ಚನ್ನಗಿರಿ

ಹಸಿ ಕಡಲೆ ಗಿಡಗಳಿಗೆ ಭಾರಿ ಬೇಡಿಕೆ

ಸಾಮಾನ್ಯವಾಗಿ ಚಳಿಗಾಲದಲ್ಲಿ ಈ ಹಸಿ ಕಡಲೆ ಗಿಡಗಳ ಮಾರಾಟ ಕಾರ್ಯ ನಡೆಯುತ್ತದೆ. ಈ ಹಸಿ ಕಡಲೆಯನ್ನು ಹಿಂಗಾರು ಬೆಳೆಯನ್ನಾಗಿ ಬೆಳೆಯಲಾಗುತ್ತದೆ.

ಚನ್ನಗಿರಿ ಪಟ್ಟಣದ ಮೇಲಿನ ಬಸ್‌ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಸಿ ಕಡಲೆ ಇರುವ ಗಿಡಗಳನ್ನು ಆಯ್ದು ಕಟ್ಟುವ ಮೂಲಕ ಮಾರಾಟಕ್ಕೆ ಸಿದ್ದ ಮಾಡುತ್ತಿರುವುದು

ಚನ್ನಗಿರಿ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಬಸ್‌ನಿಲ್ದಾಣಗಳಲ್ಲಿ ಹಸಿ ಕಡಲೆ ಗಿಡಗಳ ಮಾರಾಟ ಭರದಿಂದ ನಡೆಯುತ್ತಿದೆ. ಆದರೆ ಈ ಬಾರಿ ಹಸಿ ಕಡಲೆ ಗಿಡದ ದರವನ್ನು ಕೇಳಿ ಜನರಿಗೆ ಶಾಕ್ ಹೊಡೆದಂತಾಗಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಈ ಹಸಿ ಕಡಲೆ ಗಿಡಗಳ ಮಾರಾಟ ಕಾರ್ಯ ನಡೆಯುತ್ತದೆ. ಈ ಹಸಿ ಕಡಲೆಯನ್ನು ಹಿಂಗಾರು ಬೆಳೆಯನ್ನಾಗಿ ಬೆಳೆಯಲಾಗುತ್ತದೆ. ತಾಲ್ಲೂಕಿನಲ್ಲಿ ಪ್ರತಿ ವರ್ಷ ಮೆಕ್ಕೆಜೋಳ ಬೆಳೆ ಕಟಾವು ಮಾಡಿದ ನಂತರ ಈ ಹಸಿ ಕಡಲೆಯನ್ನು ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ತಡವಾಗಿ ಬಿದ್ದ ಕಾರಣದಿಂದಾಗಿ ಹಿಂಗಾರು ಹಂಗಾಮಿನ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ.

ಪ್ರತಿ ವರ್ಷ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಕಪ್ಪು ಮಣ್ಣಿನ ಭೂಮಿಯಲ್ಲಿ ಹಸಿ ಕಡಲೆಯನ್ನು ಬೆಳೆಯುತ್ತಿದ್ದರು. ಆದರೆ ಈ ಬಾರಿ 5 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹಸಿ ಕಡಲೆ ಬಿತ್ತನೆಯಾಗಿದೆ. ಈ ಕಾರಣದಿಂದಾಗಿ ಮಾರಾಟಗಾರರು ನೆರೆಯ ಜಿಲ್ಲೆಗಳಿಂದ ಹಸಿಕಡಲೆ ಗಿಡಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷ ಒಂದು ಕೆ.ಜಿ. ಹಸಿ ಕಡಲೆ ಗಿಡ ₹ 20ರಿಂದ ₹ 25 ದರ ಇತ್ತು. ಆದರೆ ಈ ಬಾರಿ ಒಂದು ಕೆ.ಜಿ ಹಸಿ ಕಡಲೆ ಗಿಡದ ಬೆಲೆ ₹ 60ಕ್ಕೆ ಮಾರಾಟವಾಗುತ್ತಿದೆ. ಜನರು ಅನಿವಾರ್ಯವಾಗಿ ದರ ಹೆಚ್ಚಿದ್ದರೂ ಹಸಿ ಕಡಲೆ ಗಿಡಗಳನ್ನು ಖರೀದಿಸುತ್ತಿರುವುದರಿಂದ ಭಾರಿ ಬೇಡಿಕೆ ಬಂದಿದೆ.

‘ನೆರೆಯ ಹಾವೇರಿ, ರಾಣೆಬೆನ್ನೂರು ಪಟ್ಟಣದಿಂದ ಹಸಿ ಕಡಲೆಯನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಅಲ್ಲಿ ಒಂದು ಕೆ.ಜಿ. ಹಸಿ ಕಡಲೆ ದರ ₹ 30 ಇದ್ದು, ಅಲ್ಲಿಂದ ತರುವುದಕ್ಕೆ ಸಾರಿಗೆ ವೆಚ್ಚ ಸೇರಿ ನಮಗೆ ₹ 40 ದರ ತಗಲುತ್ತದೆ. ಸ್ಥಳೀಯವಾಗಿ ₹ 60ರ ದರದಲ್ಲಿ ಹಸಿ ಕಡಲೆಯನ್ನು ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮಾರಾಟಗಾರ ಅಕ್ರಮ್‌ ಭಾಷಾ.

Comments
ಈ ವಿಭಾಗದಿಂದ ಇನ್ನಷ್ಟು
ಟೊಮೆಟೊ ಸುರಿದು ರೈತರ ಪ್ರತಿಭಟನೆ

ದಾವಣಗೆರೆ
ಟೊಮೆಟೊ ಸುರಿದು ರೈತರ ಪ್ರತಿಭಟನೆ

19 Jan, 2018
ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

ಸಂತೇಬೆನ್ನೂರು
ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

19 Jan, 2018

ನ್ಯಾಮತಿ
ಹೆದ್ದಾರಿ ಪಕ್ಕದಲ್ಲಿ ವಿದ್ಯಾರ್ಥಿಗಳ ಆಟ

‘ಪ್ರತಿದಿನ ಬೆಳಿಗ್ಗೆ ಶಾಲೆಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಮುಖ್ಯದ್ವಾರದ ಗೇಟಿನ ಬೀಗ ತೆಗೆಯುವ ತನಕ ರಸ್ತೆಯ ಅಕ್ಕಪಕ್ಕ ಆಟವಾಡುವುದು, ಓಡುವುದು ಹಾಗೂ ರಸ್ತೆ ಬದಿಯ...

19 Jan, 2018
ಬುಳ್ಳಾಪುರ: ಗೋಮಾಳ ಜಮೀನಿನಲ್ಲಿ ಮನೆ ತೆರವಿಗೆ ತಾಲ್ಲೂಕು ಆಡಳಿತ ಯತ್ನ; ಗ್ರಾಮಸ್ಥರ ವಿರೋಧ

ಹರಿಹರ ತಾಲ್ಲೂಕು
ಬುಳ್ಳಾಪುರ: ಗೋಮಾಳ ಜಮೀನಿನಲ್ಲಿ ಮನೆ ತೆರವಿಗೆ ತಾಲ್ಲೂಕು ಆಡಳಿತ ಯತ್ನ; ಗ್ರಾಮಸ್ಥರ ವಿರೋಧ

18 Jan, 2018

ಹರಿಹರ
ಬುಳ್ಳಾಪುರ: ಮನೆ ತೆರವಿಗೆ ಗ್ರಾಮಸ್ಥರ ವಿರೋಧ

ಗ್ರಾಮದಲ್ಲಿರುವ ಗೋಮಾಳ ಜಮೀನನ್ನು ಕೆಲವರು ಅಕ್ರಮಿಸಿಕೊ ಳ್ಳುತ್ತಿದ್ದಾರೆ. ಅಂಥವರಿಗೆ ಅಧಿಕಾರಿಗಳು, ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ನೀಡುತ್ತಾರೆ ಎಂದು ಗ್ರಾಮಸ್ಥ ಪ್ರದೀಪ್‌ ದೂರಿದರು.

18 Jan, 2018