ನಿರೀಕ್ಷೆ

ಮಕ್ಕಳ ಬೆಳವಣಿಗೆ ಮತ್ತು ಸಾಮಾಜೀಕರಣ

ಸಂಸ್ಕೃತಿಯ ಭಾಗವಾಗುವುದನ್ನು ಕಲಿಯುವ ಸಾಮಾಜಿಕ ಪ್ರಕ್ರಿಯೆಯೇ ಸಾಮಾಜೀಕರಣ. ಸಾಮಾಜಿಕತೆಯ ಮೂಲಕ ತಮ್ಮ ಸಂಸ್ಕೃತಿಯ ಭಾಷೆ, ದೈನಂದಿನ ಜೀವನದಲ್ಲಿ ತಮ್ಮ ಪಾತ್ರದ ಅಗತ್ಯತೆ ಮತ್ತು ಸಮಾಜದ ನಿರೀಕ್ಷೆಯ ಬಗ್ಗೆ ಕಲಿಯುವುದೇ ಸಾಮಾಜೀಕರಣ.

ಮಕ್ಕಳ ಬೆಳವಣಿಗೆ ಮತ್ತು ಸಾಮಾಜೀಕರಣ

ಮಕ್ಕಳ ವರ್ತನೆ ಮನೆಯವರನ್ನು ಅವಲಂಬಿಸಿದೆ. ಮಕ್ಕಳನ್ನು ಹೆಚ್ಚು ಹೆಚ್ಚು ಸಾಮಾಜೀಕರಣಗೊಳಿಸಿದಷ್ಟು ಮಕ್ಕಳು ಪ್ರಪಂಚಜ್ಞಾನವನ್ನು ಬೆಳೆಸಿಕೊಳ್ಳುತ್ತಾರೆ; ಇತರರೊಂದಿಗೆ ಹೇಗೆ ಬೆರೆಯಬೇಕು ಎಂಬುದನ್ನು ಕಲಿಯುತ್ತಾರೆ. ದಿನದ ಹೆಚ್ಚು ಸಮಯ ಮನೆಯಿಂದ ಹೊರಗೆ ಇದ್ದು, ವಠಾರದ ಮಕ್ಕಳೊಂದಿಗೆ ಆಟವಾಡುವ ಮಕ್ಕಳಿರುತ್ತಾರೆ. ಅವರಿಗೆ ಯಾರೊಂದಿಗೆ ಹೇಗಿರಬೇಕೆಂಬುದನ್ನು ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದ ಅವರ ವ್ಯವಹಾರ ಜ್ಞಾನ ಹೆಚ್ಚುತ್ತದೆ. ಇದನ್ನೇ ಸಾಮಾಜೀಕರಣ ಎನ್ನುವುದು. ಸಾಮಾಜೀಕರಣಗೊಂಡ ಮಕ್ಕಳು ಎಲ್ಲರೊಂದಿಗೆ ಕೂಡಿ ಆಡುವ, ಎಲ್ಲರೊಂದಿಗೆ ಬೆರೆಯುವ ಗುಣವನ್ನು ಹೊಂದಿರುತ್ತಾರೆ.

ಸಾಮಾಜೀಕರಣ ಎಂದರೇನು?

ಸಂಸ್ಕೃತಿಯ ಭಾಗವಾಗುವುದನ್ನು ಕಲಿಯುವ ಸಾಮಾಜಿಕ ಪ್ರಕ್ರಿಯೆಯೇ ಸಾಮಾಜೀಕರಣ. ಸಾಮಾಜಿಕತೆಯ ಮೂಲಕ ತಮ್ಮ ಸಂಸ್ಕೃತಿಯ ಭಾಷೆ, ದೈನಂದಿನ ಜೀವನದಲ್ಲಿ ತಮ್ಮ ಪಾತ್ರದ ಅಗತ್ಯತೆ ಮತ್ತು ಸಮಾಜದ ನಿರೀಕ್ಷೆಯ ಬಗ್ಗೆ ಕಲಿಯುವುದೇ ಸಾಮಾಜೀಕರಣ.

ಲಾಭಗಳು

* ಸಂವಹನ (ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ) ಕೌಶಲ ಹೆಚ್ಚುತ್ತದೆ.

* ವಿಶ್ಲೇಷಣಾತ್ಮಕ ಮತ್ತು ಸಂಶೋಧನಾ ಮನೋಭಾವದ ಬೆಳವಣಿಗೆ.

* ಹೊಂದಾಣಿಕೆಯ ಮಹತ್ವವನ್ನು ಅರಿಯುತ್ತಾರೆ.

* ವೈಯಕ್ತಿಕ ಸಾಮರ್ಥ್ಯ ಹೆಚ್ಚುತ್ತದೆ.

* ತೀರ್ಮಾನಗಳನ್ನು ಕೈಗೊಳ್ಳುವ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ.

* ಯೋಜನೆ, ಸಂಘಟನಾ ಚತುರತೆಯನ್ನು ಗಳಿಸುತ್ತಾರೆ.

* ನಾಯಕತ್ವ ಮತ್ತು ನಿರ್ವಹಣ–ಕೌಶಲಗಳು ಬೆಳೆಯುತ್ತವೆ.

* ಧನಾತ್ಮಕ ಮತ್ತು ರಚನಾತ್ಮಕ ಮಾನವೀಯ ಸಂಬಂಧಗಳು ನಿರ್ಮಾಣಗೊಳ್ಳುತ್ತವೆ.

* ಮನಸ್ಸು ನೈಜ ಆಲೋಚನೆಗಳನ್ನು ಆಕ್ರಮಿಸಿಕೊಳ್ಳುವುದರಿಂದ ಮಾನಸಿಕ ಕಾರ್ಯನಿರ್ವಹಣೆ ಹೆಚ್ಚುತ್ತದೆ.

* ‌ಒತ್ತಡ ಮತ್ತು ಆತಂಕಗಳು ದೂರವಾಗುತ್ತವೆ. ಖಿನ್ನತೆ ಆವರಿಸುವುದಿಲ್ಲ.

* ವಿವಿಧ ರೀತಿಯ ಜನರನ್ನು ಮತ್ತು ಅವರ ಆಲೋಚನಾ ಕ್ರಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

* ಜಗತ್ತನ್ನು ಮುಖಾಮುಖಿಯಾಗಿ ಎದುರಿಸುವುದನ್ನು ಕಲಿಸುತ್ತದೆ. ಇದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.

* ಸ್ನೇಹಿತರು ಅಥವಾ ಕುಟುಂಬದವರ ಕಷ್ಟಕಾಲವನ್ನು ನಿವಾರಿಸಲು ಸಹಾಯ ಮಾಡುತ್ತದೆ.

* ಸಹಚರರ ಪ್ರೀತಿ ವಿಶ್ವಾಸ ಮತ್ತು ಪ್ರಚೋದನೆಗಳಿಂದ ಜೀವನೋತ್ಸಾಹ ಹೆಚ್ಚುತ್ತದೆ. ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿಡುತ್ತದೆ.

* ಜೀವನವನ್ನು ಕಟ್ಟಿಕೊಳ್ಳುವ ಜೀವನಕಲೆ ತಿಳಿಯುತ್ತದೆ.

ಮಗುವಿನ ಮನಸ್ಸು ಅರಿಯಿರಿ

* ವಿವಿಧ ಸಂದರ್ಭಗಳಲ್ಲಿ ಮಗುವಿಗೆ ಹೊಸ ಜನರನ್ನು ಪರಿಚಯಿಸಿ. ಅವರ ಸಂಬಂಧಗಳನ್ನು ತಿಳಿಸಿ.

* ಕುಟುಂಬದ ಒಳಗೆ ಮತ್ತು ಹೊರಗೆ ಹಿರಿಯರಿಗೆ ಮತ್ತು ಕಿರಿಯರಿಗೆ ಗೌರವ ನೀಡುವ ಮೂಲಕ ಪ್ರತಿವ್ಯಕ್ತಿಯನ್ನು ಗೌರವಿಸಿ.

* ಸಾಮಾಜಿಕ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮಗುವಿಗೆ ಅವಕಾಶ ನೀಡಿ.

* ಮಗುವಿನ ಆರಂಭದ ಭಯ ಗೆಲುವಿನಲ್ಲಿ ಅಂತ್ಯ ಕಾಣುವುದನ್ನು ಖಚಿತಪಡಿಸಿ.

* ಮಗುವಿನಲ್ಲಿ ಭಾವನೆಗಳು ಬೆಳೆಯಲು ಸಹಾಯ ಮಾಡಿ. ಮಗುವಿನ ಅಂತರ್ಮುಖಿತ್ವ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ.

* ಮಗುವಿನಲ್ಲಿ ಧನಾತ್ಮಕ ಸ್ವಾಭಿಮಾನ ಮೂಡಿಸಿ ಸ್ವಾವಲಂಬಿಯಾಗುವಂತೆ ಮಾಡಿ.

* ಮಗುವಿನ ನಾಚಿಕೆ ಸ್ವಾಭಾವವನ್ನು ಹೊಡೆದೋಡಿಸಿ.

* ಮಗುವಿನ ಸ್ನೇಹಿತರ ಮೇಲೆ ನಿಗಾ ಇರಲಿ.

* ಸಮಯ ದೊರೆತಾಗಲೆಲ್ಲ ವೈಯಕ್ತಿಕ ಅಭಿವೃದ್ದಿಯ ಕುರಿತ ಘಟನಾವಳಿಗಳನ್ನು ಹೇಳಿ.

* ಮಗುವಿನ ಮನೋಧರ್ಮ ಕುರಿತು ಮೆಚ್ಚುಗೆ ವ್ಯಕ್ತಿಪಡಿಸಿ. ಸಂಭಾವ್ಯ ವಿಚಿತ್ರ ಪರಿಸ್ಥಿತಿಯನ್ನು ಎದುರಿಸಲು ಸಿದ್ಧಗೊಳಿಸಿ.

* ಮಗುವಿನಲ್ಲಿ ಹಾಸ್ಯಪ್ರಜ್ಞೆಯನ್ನು ಬೆಳಸಿ.

* ಸಾಮಾಜಿಕ ಮಾಲ್ಯಗಳ ಕುರಿತು ಮಗುವಿನೊಂದಿಗೆ ಮಾತನಾಡಿ. ಸಾಮಾಜಿಕ ಗುರಿಯನ್ನು ಹಾಕಿಕೊಡಿ.

* ಸಾಮಾಜಿಕ ಗುರಿಗಳನ್ನು ಬಲಪಡಿಸಲು ಸಹಾಯ ಮಾಡಿ.

* ಇದಕ್ಕೆ ಶಿಕ್ಷಕರು ಮತ್ತು ಸಲಹೆಗಾರರ ಮಾರ್ಗದರ್ಶನ ಪಡೆಯಿರಿ. ಸಾಮಾಜಿಕ ಕೌಶಲಗಳನ್ನು ಅಭ್ಯಾಸ ಮಾಡಿಸಿ.

* ಮಗು ಇತರ ಮಕ್ಕಳೊಂದಿಗೆ ಬೆರೆಯುವಾಗ ಖರ್ಚು–ವೆಚ್ಚಗಳ ಮೇಲ್ವಿಚಾರಣೆ ಇರಲಿ.

* ಮಗುವಿಗೆ ಇತರರ ಭಾವನೆಗಳು ಮತ್ತು ಪ್ರತಿಕ್ರಿಯೆಗಳ ಬಗ್ಗೆ ಯೋಚಿಸಲು ಅವಕಾಶ ಮಾಡಿಕೊಡಿ.

*

(ಆರ್.ಬಿ.ಗುರುಬಸವರಾಜ ಹೊಳಗುಂದಿ)

Comments
ಈ ವಿಭಾಗದಿಂದ ಇನ್ನಷ್ಟು
ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

ಒತ್ತಡ
ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

14 Mar, 2018
‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

ನಿಮ್ಮ ಪ್ರಶ್ನೆ ನಮ್ಮ ಉತ್ತರ
‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

12 Mar, 2018
ಸಂತುಲಿತ ಶಿಕ್ಷಣದ ದಾರಿಯಲ್ಲಿ...

ಶಿಕ್ಷಣ
ಸಂತುಲಿತ ಶಿಕ್ಷಣದ ದಾರಿಯಲ್ಲಿ...

12 Mar, 2018
ಪ್ರಜಾವಾಣಿ ಕ್ವಿಜ್ 13

ಶಿಕ್ಷಣ
ಪ್ರಜಾವಾಣಿ ಕ್ವಿಜ್ 13

12 Mar, 2018
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

ಶಿಕ್ಷಣ
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

5 Mar, 2018