ಮಂಗಳವಾರ, 28–11–1967

ಕೋಲಾರ ಬಂಗಾರದ ಗಣಿಯ ಕೇಂದ್ರ ಕಾರ್ಯಾಗಾರದ ಮುಖ್ಯ ಇಂಜಿನಿಯರ್ ಶ್ರೀ ವಿ.ಆರ್. ಸತ್ಯಬೋಧರಾವ್ ಅವರು ಗಣಿ ಕೆಲಸದಲ್ಲಿ ಕ್ರಾಂತಿಯೆಬ್ಬಿಸಬಹುದಾದಂಥ ಸಾಧನವೊಂದನ್ನು ಕಂಡುಹಿಡಿದಿದ್ದಾರೆ.

ಕೆ.ಜಿ.ಎಫ್. ಇಂಜಿನಿಯರಿಂದ ಕ್ರಾಂತಿಕಾರಕ ಸಾಧನ ನಿರ್ಮಾಣ 
ರಾಬರ್ಟ್‌ಸನ್‌ಪೇಟೆ (ಕೆ.ಜಿ.ಎಫ್) ನ. 27– ಕೋಲಾರ ಬಂಗಾರದ ಗಣಿಯ ಕೇಂದ್ರ ಕಾರ್ಯಾಗಾರದ ಮುಖ್ಯ ಇಂಜಿನಿಯರ್ ಶ್ರೀ ವಿ.ಆರ್. ಸತ್ಯಬೋಧರಾವ್ ಅವರು ಗಣಿ ಕೆಲಸದಲ್ಲಿ ಕ್ರಾಂತಿಯೆಬ್ಬಿಸಬಹುದಾದಂಥ ಸಾಧನವೊಂದನ್ನು ಕಂಡುಹಿಡಿದಿದ್ದಾರೆ.

ಗಣಿಗಳ ಭೂಗರ್ಭದಲ್ಲಿ ಕಾರ್ಯಾಚರಣೆಯಲ್ಲಿರುವ ತೊಟ್ಟಿಲುಗಳಿಗೆ ಸಂಬಂಧಿಸಿದ ಯಂತ್ರದ ‘ಓವರ್ ವೈಂಡಿಂಗ್’ನ್ನು ಈ ಸಾಧನದಿಂದ ನಿಲ್ಲಿಸಬಹುದು. ಶ್ರೀ ರಾವ್ ಶೋಧನೆಯಿಂದ ತಯಾರಿಸಿದ ಒಟ್ಟು ನಲವತ್ತು ಯಂತ್ರಗಳನ್ನು ಗಣಿಗಳಲ್ಲಿ ಈಗ ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

ಭಾಷಾ ಶಾಸನಕ್ಕೆ ತಿದ್ದುಪಡಿ ಮಂಡನೆ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ನ. 27–
ಇಂಗ್ಲೀಷ್ ಬಳಕೆಯನ್ನು ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ಅಧಿಕೃತ ಭಾಷಾ ಕಾಯಿದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು.

ದಿವಂಗತ ನೆಹರೂ ಹಾಗೂ ಶಾಸ್ತ್ರಿಯವರ ಆಶ್ವಾಸನೆಗಳಿಗೆ ಈ ಮಸೂದೆ ಶಾಸನಬದ್ಧ ಮಾನ್ಯತೆ ನೀಡುತ್ತದೆ. ಮಂಡನೆಯ ಘಟ್ಟದಲ್ಲಿಯೂ ಸಹ ಈ ಮಸೂದೆಗೆ ತೀವ್ರ ವಿರೋಧವಿತ್ತು. ಆದರೆ ಅದು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿರಲಿಲ್ಲ. ವಿರೋಧ ವ್ಯಕ್ತಪಡಿಸಿದವರು ಏಕೈಕ ಕಾಂಗ್ರೆಸ್ಸಿಗ ಸೇಠ್ ಗೋವಿಂದದಾಸ್, ಜನಸಂಘ ಮತ್ತು ಎಸ್.ಎಸ್.ಪಿ.

ಮಂಗಳೂರು ಬಂದರಿನ ಬಗ್ಗೆ ಡಾ. ರಾವ್ ಭರವಸೆ
ಬೆಂಗಳೂರು, ನ. 27–
ಇನ್ನೆರಡು–ಮೂರು ತಿಂಗಳಲ್ಲಿ ಕೇಂದ್ರದ ಮಂತ್ರಿ ಮಂಡಲ ಮಂಗಳೂರು ಬಂದರು ಅಭಿವೃದ್ಧಿ ಯೋಜನೆಗೆ ಮಂಜೂರಾತಿಯನ್ನು ನೀಡುವ ಭರವಸೆಯನ್ನು ಕೇಂದ್ರದ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ಇಲ್ಲಿ ವ್ಯಕ್ತಪಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಪ್ರಜಾವಾಣಿ: 50 ವರ್ಷಗಳ ಹಿಂದೆ
ಶುಕ್ರವಾರ, 19–4–1968

ಅನಾಸ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಎರಡು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದಾಗ ಹನ್ನೆರಡು ಮಂದಿ ಸತ್ತು, ಆರು ಜನಕ್ಕೆ ಗಾಯವಾಯಿತೆಂದು ಅಧಿಕೃತ ವರದಿಗಳು...

19 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಗುರುವಾರ, 18–4–1968

ಎರಡು ಅಥವಾ ಮೂರು ವಾರಗಳೊಳಗೆ ರಾಜ್ಯದ ಹೊಸ ಮುಖ್ಯಮಂತ್ರಿಯ ಆಯ್ಕೆ ನಡೆಯುವುದು ಎಂಬ ಸ್ಪಷ್ಟ ಸೂಚನೆಯನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ತೆರಳಲಿರುವ ಶ್ರೀ ನಿಜಲಿಂಗಪ್ಪನವರು ಇಂದು...

18 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಮಂಗಳವಾರ, 16–4–1968

ರಾಜ್ಯಾಂಗದ 356ನೇ ವಿಧಿಯ ಪ್ರಕಾರ ರಾಷ್ಟ್ರಪತಿ ಡಾ. ಜಾಕಿರ್‌ಹುಸೇನರು ಘೋಷಣೆಯನ್ನು ಹೊರಡಿಸಿ ಉತ್ತರ ಪ್ರದೇಶ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

16 Apr, 2018
ಸೋಮವಾರ, 15–4–1968

50 ವರ್ಷಗಳ ಹಿಂದೆ
ಸೋಮವಾರ, 15–4–1968

15 Apr, 2018

50 ವರ್ಷಗಳ ಹಿಂದೆ
ಭಾನುವಾರ, 14–4–1968

25 ಪೈಸೆಗಿಂತ ಕಡಿಮೆ ಬೆಳೆ ಆಗುವ ಜಮೀನಿನ ಭೂಕಂದಾಯವನ್ನು ಅದೇ ವರ್ಷ ಮಾಫಿ ಮಾಡಲಾಗುವುದು.

14 Apr, 2018