ರ ಮುಳಬಾಗಿಲಿನ ಆಸ್ಪತ್ರೆಗಳಿಗೆ ಹೋಗಬೇಕಿತ್ತು. ಈ ಭಾಗದ ಜನರ ಅನುಕೂಲಕ್ಕಾಗಿ ಮೂರು ವರ್ಷಗಳ ಹಿಂದೆ ಗುಡಿಪಲ್ಲಿ ಗ್ರಾಮದಲ್ಲೇ ಹೊಸ ಕಟ್ಟಡ ನಿರ್ಮಿಸಿ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಲಾಯಿತು.

ಹೀಗಾಗಿ ಹಳೆಯ ಕಟ್ಟಡ ಮತ್ತು ಶುಶ್ರೂಷಕಿಯರ ವಸತಿ ಗೃಹಗಳನ್ನು ಖಾಲಿ ಬಿಡಲಾಗಿದ್ದು, ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಮದ್ಯವ್ಯಸನಿಗಳು, ಧೂಮಪಾನಿಗಳು ಹಾಗೂ ಪುಂಡು ಪೋಕರಿಗಳು ಕಟ್ಟಡವನ್ನು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಕಟ್ಟಡಕ್ಕೆ ಮತ್ತು ವಸತಿ ಗೃಹಗಳಿಗೆ ಬಣ್ಣ ಬಳಿದು ವರ್ಷವೇ ಕಳೆದಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡವು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವಂತಿದೆ. ವಸತಿ ಗೃಹಗಳಲ್ಲಿ ಕಳೆ ಗಿಡಗಳು ಬೆಳೆದಿವೆ.

‘ಆರೋಗ್ಯ ಕೇಂದ್ರವು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದರಿಂದ ಹಳೆ ಕಟ್ಟಡ ನಿರುಪಯುಕ್ತವಾಗಿದೆ. ಕಟ್ಟಡದಲ್ಲಿ ಆವರಣದಲ್ಲಿ ಕಸ ವಿಲೇವಾರಿ ಮಾಡದಂತೆ ಸ್ಥಳೀಯರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಕಟ್ಟಡವನ್ನು ದುರಸ್ತಿ ಮಾಡಿ ಅಂಗನವಾಡಿ ಕೇಂದ್ರಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಗುಡಿಪಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡವು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರ್ವಹಣೆ ಸಮಸ್ಯೆಯಿಂದ ನಿರುಪಯುಕ್ತವಾಗಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಈ ಕಟ್ಟಡವನ್ನು ದುರಸ್ತಿಪಡಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಕೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ನಗರವಾಸಿಗಳ ವರ್ತುಲ ರಸ್ತೆಯ ಕನಸಿಗೆ ಜೀವ

ಕೋಲಾರ
ನಗರವಾಸಿಗಳ ವರ್ತುಲ ರಸ್ತೆಯ ಕನಸಿಗೆ ಜೀವ

22 Jan, 2018
ನೂತನ ಕೆಜಿಎಫ್‌ ತಾಲ್ಲೂಕಿಗೆ ಕೆ.ಸಿ.ರೆಡ್ಡಿ ಹೆಸರು

ಕೋಲಾರ
ನೂತನ ಕೆಜಿಎಫ್‌ ತಾಲ್ಲೂಕಿಗೆ ಕೆ.ಸಿ.ರೆಡ್ಡಿ ಹೆಸರು

20 Jan, 2018
ಮಾವಿನ ಮಡಿಲಲ್ಲಿ ಉಗನಿ ಹೂ ಹಬ್ಬ

ಕೋಲಾರ
ಮಾವಿನ ಮಡಿಲಲ್ಲಿ ಉಗನಿ ಹೂ ಹಬ್ಬ

20 Jan, 2018
21 ನಾಮನಿರ್ದೇಶಿತ ಸದಸ್ಯರಿಗೆ ಸಾಮೂಹಿಕ ಕೋಕ್‌

ಕೋಲಾರ
21 ನಾಮನಿರ್ದೇಶಿತ ಸದಸ್ಯರಿಗೆ ಸಾಮೂಹಿಕ ಕೋಕ್‌

19 Jan, 2018

ಕೋಲಾರ
ಅಕ್ಷರ ದಾಸೋಹ ಯೋಜನೆಯಲ್ಲಿ ರಾಜ್ಯ ಪ್ರಥಮ

‘ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಅಕ್ಷರ ದಾಸೋಹ ಹಾಗೂ ಕ್ಷೀರಭಾಗ್ಯ ಯೋಜನೆ ಮುಖ್ಯವಾಗಿವೆ’

19 Jan, 2018