ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಒಕ್ಕೂಟ ರಚನೆ

Last Updated 27 ನವೆಂಬರ್ 2017, 9:02 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ವಿಐಎಸ್ಎಲ್, ಎಂಪಿಎಂ ಕಾರ್ಖಾನೆ ರಕ್ಷಣೆ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಗತಿಶೀಲ ಸಂಘಟನೆಗಳ ಒಕ್ಕೂಟ ಸ್ಥಾಪಿಸಲು ಸಮಾನ ಮನಸ್ಕರ ವೇದಿಕೆ ತೀರ್ಮಾನಿಸಿದೆ.

ಹಿರಿಯ ಮುಖಂಡ ರಾಮಕೃಷ್ಣೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಪಕ್ಷ, ಸಂಘಟನೆ ಮುಖಂಡರು ಕ್ಷೇತ್ರದ ಹಿತ ಕಾಪಾಡುವ ಜತೆಗೆ ಭ್ರಷ್ಟಾಚಾರ ತೊಡೆದು ಹಾಕಲು ಸಂಘಟಿತರಾಗುವ ಅಗತ್ಯವಿದೆ ಎಂದು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಒಕ್ಕೂಟದ ರಚನೆಗೆ ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಎಸ್.ಕೆ. ಸುಧೀಂದ್ರ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್, ಬಗರ್ ಹುಕುಂ ಸಮಿತಿ ಚಂದ್ರು, ಎಎಪಿ ಮುಖಂಡರಾದ ರವಿಕುಮಾರ್, ಪರಮೇಶ್ವರಾಚಾರ್, ರೇಣುಕಾನಂದ, ನಾರಾಯಣಗೌಡ, ಸೋಮಣ್ಣ, ಹಬೀಬುಲ್ಲಾ, ಜೋಸೆಫ್, ಮಾಜಿ ನಗರಸಭಾ ಸದಸ್ಯ ಸ್ಟೀಫನ್, ಎಂಪಿಎಂ ಎಸ್ಸಿಎಸ್ಟಿ ಅಸೋಸಿಯೇಷನ್‌ನ ಮಂಜುನಾಥ, ಕ್ರೈಸ್ತ ಒಕ್ಕೂಟದ ಸೆಲ್ವರಾಜ್, ಮುಸ್ಲಿಂ ಸಮಾಜದ ಸರ್ದಾರ್, ಜೈನ್ ಸಮಾಜದ ಹಿತೇಶ್, ದಲಿತ ಸಮಾಜದ ಸಿದ್ದರಾಜು, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ತರುಣ್, ಮಹಾಲಿಂಗಪ್ಪ. ಬಿ.ಎನ್. ರಾಜು, ಮಂಜುನಾಥ, ಪಟ್ಟುರಾಜು,ಖಾದೀರ್ ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮಕೃಷ್ಣೇಗೌಡರು ಕ್ಷೇತ್ರದ ಅಭಿವೃದ್ಧಿ, ಪಕ್ಷಪಾತ ರಹಿತ ಆಡಳಿತಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಲು ಒಕ್ಕೂಟ ವೇದಿಕೆಯಾಗಲಿ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT