‘ಸಂವಿಧಾನದ ಆಶಯಕ್ಕೆ ಧಕ್ಕೆ ಸಲ್ಲ’

‘ಇಡೀ ವಿಶ್ವಕ್ಕೆ ಮಾದರಿಯಾಗಿ ನಮ್ಮ ದೇಶದ ಸಂವಿಧಾನ ರೂಪುಗೊಳ್ಳುವಲ್ಲಿ ಅಂಬೇಡ್ಕರ್‌ ಅವರ ಪಾತ್ರ ಮಹತ್ವದ್ದಾಗಿದೆ. ಸಂವಿಧಾನ ಅಂಗೀಕರಿಸಿದ ದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಆಚರಿಸಲಾಗುತ್ತಿದೆ.

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ದಲಿತ ಸಂಘಟನೆ ವಿಚಾರಗಳು, ಸಂಘಟನೆಯ ಮಹತ್ವವನ್ನು ಯುವಕರು ಗ್ರಾಮೀಣ ಭಾಗದ ಜನರನ್ನು ತಲುಪುವಂತೆ ಮಾಡಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ರಾಜ್ಯ ಅಧ್ಯಕ್ಷ ಡಿ.ರಾಜಣ್ಣ ಹೇಳಿದರು.

ಅವರು ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಭಾನುವಾರ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚಣೆ ಹಾಗೂ ವಿಶ್ವ ಜ್ಞಾನ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಇಡೀ ವಿಶ್ವಕ್ಕೆ ಮಾದರಿಯಾಗಿ ನಮ್ಮ ದೇಶದ ಸಂವಿಧಾನ ರೂಪುಗೊಳ್ಳುವಲ್ಲಿ ಅಂಬೇಡ್ಕರ್‌ ಅವರ ಪಾತ್ರ ಮಹತ್ವದ್ದಾಗಿದೆ. ಸಂವಿಧಾನ ಅಂಗೀಕರಿಸಿದ ದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಆಚರಿಸಲಾಗುತ್ತಿದೆ. ಸಂವಿಧಾನದ ಆಶಯಕ್ಕೆ ಧಕ್ಕೆ ತಾರದೆ, ಅದರಲ್ಲಿನ ಸಮಾನತೆ, ಜಾತ್ಯತೀತ ತತ್ವಗಳನ್ನು ಎಲ್ಲರೂ ಪಾಲಿಸಬೇಕು. ಆಡಳಿತ ನಡೆಸುವವರು ಇದನ್ನು ಸಮಪರ್ಕವಾಗಿ ಜಾರಿಗೆ ತರಬೇಕು’ ಎಂದು ಹೇಳಿದರು.

ದಲಿತ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಲು ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಇವೆ. ಇವುಗಳನ್ನು ಗ್ರಾಮೀಣ ಜನರಿಗೆ ತಲುಪುವಂತೆ ಮಾಡಬೇಕು. ಇದರಿಂದ ಹಲವಾರು ಜನ ಶಿಕ್ಷಣ ಹೊಂದಲು ಹಾಗೂ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಲಿದೆ. ಸಂಘಟನೆಯಿಂದ ಸಾಧನೆ ಮಾಡಲು ಹಲವಾರು ಅವಕಾಶಗಳಿವೆ. ಇದನ್ನು ಮನಗಂಡು ಯುವ ಸಮುದಾಯ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‌ ಮಾತನಾಡಿ, ದಲಿತ ಸಂಘಟನೆ ರಾಜ್ಯದಲ್ಲಿ ಉದಯವಾದ ಉದ್ದೇಶ ಈಡೇರುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾವಂತ ಸಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾತ್ರ ದಲಿತರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಸಮಾಜಸೇವಕ ಟಿ.ರಾಮಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಕನ್ಯಾಕುಮಾರಿಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್‌, ಟಿಎಪಿಎಂಸಿಎಸ್‌ ನಿರ್ದೇಶಕ ನಾರನಹಳ್ಳಿ ಎಂ.ಗೋವಿಂದರಾಜು, ಡಿಎಸ್‌ಎಸ್‌ ಕೆಂಪು ಸೇನೆ ರಾಜ್ಯ ಉಪಾಧ್ಯಕ್ಷ ಗುರುಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್‌, ತಾಲ್ಲೂಕು ಅಧ್ಯಕ್ಷ ಹರ್ಷ, ದೊಡ್ಡಬೆಳವಂಗಲ ಹೋಬಳಿ ಗೌರವ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ರಾಮು, ಆನಂದ್‌, ಮಂಜುನಾಥ್‌ ಹಾಜರಿದ್ದರು. ಸಮಾರಂಭಕ್ಕು ಮುನ್ನ ಬೆಳ್ಳಿ ರಥದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರದೊಂದಿಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸ್ವಾತಂತ್ರ್ಯ ಸ್ವೇಚ್ಛೆಯಾಗದಂತೆ ಎಚ್ಚರವಹಿಸಿ

ಚಿಕ್ಕಬಳ್ಳಾಪುರ
ಸ್ವಾತಂತ್ರ್ಯ ಸ್ವೇಚ್ಛೆಯಾಗದಂತೆ ಎಚ್ಚರವಹಿಸಿ

26 Apr, 2018
111 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ:ಡಿ.ಸಿ.

ಬಳ್ಳಾರಿ
111 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ:ಡಿ.ಸಿ.

26 Apr, 2018

ಸಂಡೂರು
‘ಜೆಸಿಬಿ’ ಪಕ್ಷಗಳಿಗೆ ಜನರ ಕಾಳಜಿ ಇಲ್ಲ

ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣವಾಗಿ ಚರ್ಚಿಸಲು, ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು, ಜನರ ಬದುಕನ್ನು ಹಸನುಗೊಳಿಸಲು ಜನಾಂದೋಲನಗಳ ಮಹಾಮೈತ್ರಿ ಈ...

15 Apr, 2018
ಕಿರವತ್ತಿ ಬಳಿ ಗಾಯಾಳು ಆನೆ ಸಾವು

ಯಲ್ಲಾಪುರ
ಕಿರವತ್ತಿ ಬಳಿ ಗಾಯಾಳು ಆನೆ ಸಾವು

13 Apr, 2018

ದಾವಣಗೆರೆ
ಮತಯಂತ್ರ ವಿಶ್ವಾಸಾರ್ಹ, ಅನುಮಾನ ಬೇಡ

ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ವಿದ್ಯುನ್ಮಾನ ಮತ ಯಂತ್ರ ಮತ್ತು ಮತ ಖಾತ್ರಿ ಯಂತ್ರ (ವಿವಿ ಪ್ಯಾಟ್‌) ಬಳಸಲಾಗುತ್ತಿದ್ದು, ಮತದಾರ ತಾನು ಚಲಾಯಿಸಿದ...

11 Apr, 2018