ಧಾರವಾಡ

‘ಕಬ್ಬಿಣಾಂಶ ಕೊರತೆ; ತಾಯಂದಿರ ಮರಣ ಹೆಚ್ಚಳ’

'ಭಾರತದಲ್ಲಿ ಶೇ 60ರಷ್ಟು ಗರ್ಭಿಣಿ, ಬಾಣಂತಿ ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಕಬ್ಬಿಣಾಂಶ ಕೊರತೆಯಿಂದ ಬಳಲುತ್ತಿದ್ದು, ಇದರಿಂದ ಉಂಟಾಗುವ ರಕ್ತಹೀನತೆ ದೊಡ್ಡ ಸವಾಲಾಗಿ ಪರಿಣಮಿಸಿದೆ'

ಧಾರವಾಡ: 'ಭಾರತದಲ್ಲಿ ಶೇ 60ರಷ್ಟು ಗರ್ಭಿಣಿ, ಬಾಣಂತಿ ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಕಬ್ಬಿಣಾಂಶ ಕೊರತೆಯಿಂದ ಬಳಲುತ್ತಿದ್ದು, ಇದರಿಂದ ಉಂಟಾಗುವ ರಕ್ತಹೀನತೆ ದೊಡ್ಡ ಸವಾಲಾಗಿ ಪರಿಣಮಿಸಿದೆ' ಎಂದು ಪೌಷ್ಟಿಕಾಂಶ ತಜ್ಞೆ, ಕೃವಿವಿ ಪ್ರಾಧ್ಯಾಪಕಿ ಡಾ.ಪುಷ್ಪಾಭಾರತಿ ಅಭಿಪ್ರಾಯಪಟ್ಟರು. ಬೆಳಗಾವಿಯ ಸೇವಕ ಸಂಸ್ಥೆ ಇಲ್ಲಿನ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕಬ್ಬಿಣಾಂಶ ಕೊರತೆ, ರಕ್ತಹೀನತೆಯು ಕಡಿಮೆ ತೂಕದ ಮಕ್ಕಳ ಜನನ, ಶಿಶು ಮರಣ, ಅಂಗವಿಕಲ ಮಕ್ಕಳ ಜನನ ಹಾಗೂ ತಾಯಿ ಮರಣಗಳಿಗೆ ಪ್ರಮುಖ ಕಾರಣವಾಗಿದೆ. ಕಿಶೋರಿಯರಿಗೆ ಶಿಕ್ಷಣದಲ್ಲಿ ಗಮನ ನೀಡಲು ತೊಂದರೆ, ಓದಿನಲ್ಲಿ ನಿರಾಸಕ್ತಿ,  ಹಾಗೂ ಕುಂಠಿತ ಜೀವನೋಲ್ಲಾಸಕ್ಕೆ ಕಾರಣವಾಗಿದೆ' ಎಂದು ಅವರು ಹೇಳಿದರು.

‘ಕಬ್ಬಿಣಾಂಶ ಹೇರಳವಾಗಿರುವ ಹಾಗೂ ಸುಲಭವಾಗಿ ದೊರೆಯುವ ಅನೇಕ ವಿಧದ ಹಸಿರು ಸೊಪ್ಪು ಹಾಗೂ ತರಕಾರಿಗಳ ದಿನನಿತ್ಯದ ಉಪಯೋಗದಿಂದ ರಕ್ತದಲ್ಲಿನ ಕಬ್ಬಿಣಾಂಶ ಕೊರತೆಯನ್ನು ಸುಲಭವಾಗಿ ಪರಿಹರಿಸಬಹುದು’ ಎಂದು ಸಲಹೆ ನೀಡಿದರು.

‘ನಮ್ಮ ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯ, ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಹಾಗೂ ಕುಟುಂಬದಲ್ಲಿ ತಲೆದೋರುವ ಕಲಹಗಳು ಮಹಿಳೆಯರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ' ಎಂದರು.

ಡಾ. ಉಷಾ ಮಳಗಿ, ಡಾ. ಉಮಾ ಕುಲಕರ್ಣಿ, ಅನ್ನಪೂರ್ಣ ಸಂಗಳದ, ಡಾ.ಕಸ್ತೂರಿಬಾ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳ ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕೈಬರಹದ ಮೂಲಕ ಹಿರಿಯರ ನೆನಪು!

ಧಾರವಾಡ
ಕೈಬರಹದ ಮೂಲಕ ಹಿರಿಯರ ನೆನಪು!

20 Jan, 2018
ಚೆಕ್‌ಡ್ಯಾಂ ನಿರ್ಮಾಣ: ಮಾತಿನ ಚಕಮಕಿ

ಧಾರವಾಡ
ಚೆಕ್‌ಡ್ಯಾಂ ನಿರ್ಮಾಣ: ಮಾತಿನ ಚಕಮಕಿ

19 Jan, 2018

ಧಾರವಾಡ
ಕುಟೀರ ತೆರವು ವಿರೋಧಿಸಿ ಪ್ರತಿಭಟನೆ

ತೆರವುಗೊಳಿಸುವ ವೇಳೆ ಕುಟೀರಗಳಲ್ಲಿದ್ದ ಸಾಮಗ್ರಿಗಳನ್ನೂ ಪಾಲಿಕೆ ಸಿಬ್ಬಂದಿಯೇ ತೆಗೆದುಕೊಂಡು ಹೋಗುವ ಮೂಲಕ ನೋವುಂಟು ಮಾಡಿದ್ದಾರೆ.

19 Jan, 2018
ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

ಧಾರವಾಡ
ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

18 Jan, 2018
ಮಗಳ ಗುರುತು ಖಾತ್ರಿಪಡಿಸಿದ ಮಚ್ಚೆ!

ಹುಬ್ಬಳ್ಳಿ
ಮಗಳ ಗುರುತು ಖಾತ್ರಿಪಡಿಸಿದ ಮಚ್ಚೆ!

18 Jan, 2018